ನವದೆಹಲಿ: ಸತತ 19 ವರ್ಷಗಳ ಕಾಲ ಅಧ್ಯಕ್ಷೆಯಾಗಿ, ಪಕ್ಷವನ್ನು ಮುನ್ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ.
ಶನಿವಾರ ಪುತ್ರ ರಾಹುಲ್‍ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಪಟ್ಟಾಭಿಷೇಕದ ನಂತರ ಸಕ್ರಿಯ ರಾಜಕೀಯಕ್ಕೆ ಗುಡ್‍ಬೈ ಹೇಳಲಿದ್ದಾರೆ ಎನ್ನಲಾಗಿದೆ. ರಾಜಕೀಯದಿಂದ ದೂರ ಉಳಿಯಲು ಇದು ಸಕಾಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
Advertisement
ಈ ಸುದ್ದಿ ಮಧ್ಯಮಗಳಲ್ಲಿ ಪ್ರಕಟವಾದ ಬಳಿಕ ಅಧ್ಯಕ್ಷೆ ಸ್ಥಾನದಿಂದ ಮಾತ್ರವೇ ಕೆಳಗಿಳಿಯುತ್ತಿದ್ದಾರೆಯೇ ವಿನಃ ಸಂಪೂರ್ಣ ರಾಜಕೀಯದಿಂದಲ್ಲ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ: ಯುವರಾಜನ ಮುಂದಿರುವ ಸವಾಲು ಏನು?
Advertisement
ಅಧ್ಯಕ್ಷ ಪಟ್ಟ ಅಲಂಕರಿಸುವ ಮುನ್ನವೇ ರಾಹುಲ್ ತೆಗೆದುಕೊಂಡ ಕೆಲ ನಿರ್ಣಯಗಳು ಅವರ ರಾಜಕೀಯ ಪ್ರಬುದ್ಧತೆಯನ್ನ ತೋರಿಸಿವೆ ಅನ್ನೋ ಮಾತೂ ಕೈ ಪಾಳಯದಲ್ಲಿ ಕೇಳಿ ಬಂದಿದೆ. ರಾಹುಲ್ ಪಟ್ಟಾಭಿಷೇಕಕ್ಕೆ ದೆಹಲಿ ಕಾಂಗ್ರೆಸ್ ಕಚೇರಿ ಸಜ್ಜಾಗಿದೆ. ರಾಜ್ಯದ ಕೆಪಿಸಿಸಿ ನಾಯಕರು ದೆಹಲಿಗೆ ತೆರಳಿದ್ದಾರೆ. ಇದನ್ನೂ ಓದಿ: ರಾಹುಲ್ ಜಯಗಳಿಸಿರೋ ಅಮೇಥಿ ಕಾಂಗ್ರೆಸ್ಸಿನ ಭದ್ರಕೋಟೆ ಯಾಕೆ?