– ಆವರಣದಲ್ಲಿ ಸಿಗುತ್ತಿವೆ ಅವಧಿ ಮುಗಿಯದ ಔಷಧಿಗಳು
– ಆರೋಗ್ಯ ಇಲಾಖೆಯ ಮಹಾ ನಿರ್ಲಕ್ಷ್ಯ ಅನಾವರಣ
ಬೆಂಗಳೂರು: ಜನರ ಜೀವ ಉಳಿಸಬೇಕಾದ ಔಷಧಗಳಿಗೆ (Medicine) ಈಗ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರದ ಔಷಧ ಉಗ್ರಾಣದ ಹೊರ ಭಾಗದಲ್ಲಿಯೇ ಸಿರಿಂಜ್, ಮೆಡಿಸಿನ್‌ಗಳನ್ನು ಸಂಗ್ರಹಿಸಿ ಆರೋಗ್ಯ ಇಲಾಖೆಯ (Health Department) ವೈದ್ಯಕೀಯ ಸರಬರಾಜು ನಿಗಮದ (Medical Supply Corporation) ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.
Advertisement
ಬೆಂಗಳೂರು (Bengaluru) ಸೇರಿ, ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಮಾಡುವ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿರ್ಲಕ್ಷ್ಯ ಇದೀಗ ಬಯಲಾಗಿದೆ. ಬಸವೇಶ್ವರ ನಗರ (Basaveshwar Nagar), ಸಿದ್ಧಯ್ಯ ಪುರಾಣಿಕ ರಸ್ತೆಯಲ್ಲಿರುವ ಸರ್ಕಾರಿ ಔಷಧಿ ಮಳಿಗೆಯ ಆವರಣದ ಹೊರ ಭಾಗದಲ್ಲಿ ಬೆಲೆ ಬಾಳುವ ಔಷಧಿಗಳನ್ನು ಧೂಳು ಹಿಡಿದ ಲಾರಿಯಲ್ಲಿ (Lorry) ಸಂಗ್ರಹಿಸಿಟ್ಟಿದ್ದಾರೆ. ಬಿಸಿಲಿನಲ್ಲಿ, ಧೂಳಿನಲ್ಲಿ ಔಷಧಗಳನ್ನು ಇಡಲಾಗಿದೆ. ಮಳೆ ಬಂದರೆ ದುಬಾರಿ ಔಷಧಿಗಳು ಎಲ್ಲವೂ ನೀರು ಪಾಲಾಗುತ್ತದೆ. ಆ ಔಷಧಿಗಳನ್ನು ಗೋದಾಮಿನಲ್ಲಿ ಇಡಬೇಕೆಂಬ ಕನಿಷ್ಟ ಸಾಮಾನ್ಯ ಜ್ಞಾನವನ್ನೂ ಇಲ್ಲಿನ ಅಧಿಕಾರಿಗಳು ಪಾಲಿಸಿಲ್ಲ. ಇದನ್ನೂ ಓದಿ: ಕಲ್ಲಿದ್ದಲು ಕಳ್ಳತನ ಕೇಸ್ – ಇದ್ದ ಮೂವರಲ್ಲಿ ಕಳ್ಳ ಯಾರು? ವೈಟಿಪಿಎಸ್ ಅಧಿಕಾರಿಗಳು ಹೇಳೋದು ಏನು?
Advertisement
Advertisement
2023-24ರ ಸಾಲಿನಲ್ಲಿ ವಿವಿಧ ಆಸ್ಪತ್ರೆಗಳಿಗೆ ಔಷಧಗಳಿಗೆ ಹೆಚ್ಚು ಬೇಡಿಕೆ ಬಂದಿತ್ತು. 732 ಡ್ರಗ್ಸ್‌ಗಳ ಪೈಕಿ, 409 ಎಸೆನ್ಶಿಯಲ್ ಡ್ರಗ್ಸ್ ಕೂಡ ಆಸ್ಪತ್ರೆಗಳಿಗೆ ಸರಿಯಾದ ಸಮಯಕ್ಕೆ ಪೂರೈಕೆ ಆಗುತ್ತಿಲ್ಲ. ಆಸ್ಪತ್ರೆಯ ಆವರಣದ ಹೊರಗೆ ಯಾವುದೇ ಸುರಕ್ಷತೆ, ಭದ್ರತೆ ಇಲ್ಲದ ಲಾರಿಯಲ್ಲಿ ನೂರಾರು ಸಿರಿಂಜ್ ಬಾಕ್ಸ್‌ಗಳನ್ನು ಹಲವು ದಿನಗಳಿಂದ ಸಂಗ್ರಹಿಸಿಟ್ಟಿದ್ದಾರೆ. ನವೆಂಬರ್ 19ರಂದು ಇದೇ ಜಾಗಕ್ಕೆ ಹೋದಾಗಲೂ ಇದೇ ಲಾರಿಯಲ್ಲಿರುವ ಔಷಧಿಗಳನ್ನು ಹೀಗೇ ಖಾಲಿ ಬಿಟ್ಟಿದ್ದರು. ಇದನ್ನೂ ಓದಿ: ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?
Advertisement
ಔಷಧ ಮಳಿಗೆಯ ಆವರಣದಲ್ಲಿಯೇ ಅವಧಿ ಮುಗಿಯದೇ ಇರುವ ಔಷಧಿಗಳನ್ನು ಎಸೆಯಲಾಗಿದೆ. ಔಷಧಿ ಸಂಗ್ರಹ ಮಳಿಗೆಯ ವ್ಯಾಪ್ತಿ ದೊಡ್ಡದಾಗಿದ್ದು, ಇಲ್ಲಿ ರಾತ್ರಿ ಸಮಯದಲ್ಲಿ ಕೇವಲ ಒಬ್ಬರೇ ಸೆಕ್ಯೂರಿಟಿ ಗಾರ್ಡ್ ಇರುತ್ತಾರೆ. ಯಾರು, ಹೇಗೆ, ಎಲ್ಲಿ ಬೇಕಾದರೂ ಮೆಡಿಸಿನ್‌ಗಳನ್ನು ದೋಚಬಹುದು. ಅಷ್ಟರಮಟ್ಟಿಗೆ ಭದ್ರತೆ ಇಲ್ಲದಂತಾಗಿದೆ. ಅದೇನೆ ಆಗಲಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನಹರಿಸಬೇಕಿದೆ. ಇದನ್ನೂ ಓದಿ: ಜಮೀರ್ ಒಬ್ಬ ರಾಷ್ಟ್ರದ್ರೋಹಿ, ಸಚಿವ ಸಂಪುಟದಿಂದ ವಜಾ ಮಾಡಿ – ಈಶ್ವರಪ್ಪ ಆಗ್ರಹ