ಕೋಲಾರ: ಬೆಳೆ ಹಾಳು ಮಾಡಿದ ವಿಚಾರವಾಗಿ ದಾಯಾದಿಗಳ ನಡುವೆ ನಡೆದಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಮಾಲೂರು (Malur) ತಾಲೂಕಿನ ಪಡವನಹಳ್ಳಿಯಲ್ಲಿ ನಡೆದಿದೆ.
ಮುನಿರಾಜು(35) ಕೊಲೆಯಾದ ವ್ಯಕ್ತಿ. ಬೋರ್‌ವೆಲ್ ಲಾರಿ ಮೆಣಸಿನ ಗಿಡ ಹಾಳು ಮಾಡಿದ ಹಿನ್ನೆಲೆ ಮಾ.19ರ ಮಧ್ಯರಾತ್ರಿ ಸುಮಾರಿಗೆ ದಾಯಾದಿಗಳ ಮಧ್ಯೆ ಗಲಾಟೆ ನಡೆದಿದೆ. ಈ ಗಲಾಟೆಯು ತಾರಕ್ಕೇರಿದ್ದು ಮುನಿರಾಜುವಿನ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಅಣ್ಣಯ್ಯಪ್ಪ, ವೀರಸ್ವಾಮಿ, ಸೋಮಶೇಖರ್, ಕಾಂತರಾಜು, ಭರತ್, ವೆಂಕಟೇಶ್ ಹಾಗೂ ಭಾಗ್ಯಮ್ಮ ವಿರುದ್ಧ ಕೊಲೆಯ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ದೇವಸ್ಥಾನದ ಮೇಲೆ ಕಲ್ಲು – ಕಂಬಕ್ಕೆ ಕಟ್ಟಿಹಾಕಿದ ಜನ
ಕೊಲೆಯ ನಾಲ್ವರು ಆರೋಪಿಗಳನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾರಿಯರ ಅಂದ ಹೆಚ್ಚಿಸುವ ಮಸಾಬ ಬ್ಲೌಸ್ ಡಿಸೈನ್