ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಈಗಾಗಲೇ ಹಂತಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೌರಿ ಹತ್ಯೆ ನಡೆಯುವ ಮೊದಲೇ ಆರೋಪಿಗಳು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು ಎಂಬುವುದು ತಿಳಿದಿದೆ. ಈಗ ಗೌರಿ ಲಂಕೇಶ್ ಹಂತಕರ ಮಾದರಿಯ ಮತ್ತೊಂದು ಗ್ಯಾಂಗ್‍ನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಶಾಭಾಜ್ ಖಾನ್, ಫೊಕಾರಂ, ನಿತಿನ್ ಶರ್ಮ ಎಂದು ಗುರುತಿಸಲಾಗಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಿಂದ ಬಂದಿದ್ದ ಈ ಗ್ಯಾಂಗ್, ಮೇ 21ರಂದು ಬೆಂಗಳೂರಿನ ಫ್ರೇಜರ್ ಟೌನ್‍ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಮಸೂದ್ ಅಲಿ ಎಂಬವರನ್ನು ಗುಂಡಿಟ್ಟು ಕೊಂದಿದ್ದರು.
ಆರೋಪಿಗಳು ವೈಟ್ ಫೀಲ್ಡ್ ನಲ್ಲಿ ಎರಡು ದಿನಗಳ ಮೊದಲೇ ಶೂಟಿಂಗ್ ಪ್ರಾಕ್ಟೀಸ್ ಮಾಡಿದ್ದರು. ನಂತರ ಬೈಕಿನಲ್ಲಿ ಕಾರನ್ನು ಫಾಲೋ ಮಾಡಿದ್ದ ಕಿಡಿಗೇಡಿಗಳು ಎರಡು ಬಾರಿ ಗುದ್ದಿ, ಬಳಿಕ ಗುಂಡು ಹಾರಿಸಿ ಪರಾರಿಯಾಗಿದ್ದರು.
ಆರೋಪಿಗಳ ಸೆರೆಗೆ ಮಾರುವೇಷದಲ್ಲಿ ಫೀಲ್ಡ್ ಗಿಳಿದ ಪುಲಿಕೇಶಿನಗರ ಠಾಣೆ ಪೊಲೀಸರು, 2 ದಿನ ಜಿಮ್‍ನಲ್ಲಿ ವರ್ಕೌಟ್ ಮಾಡಿ, ಅಂಗಡಿಯಲ್ಲಿ ಕೆಲಸ ಮಾಡಿದ್ದರು. ಕೊನೆಗೆ ಉತ್ತರಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಆರೋಪಿಗಳನ್ನು ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಈ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.