ಬೆಂಗಳೂರು: ಬಿಕಾಂ ಪದವೀಧರನೊಬ್ಬ ಮೈಕೋ ಲೇಔಟ್‌ನಲ್ಲಿರುವ (Mico Layout) ವೆಗಾಸಿಟಿ ಮಾಲ್‌ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಮೃತ ಪದವೀಧರನನ್ನ ಸುಹಾಸ್ ಅಡಿಗ (21) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 2.30ರ ಸುಮಾರಿಗೆ ವೆಗಾಸಿಟಿ ಮಾಲ್‌ಗೆ (Vega City Mall) ಪ್ರವೇಶಿಸಿ 4ನೇ ಮಹಡಿಗೆ ಹೋಗಿ ಜನರು ನೋಡನೋಡುತ್ತಿದ್ದಂತೆಯೇ ಕೆಳಗೆ ಹಾರಿದ್ದಾರೆ. ಸುಹಾಸ್ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾಗ್ಪುರದಲ್ಲಿ ದಾಖಲೆಯ 56 ಡಿಗ್ರಿ ಉಷ್ಣಾಂಶ- ಉತ್ತರಭಾರತದಲ್ಲಿ ಶಾಖಾಘಾತಕ್ಕೆ 210 ಸಾವು
ಕೆಲಸ ಸಿಕ್ಕಿಲ್ಲವೆಂದು ಖಿನ್ನತೆ:
ಮೃತ ಸುಹಾಸ್ ಬಳಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಮೂರು ತಿಂಗಳ ಹಿಂದೆ ಕಾಲೇಜಿನಲ್ಲಿ ವಿವಿಧ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ನಡೆಸಿದ್ದವು. ಸುಹಾಸ್‌ಗೆ ಕೆಲಸ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಅವರ ಪೋಷಕರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಘಟನೆ ಸಂಬಂಧ ಸುಹಾಸ್ ತಂದೆ ವಾಸುದೇವ ಅಡಿಗ ನೀಡಿರುವ ದೂರು ಆಧರಿಸಿ ಮೈಕೋ ಲೇಔಟ್ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಶನಿವಾರ 57 ಸ್ಥಾನಗಳಿಗೆ ಕೊನೇ ಹಂತದ ಚುನಾವಣೆ – ಕಣದಲ್ಲಿರುವ ಘಟಾನುಘಟಿಗಳು ಯಾರು?