ಮುಂಬೈ: ಹುಟ್ಟಿದ ಮಗು ಹೆಣ್ಣು ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ದಂಪತಿ ತಮಗೆ ಹೆಣ್ಣು ಮಗು ಹುಟ್ಟಿದ ಸಂತಸದಲ್ಲಿ ಆ ಆಗುವನ್ನು ವಿಶೇಷವಾಗಿ ತಮ್ಮ ಕುಟುಂಬಕ್ಕೆ ಬರಮಾಡಿಕೊಂಡ ಘಟನೆ ಪುಣೆಯ ಶೆಲ್ಗಾಂವ್‍ನಲ್ಲಿ ನಡೆದಿದೆ.
ಹಲವು ವರ್ಷಗಳ ಬಳಿಕ ವಿಶಾಲ್ ಝರೇಕರ್ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದೆ. ಹುಟ್ಟಿದ ಮಗು ಹೆಣ್ಣು ಅಂತ ಗೊತ್ತಾದ ಕೂಡಲೇ ವಿಶಾಲ್ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇದೇ ಖುಷಿಯಲ್ಲಿ ವಿಶಾಲ್ ದಂಪತಿ ತಮ್ಮ ಮಗಳನ್ನು ವಿಶೇಷವಾಗಿ ಚಾಪರ್ ಮೂಲಕ ಮನೆಗೆ ಕರೆದುಕೊಂಡು ಬರಲು ತೀರ್ಮಾನಿಸಿದ್ದಾರೆ.
ನಮ್ಮ ಇಡೀ ಕುಟುಂಬದಲ್ಲಿ ಹೆಣ್ಣು ಮಗುವಿರಲಿಲ್ಲ. ಆದರೆ ಇದೀಗ ನಮಗೆ ಹೆಣ್ಣು ಮಗು ಜನಿಸಿದೆ. ಹೀಗಾಗಿ ನಮಗೆ ಹುಟ್ಟಿದ ಮಗುವನ್ನು ವಿಶೇಷವಾಗಿ ಮನೆಗೆ ಬರಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆವು. ಅಂತೆಯೇ 1 ಲಕ್ಷ ನೀಡಿ ಚಾಪರ್ ನಲ್ಲಿ ಕರೆದುಕೊಂಡು ಬಂದೆವು ಎಂದು ಮಗುವಿನ ತಂದೆ ವಿಶಾಲ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಮುಸ್ಲಿಂ ಏರಿಯಾಗಳಿಗೆ ದಿನದ 24 ಗಂಟೆ ನಿರಂತರ ವಿದ್ಯುತ್
#WATCH Shelgaon, Pune | Grand Homecoming ! A family brought their newborn girlchild in a chopper
We didn't have a girlchild in our entire family. So, to make our daughter's homecoming special, we arranged a chopper ride worth Rs 1 lakh:Vishal Zarekar,father
(Source: Family) pic.twitter.com/tA4BoGuRbv
— ANI (@ANI) April 5, 2022
ವಿಶಾಲ್ ತಮ್ಮ ಮಗಳನ್ನು ಚಾಪರ್‍ನಲ್ಲಿ ಕರೆದುಕೊಂಡು ಬಂದು ಇಳಿಯುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕೆಲವರು ತಂದೆಯ ಕಾರ್ಯಕ್ಕೆ ಹೆಮ್ಮೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅಷ್ಟು ಚಿಕ್ಕ ಮಗುವನ್ನು ಹೆಲಿಕಾಪ್ಟರ್ ನಲ್ಲಿ ಯಾಕೆ ಕರೆದುಕೊಂಡು ಬಂದ್ರಿ..?, ಜೋರಾದ ಶಬ್ಧದಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಹೀಗೆ ಹಲವಾರು ಪರ- ವಿರೋಧ ಕಾಮೆಂಟ್ ಗಳು ಬರುತ್ತಿವೆ.