ಚಿಕ್ಕಮಗಳೂರು: 15 ಅಡಿ ಉದ್ದದ ಕಾಳಿಂಗ ಸರ್ಪವನ್ನ ಮೈ ರೋಮಾಂಚನಗೊಳ್ಳುವಂತೆ ಉರಗ ತಜ್ಞರೊಬ್ಬರು ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಮಡಬೂರಿನಲ್ಲಿ ನಡೆದಿದೆ.
ತಾಲೂಕಿನ ಮಡಬೂರು ಗ್ರಾಮದ ಉದಯ್ ಪೂಜಾರಿ ಎಂಬವರ ತೋಟದಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದರಿಂದ ಅತಂಕಗೊಂಡ ಉದಯ್ ಪೂಜಾರಿ ಕುಟುಂಬ ತಕ್ಷಣ ಉರಗತಜ್ಞ ಹರೀಂದ್ರಗೆ ವಿಷಯ ಮುಟ್ಟಿಸಿದ್ದಾರೆ.
Advertisement
Advertisement
ತಕ್ಷಣ ತೋಟಕ್ಕೆ ಆಗಮಿಸಿದ ಉರಗ ತಜ್ಞ ತಮ್ಮ ಜೀವ ಭಯಬಿಟ್ಟು ಕಾಳಿಂಗ ಸರ್ಪವನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡು ದಿನದ ಹಿಂದೆ ಕೂಡ ಕೊಪ್ಪ ತಾಲೂಕಿನ ಗಡಿಗೇಶ್ವರ ಗ್ರಾಮದ ಪೈಪ್‍ನಲ್ಲಿ ಸಿಲುಕಿದ್ದ ಕಾಳಿಂಗ ಸರ್ಪವನ್ನು ಕೂಡ ಉರಗ ತಜ್ಞ ಹರೀಂದ್ರ ರಕ್ಷಣೆ ಮಾಡಿದ್ದರು. ಅದೇ ರೀತಿ ಕೊಪ್ಪ ತಾಲೂಕಿನ ಉತ್ತಮೇಶ್ವರ ಗ್ರಾಮದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ಕಾಳಿಂಗನನ್ನು ಕೂಡ ಉರಗ ತಜ್ಞರು ಸೆರೆ ಹಿಡಿದು ರಕ್ಷಣೆ ಮಾಡಿ, ಅರಣ್ಯ ಪ್ರದೇಶಕ್ಕೆ ಬಿಡಲಿದ್ದಾರೆ ಅಂತಾ ತಿಳಿಸಿದ್ದಾರೆ.
Advertisement
https://www.youtube.com/watch?v=cH3VE7r-Dkc
Advertisement