ಚಿಕ್ಕೋಡಿ: ಹಿಂದೂ ದೇವರಾದ ಶ್ರೀ ಕೃಷ್ಣನ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕೋಡಿ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ವರುಣಾ ಗ್ರಾಮದಲ್ಲಿ ರವೀಂದ್ರ ಹಾರೋಹಳ್ಳಿ ಅನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇದನ್ನೂ ಓದಿ: ರಷ್ಯಾ ಪಡೆ ನನ್ನನ್ನು ಸೆರೆ ಹಿಡಿಯಲು ಭಾರೀ ಹತ್ತಿರದಲ್ಲಿತ್ತು: ಝೆಲೆನ್ಸ್ಕಿ
Advertisement
Advertisement
ಏನಿದು ಘಟನೆ?
ಶ್ರೀ ಕೃಷ್ಣನ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಕ್ಕೆ ರವೀಂದ್ರ ಹಾಗೂ ಕರೋಶಿ ಗ್ರಾಮದ ಚೇತನ್ ಹೊನ್ನಗೋಳ ವಿರುದ್ಧ 2017 ಡಿಸೆಂಬರ್‌ನಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ಮುಂಡೆ ದೂರು ದಾಖಲಿಸಿದ್ದರು. ಇದನ್ನೂ ಓದಿ: ಚೀನಿಗಳಿಗೆ ವೀಸಾ ಬಂದ್ ಮಾಡಿದ ಬೆನ್ನಲ್ಲೇ ಭಾರತೀಯ ವಿದ್ಯಾರ್ಥಿಗಳಿಗೆ ಬನ್ನಿ ಎಂದ ಚೀನಾ
Advertisement
ಈ ಹಿಂದೆ ಚೇತನ್ ಹೊನ್ನಗೋಳ ಕೋರ್ಟ್‍ಗೆ ಹಾಜರಾಗಿದ್ದನು. ಆದರೆ 2019ರಿಂದ ಇದುವರೆಗೂ ರವೀಂದ್ರ ಕೋರ್ಟ್‍ಗೆ ಹಾಜರಾಗಿರಲಿಲ್ಲ. 2019 ರಿಂದಲು ಚಿಕ್ಕೋಡಿ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.
Advertisement
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್‍ನ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್, ಮೊನ್ನೆ ಜಿಗ್ನೇಶ್ ಮೇವಾನಿ ಇಂದು ಹಾರೋಹಳ್ಳಿ ರವೀಂದ್ರ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ ಕಾರಣಕ್ಕಾಗಿ ದಲಿತ ಪರ ಹೋರಾಟಗಾರರ ಬಂಧನ ಆಗಿದೆ. ಹೋರಾಟಗಾರರು ಬರಹಗಾರರನ್ನು ಗುರಿಯಾಗಿಸಿಕೊಂಡು ಬಂಧಿಸುತ್ತಿರುವ ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ನಡೆಯನ್ನು ಖಂಡಿಸುತ್ತೇನೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ದಾಳಿ. ಕೂಡಲೇ ರವೀಂದ್ರನನ್ನ ಬಿಡುಗಡೆ ಮಾಡಬೇಕು ಎಂದು ಟ್ವೀಟ್ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.