ಆನೇಕಲ್: ಹಸಿ ಕರಗದ ಬಳಿಕ ಆನೇಕಲ್‌ನಲ್ಲಿ (Anekal) ಎರಡನೇ ದಿನ ನಡೆಯುವ ಇತಿಹಾಸ ಪ್ರಸಿದ್ಧ ಧರ್ಮರಾಯಸ್ವಾಮಿ ದೇವಾಲಯದ ಒಣ ಕರಗ (Karaga) ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ.
ಒಣ ಕರಗವನ್ನು ಹೊತ್ತು ಸಾಗಿದ ಅರ್ಚಕ ರಮೇಶ್ ಆನೇಕಲ್‌ನ ರಾಜಬೀದಿಗಳಲ್ಲಿ ನರ್ತನ ಮಾಡುತ್ತಾ ಗತವೈಭವ ನೆನೆಪಿಗೆ ಬರುವಂತೆ ಮಾಡಿದ್ದಾರೆ. ಕರಗ ಮಂಡಿಯೂರಿ ದೇವಾಲಯದಿಂದ ಹೊರ ಬಂದಿದ್ದು, ನಂತರ ಸಂತೆಮಾಳ ಸಮೀಪ ಕೆಂಡದ ಮೇಲೆ ಕರಗ ಹೊತ್ತ ರಮೇಶ್ ನರ್ತನ ಮಾಡಿ, ಬಳಿಕ ವೀರ ವಸಂತನ ಶಿರಶ್ಛೇಧನ ಮುಗಿಸಿ ಆನೇಕಲ್ ಪಟ್ಟಣದ ತಿಲಕ್ ವೃತ್ತ, ಉಳಿ ತಿಗಳರ ಬೀದಿ, ಅಂಬೇಡ್ಕರ್ ಕಾಲೋನಿ, ಕೆಇಬಿ ಕಚೇರಿ, ತಾಲೂಕು ಕಚೇರಿ ರಸ್ತೆ ಮಾರ್ಗವಾಗಿ ಮರಳಿ ದೇವಾಲಯದ ಬಳಿ ಬಂದು ಅಲ್ಲಿ ಕರಗ ನರ್ತನ ನಡೆಯಿತು. ಕರಗ ಸಾಗುತ್ತಿದ್ದ ದಾರಿಯುದ್ದಕ್ಕೂ ಸಾವಿರಾರು ಮಂದಿ ಭಕ್ತಾದಿಗಳು ಕರಗವನ್ನು ನೋಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ
ರಾಜ ಬೀದಿಗಳಲ್ಲಿ ಸಂಚಾರ ಮಾಡಿದ ದ್ರೌಪತಮ್ಮ ದೇವಿ ಕರಗ ಮುಂಜಾನೆ 5:56 ಗಂಟೆಗೆ ಮರಳಿ ಮಂಡಿಯೂರಿ ನರ್ತನ ಮಾಡುತ್ತಾ ದೇವಾಲಯದ ಒಳಗೆ ತಲುಪಿದೆ. ಸಾಕಷ್ಟು ವಿವಾದಗಳಿಂದ ಕೂಡಿದ್ದ ಕರಗಕ್ಕೆ ಈ ಬಾರಿ ಹೈಕೋರ್ಟ್ ತೆರೆ ಎಳೆದಿದ್ದು, ಮುಂದಿನ ಬಾರಿ ಇನ್ನಷ್ಟು ವಿಜೃಂಭಣೆಯಿಂದ ಕರಗ ಮಹೋತ್ಸವ ನಡೆಯುವ ನಿರೀಕ್ಷೆ ಇದೆ. ಕರಗ ಸಾಗುವ ರಸ್ತೆಯುದ್ದಕ್ಕೂ ಹೂವಿನ ಅಲಂಕಾರ ಮಾಡಲಾಗಿತ್ತು. ಇದನ್ನೂ ಓದಿ: ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!