ನಟಿ ರಶ್ಮಿಕಾ ಮಂದಣ್ಣ ಬರಹ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ತಾನು ಮದುವೆ (Marriage) ಆಗೋ ಹುಡುಗ ‘VD’ ತರಹ ಇರಬೇಕು ಎಂದು ನಟಿ ಬರೆದುಕೊಂಡಿದ್ದಾರೆ. VD ಎಂದರೆ ಏನು ಎನ್ನುವುದನ್ನು ಅವರು ಬರೆದುಕೊಂಡಿದ್ದರೂ, ಅಭಿಮಾನಿಗಳು ಮಾತ್ರ VD ಎಂದರೆ ವಿಜಯ್ ದೇವರಕೊಂಡ (Vijay Devarakonda) ಎನ್ನುತ್ತಿದ್ದಾರೆ.
Advertisement
ರಶ್ಮಿಕಾ ಮಂದಣ್ಣ ಪ್ರಕಾರ ‘ವಿಡಿ’ ಎಂದರೆ ವೆರಿ ಡೇರಿಂಗ್ ಎಂದರ್ಥ. ಆದರೆ, ಅಭಿಮಾನಿಗಳಿಗೆ ‘ವಿಡಿ’ ಎಂದರೆ ವಿಜಯ್ ದೇವರಕೊಂಡ ಎನ್ನುವ ಠಕ್ಕರ್ ಕೊಟ್ಟಿದ್ದಾರೆ. ಈ ಮೂಲಕ ವಿಜಯ್ ದೇವರಕೊಂಡ ಅವರನ್ನು ನೆನಪಿಸಿಕೊಂಡಿದ್ದಾರೆ. ನೀವಿಬ್ಬರೂ ಡೇಟ್ ಮಾಡುತ್ತಿರು ವಿಚಾರವನ್ನು ಒಪ್ಪಿಕೊಳ್ಳಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಡೇಟಿಂಗ್ ವಿಚಾರ ಏನೇ ಇರಲಿ. ಆದರೆ, ಜನಪ್ರಿಯತೆಯ ವಿಷಯದಲ್ಲಿ ಎಲ್ಲಿಯೂ ಹಿಂದೆ ಬಿದ್ದಿಲ್ಲ ರಶ್ಮಿಕಾ ಮಂದಣ್ಣ (Rashmika Mandanna). ಕನ್ನಡದ ನಟಿಗೆ ಮೊದಲ ಬಾರಿ ಅಂಥ ಸ್ಥಾನ ನೀಡಿದ ಆ ಜಾಗಕ್ಕೆ ಸಲಾಂ ಹೊಡೆದಿದ್ದಾರೆ. ಭಾರತದ ಮೂವತ್ತು ಸೆಲೆಬ್ರಿಟಿಗಳ ಮಹಾ ಪಟ್ಟಿಯಲ್ಲಿ ರಶ್ಮಿಕಾ ಕೂಡ ಒಬ್ಬರಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
Advertisement
ರಶ್ಮಿಕಾ ಮಂದಣ್ಣ ಈಗ ಬರೀ ಕನ್ನಡದ ನಟಿ ಅಲ್ಲ. ಕನ್ನಡ ಸಿನಿಮಾಗಳಲ್ಲಿ ಅವರು ನಟಿಸುವುದು ಬಿಟ್ಟು ವರ್ಷಗಳು ಕಳೆದಿವೆ. ಈಗ ಅವರು ನ್ಯಾಶನಲ್ ಲೆವೆಲ್ ಸ್ಟಾರ್. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೆರೆಯುತ್ತಿದ್ದಾರೆ. ‘ಪುಷ್ಪ’ (Pushpa) ಮತ್ತು ‘ಅನಿಮಲ್’ (Animal) ಸಕ್ಸಸ್ ಬಳಿಕ ಅದು ಇನ್ನೂ ಹೆಚ್ಚಾಗಿದೆ. ಇದೀಗ ಅದಕ್ಕೆ ಮಹಾ ಗರಿ ಸಿಕ್ಕಿದೆ. ಅದೇ ಫೋರ್ಬ್ಸ್ ಇಂಡಿಯಾ ಪತ್ರಿಕೆಯ 30 ಸಕ್ಸಸ್‌ಫುಲ್ ಸೆಲೆಬ್ರಿಟಿಗಳ ಪಟ್ಟಿನಲ್ಲಿ ಸಾನ್ವಿ ಕೂಡ ಸ್ಥಾನ ಪಡೆದಿದ್ದಾರೆ. ಕನ್ನಡದ ನಟಿಯೊಬ್ಬರು ಮೊದಲ ಬಾರಿ ಫೋರ್ಬ್ಸ್ ಇಂಡಿಯಾದಲ್ಲಿ ಹೀಗೆ ಹೊಳೆಯುತ್ತಿದ್ದಾರೆ.
‘ಕಿರಿಕ್ ಪಾರ್ಟಿ’ಯಿಂದ (Kirik Party) ಹೊರಟ ರಶ್ಮಿಕಾ ಮೆರವಣಿಗೆ ಟಾಲಿವುಡ್, ಕಾಲಿವುಡ್ (Kollywood) ದಾಟಿ ಬಾಲಿವುಡ್‌ಗೆ ಹೋಗಿ ನಿಂತಿದೆ. ಇನ್ನೇನು ಅಲ್ಲಿ ಆಟ ನಡೆಯಲ್ಲ ಎನ್ನುವ ಹೊತ್ತಿಗೆ ‘ಅನಿಮಲ್’ ಗೆಲುವು ಅದನ್ನು ಸುಳ್ಳು ಮಾಡಿತು. ಹೀಗಾಗಿ ರಶ್ಮಿಕಾ ಬರೋಬ್ಬರಿ ಮೂರು 4 ಕೋಟಿ ಕೋಟಿಪಡೆಯುತ್ತಿದ್ದಾರೆ. ಅದೇನೆ ಇರಲಿ, ಫೋರ್ಬ್ಸ್ ಪಟ್ಟಿಯಲ್ಲಿ (Forbes India) ಜಾಗ ಪಡೆಯುವುದು ಸಾಮಾನ್ಯ ಅಲ್ಲ. ಅದು ರಶ್ಮಿಕಾಗೆ ಸಿಕ್ಕಿದೆ. ಇದು ಕೊಡುವ ಕಿಕ್ಕು ಅಂತಿಂಥದ್ದಲ್ಲ. ಹೀಗಾಗಿ ರಶ್ಮಿಕಾ ಇನ್ನು ಮುಂದೆ ಇನ್ನಷ್ಟು ಸಿನಿಮಾಗಳಲ್ಲಿ ಕಾಣಿಸುತ್ತಾ. ಅವರಿವರಿಗೆ ಹೊಟ್ಟೆ ಉರಿಸುತ್ತಾ ಬೆಳೆಯಲಿ ಎಂಬುದು ಅಭಿಮಾನಿಗಳ ಆಶಯ.