ದಾವಣಗೆರೆ: ಶಾಲೆಯಲ್ಲಿ ಗಣೇಶ ಮೂತಿಯನ್ನು ಪ್ರತಿಷ್ಠಾಪನೆ ಮಾಡಿದ್ದೇವೆ ಎಂದು ಕೇಳದ, ಎಂಜಿನಿಯರ್ ಅಧಿಕಾರಿಯೊಬ್ಬರು ಶಾಲೆಯ ಛಾವಣಿಯನ್ನು ತೆಗೆಸಿದ ಘಟನೆ ಹರಪನಹಳ್ಳಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.
ಎಂಜಿನಿಯರ್ ಮಹಾಂತೇಶ್ ಹಾಗೂ ಕಾರ್ಮಿಕ ನವಾಜ್ ಶಾಲೆಯ ಛಾವಣಿ ತೆಗೆಸಿ ಹಾಕಿದವರು. ಗುರುವಾರ ಬೆಳಗ್ಗೆ ಮಾದಾಪುರ ಗ್ರಾಮದ ಮಕ್ಕಳು ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಿದ್ದರು. ಬಳಿಕ ಕೆಲವು ವಿದ್ಯಾರ್ಥಿಗಳನ್ನು ಬಿಟ್ಟು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮನೆಗೆ ಮರಳಿದ್ದರು.
Advertisement
Advertisement
ಮಧ್ಯಾಹ್ನದ ವೇಳೆಗೆ ದುರಸ್ತಿ ಕಾರ್ಯಕ್ಕೆಂದು ಶಾಲೆಗೆ ಬಂದ ಎಂಜಿನಿಯರ್ ಮಹಾಂತೇಶ್, ಕಾರ್ಮಿಕ ನವಾಜ್ ಅವರಿಗೆ ಹೇಳಿ ಛಾವಣಿ ತೆಗೆಸುತ್ತಿದ್ದರು. ಆಗ ಕೆಲ ವಿದ್ಯಾರ್ಥಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇವೆ, ಹಬ್ಬದ ನಂತರ ಶಾಲೆ ದುರಸ್ತಿ ಕಾರ್ಯ ಮಾಡುವಂತೆ ಕೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳ ಮಾತನ್ನು ಕೇಳ ಎಂಜಿನಿಯರ್ ಛಾವಣಿ ತೆಗೆಸಿದ್ದಾರೆ.
Advertisement
ಶಾಲೆಗೆ ಬಂದ ಸ್ಥಳೀಯರು ಎಂಜಿನಿಯರ್ ವರ್ತನೆಯಿಂದ ಗರಂ ಆಗಿದ್ದರು. ಮಹಾಂತೇಶ್ ಹಾಗೂ ನವಾಜ್‍ನನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ಥಳಿಸಲು ಮುಂದಾಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮಹಾಂತೇಶ್ ಹಾಗೂ ನವಾಜ್‍ನನ್ನು ವಶಕ್ಕೆ ಪಡೆದು, ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv