ಬೆಂಗಳೂರು: ಮನೆ ಮಾಲೀಕನ ಎಡವಟ್ಟಿಗೆ 6 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ವಸಂತನಗರದ 5ನೇ ಕ್ರಾಸ್ ಬಳಿ ನಡೆದಿದೆ.
ಶಿವಶಂಕರ್ ಮನೆಯಲ್ಲಿ ವಿನೋದ್ ಕುಟುಂಬಸ್ಥರು ಬಾಡಿಗೆಗೆ ಇದ್ರು. ಆದರೆ ವಾರದ ಹಿಂದೆ ವಿನೋದ್ ಫ್ಯಾಮಿಲಿ ಊರಿಗೆ ಹೋಗಿದ್ದ ವೇಳೆ ಶಿವಶಂಕರ್ ಜಿರಳೆ ಔಷಧಿ ಸಿಂಪಡಿಸಿದ್ರು. ಇದರ ಅರಿವಿಲ್ಲದೆ ಮನೆಗೆ ಬಂದು ವಿನೋದ್ ಕುಟುಂಬಸ್ಥರು ಮಲಗಿದ್ರು. ಈ ವೇಳೆ ಉಸಿರಾಟದ ಸಮಸ್ಯೆಯಾಗಿ ಆರು ವರ್ಷದ ಬಾಲಕಿ ಅಹನಾ ಸಾನ್ನಪ್ಪಿದ್ರೆ, ಅಸ್ವಸ್ಥಗೊಂಡಿರೋ ಮನೆ ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
Advertisement
Advertisement
ಈ ಸಂಬಂಧ ಮನೆ ಮಾಲೀಕ ಪ್ರಸಾದ್ ಪ್ರತಿಕ್ರಿಯಿಸಿ, ಮೂರು ದಿನ ಮುಂಚಿತವಾಗಿ ಅವರಿಗೆ ತಿಗಣೆ ಮದ್ದು ಹೊಡೆಯೋದಾಗಿ ಮಾಹಿತಿ ನೀಡಿದ್ದೆವು. ಅದೇ ಕಾರಣಕ್ಕಾಗಿಯೇ ಅವರು ಕೇರಳ ಹೋಗಿದ್ದರು. ನಿನ್ನೆ ನಮಗೆ ಹೇಳದೆ ಮನೆಗೆ ಬಂದುಬಿಟ್ಟಿದ್ದಾರೆ. ಮಗುವಿನ ಸಾವಿಗೆ ಪೋಷಕರ ನಿರ್ಲಕ್ಷವೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.
Advertisement
Advertisement
ಮನೆಯಲ್ಲಿ ತಿಗಣೆ ಜಾಸ್ತಿ ಆಗಿದೆ ಅಂತ ಅವರೇ ಹೇಳಿದ್ದರು. ಹೀಗಾಗಿ ನಾಲ್ಕು ದಿನ ಬೇಕು ಸಮಯ ಬೇಕು ಅಂತ ಹೇಳಿದ್ದೆವು. ಅದರಂತೆ ಮನೆಗೆ ಪೆಸ್ಟ್ ಕಂಟ್ರೋಲ್ ಅವರನ್ನ ಕರೆಸಿ ಔಷಧಿ ಸಿಂಪಂಡಣೆ ಮಾಡಿದ್ವಿ. ನಂತರ ಮನೆ ಲಾಕ್ ಸಹ ಮಾಡಿದ್ವಿ. ಮನೆಯ ಕೀ ಸಹ ನಮ್ಮ ಬಳಿ ಇತ್ತು. ಡೂಪ್ಲಿಕೇಟ್ ಕೀ ಬಳಸಿ ಮನೆಗೆ ಬಂದಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿರಲ್ಲಿಲ್ಲ. ಇದರಿಂದಾಗಿಯೇ ಮಗು ಸಾವನ್ನಪ್ಪಿದೆ. ಇದು ಪೋಷಕರ ನಿರ್ಲಕ್ಷ ಎಂದು ಆರೋಪಿಸಿದರು.
ಮಗು ಸೋಫಾ ಮೇಲೆ ಮಲಗಿತ್ತು. ಈ ವೇಳೆ ವಾಂತಿ ಮಾಡತ್ತಂತೆ. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ತಂದೆ-ತಾಯಿ ಇಬ್ಬರು ಇನ್ನೂ ಅನ್ ಕಾನ್ಸಿಯಸ್ ಸ್ಥಿತಿಯಲ್ಲಿದ್ದಾರೆ ಎಂದು ಪ್ರಸಾದ್ ತಿಳಿಸಿದ್ದಾರೆ. ಇದನ್ನೂ ಓದಿ: ಜಮೀನು ವಿವಾದ – ಬೆಳ್ಳಂಬೆಳಗ್ಗೆ ಟವರ್ ಏರಿ ವೃದ್ಧನ ಹೈಡ್ರಾಮಾ
ಮೂಲತಃ ಕೇರಳದವರಾಗಿರುವ ವಿನೋದ್ ನಾಯರ್ ಕುಟುಂಬ ಸುಮಾರು 8 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿತ್ತು. ಬೆಂಗಳೂರಿನ ವಸಂತನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ವಿನೋದ್ ನಾಯರ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗಳು ಅಹನಾ ವಸಂತನಗರದ ಶಾಲೆಯಲ್ಲಿ ಓದುತ್ತಿದ್ದಳು. ಸದ್ಯ ಘಟನೆ ಸಂಬಂಧ ಮನೆ ಮಾಲೀಕ ಶಿವಶಂಕರ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.