TV ShowsCinemaKarnatakaLatestLeading NewsMain PostSandalwood

ರಾಕೇಶ್ ಅಡಿಗ ಜೊತೆ ‘ಬಿಗ್ ಬಾಸ್’ ಸುಂದರಿಯರ ಸಮ್ಮಿಲನ

ಬಿಗ್ ಬಾಸ್ (Big Boss) ಮುಗಿಯುತ್ತಿದ್ದಂತೆಯೇ ಮತ್ತೆ ಮತ್ತೆ ಭೇಟಿಯಾಗುವುದು, ಪಾರ್ಟಿ ಮಾಡುವುದು ಸಾಮಾನ್ಯ. ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿ. ಈ ಬಾರಿಯೂ ಅಂಥದ್ದೊಂದು ಭೇಟಿ ಸಾಧ್ಯವಾಗಿದೆ. ರಾಕೇಶ್ ಅಡಿಗ (Rakesh Adiga) ಹಾಗೂ ಅಮೂಲ್ಯ (Amulya), ದಿವ್ಯಾ ಉರುಡುಗ (Divya Uruduga), ನೇಹಾ ಗೌಡ (Neha Gowda) ಮತ್ತು ಅನುಪಮಾ ಗೌಡ (Anupama Gowda) ಭೇಟಿ ಮಾಡಿ, ಒಂದಷ್ಟು ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದಾರೆ. ಆ ಸಂಭ್ರಮವನ್ನು ಫೋಟೋ ಮೂಲಕ ಹಂಚಿಕೊಂಡಿದ್ದಾರೆ.

ರಾಕೇಶ್ ಅಡಿಗ ಜೊತೆ 'ಬಿಗ್ ಬಾಸ್' ಸುಂದರಿಯರ ಸಮ್ಮಿಲನ

ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಎಲ್ಲರ ಡಾರ್ಲಿಂಗ್ ಆಗಿದ್ದರು. ಎಲ್ಲರೊಂದಿಗೂ ಅವರು ಸಲೀಸಾಗಿ ಹೊಂದಿಕೊಳ್ಳುತ್ತಿದ್ದರು. ಹಾಗಾಗಿಯೇ ಗಾಸಿಪ್ ಕೂಡ ಹುಟ್ಟಿಕೊಂಡಿದ್ದವು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ ಎಲ್ಲ ಗಾಸಿಪ್ ಗಳನ್ನು ಅವರು ನಿರಾಕರಿಸಿದ್ದರು. ನಮ್ಮದು ಕೇವಲ ಫ್ರೆಂಡ್ ಶಿಪ್ ಅದರಾಚೆ ಏನೂ ಇಲ್ಲ ಎಂದು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಅದೇ ಪ್ರೀತಿಯನ್ನೇ ಇಟ್ಟುಕೊಂಡು ಮತ್ತೆ ಸ್ನೇಹಿತಿಯರ ಜೊತೆ ರಾಕೇಶ್ ಒಂದಾಗಿದ್ದಾರೆ. ಇದನ್ನೂ ಓದಿ: ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

ರಾಕೇಶ್ ಅಡಿಗ ಜೊತೆ 'ಬಿಗ್ ಬಾಸ್' ಸುಂದರಿಯರ ಸಮ್ಮಿಲನ

ಈ ಭೇಟಿಯ ಹಿಂದಿನ ಉದ್ದೇಶ ಏನು? ಯಾರ ಮನೆಯಲ್ಲಿ ಇವರು ಭೇಟಿಯಾಗಿದ್ದರು ಎಂಬಿತ್ಯಾದಿ ವಿವರಗಳು ಲಭ್ಯವಿಲ್ಲವಾದರೂ, ಎಲ್ಲರೂ ಸಂಭ್ರಮಿಸಿದ್ದಕ್ಕೆ ಅವರೇ ಹಾಕಿಕೊಂಡು ಫೋಟೋಗಳು ಸಾಕ್ಷಿಯಾಗಿವೆ. ಮೊನ್ನೆಯಷ್ಟೇ ದಿವ್ಯಾ ಉರುಡುಗ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಆ ಸಮಯದಲ್ಲಿ ತಗೆದಿರುವ ಫೋಟೋ ಇರಬಹುದಾ ಎಂದು ಹೇಳಲಾಗುತ್ತಿದೆ. ಅಥವಾ ದಿವ್ಯಾ ಉರುಡುಗ ಹುಟ್ಟುಹಬ್ಬವನ್ನು ಇವರಲ್ಲಿ ಯಾರಾದರೂ ಅರೇಂಜ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ರಾಕೇಶ್ ಅಡಿಗ ಜೊತೆ 'ಬಿಗ್ ಬಾಸ್' ಸುಂದರಿಯರ ಸಮ್ಮಿಲನ

ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲೂ ಈ ಜೋಡಿ ಒಂದಾಗಿಯೇ ಆಟವಾಡಿತ್ತು. ಆಚೆ ಬಂದ ನಂತರವೂ ಆ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎನ್ನುವುದಕ್ಕೆ ಈ ಭೇಟಿಯೇ ಸಾಕ್ಷಿ. ಯಾರು ಏನೇ ಹೇಳಲಿ ಇಂತಹ ಸಂಭ್ರಮಗಳು ಅವರ ಬದುಕಲ್ಲಿ ಪ್ರತಿ ದಿನವೂ ಬರಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button