Connect with us

Districts

ನೀರು ಕಾಯಿಸಲು ಹಚ್ಚಿದ್ದ ಒಲೆಯಿಂದ ಗುಡಿಸಲಿಗೆ ಬೆಂಕಿ- 3 ಜನರಿಗೆ ಗಾಯ, 6 ಮೇಕೆ ಸಾವು

Published

on

ವಿಜಯಪುರ: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮೂವರಿಗೆ ಗಾಯಗಳಾಗಿದ್ದು, 6 ಮೇಕೆಗಳು ಸಾವನ್ನಪ್ಪಿದ ಘಟನೆ ವಿಜಯಪುರ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಶ್ರೀಶೈಲ ಗೌಡ ಅವರಿಗೆ ಸೇರಿದ ತೋಟದ ಮನೆಯ ಗುಡಿಸಲು ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ 2 ವರ್ಷದ ಮಗು ಲಾಯವ್ವ ಸೇರಿದಂತೆ 3 ಜನರಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿವೆ. ಮಂಗಳವಾರ ರಾತ್ರಿ ನೀರು ಕಾಯಿಸುವಾಗ ಹಚ್ಚಿದ್ದ ಒಲೆ ಆರದೇ ಇದ್ದಿದ್ದರಿಂದ ಬೆಂಕಿ ಗುಡಿಸಲಿಗೆ ತಗುಲಿ ಈ ಅವಘಡ ನಡೆದಿದೆ ಎನ್ನಲಾಗಿದೆ.

ಅಲ್ಲದೇ, ಬೆಂಕಿಯ ಕೆನ್ನಾಲಿಗೆಗೆ ಪತ್ರಾಸ್ ಶೆಡ್ಡು ಒಡೆದು ಮನೆಯವರು ಹೊರಗೆ ಬಂದು ಬಚಾವ್ ಆಗಿದ್ದಾರೆ. ಈ ಕುರಿತು ತಿಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳು ತಿಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *