ಅಂದು ಬಾಲಕಾರ್ಮಿಕ ಇಂದು ಪ್ರಾಧ್ಯಾಪಕ- ಅನಿಷ್ಟ ಪದ್ಧತಿ ಮೆಟ್ಟಿನಿಂತು ಬಡತನಕ್ಕೆ ಸೆಡ್ಡು ಹೊಡೆದವನ ಕಥೆ

Public TV
2 Min Read
HUBBALLI TEACHER 1

– ಕಾರ್ಮಿಕ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ

ಹುಬ್ಬಳ್ಳಿ: ಬಡತನ ಎನ್ನುವುದು ಕೆಲವರಿಗೆ ಬೆಂಬಿಡದೇ ಕಾಡುತ್ತಿರುತ್ತದೆ. ಆದರೆ ಆ ಬಡತನವನ್ನು ಮೆಟ್ಟಿ ನಿಂತವರು ಇದೀಗ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ನಿಂತಿದ್ದಾರೆ. ಅವತ್ತು ಆ ಹುಡುಗ ಬಾಲ ಕಾರ್ಮಿಕನಾಗಿ (Child Labour) ಅಧಿಕಾರಿಗಳಿಗೆ ಸಿಕ್ಕಿದ್ದ. ಇಂದು ಅದೇ ಹುಡುಗ ಮತ್ತಷ್ಟು ವಿದ್ಯಾರ್ಥಿಗಳ ಪಾಲಿನ ಶಿಕ್ಷಕನಾಗಿ ಕೆಲಸ ಆರಂಭಿಸೋಕೆ ಸಿದ್ಧನಾಗಿದ್ದಾನೆ.

HUBBALLI TEACHER 4

ಅಂದು ತನ್ನ ತಂದೆ, ತಾಯಿ ಪಡುತ್ತಿದ್ದ ಕಷ್ಟವನ್ನು ನೋಡಲಾಗದೇ ತನ್ನ ಪೋಷಕರೊಂದಿಗೆ ಕಲ್ಲಿನ ಕ್ವಾರಿಗೆ ಕೆಲಸಕ್ಕೆಂದು ಹೋಗಿ ಬಾಲ ಕಾರ್ಮಿಕ ಎನಿಸಿಕೊಂಡಿದ್ದ ಬಾಲಕ ಇದೀಗ ಸಹಾಯಕ ಪ್ರಾಧ್ಯಾಪಕನಾಗಿದ್ದಾನೆ ಕುಮಾರ ಸೋಮಲಿಂಗ ಬಾಳಿಕಾಯಿ (Somalinga Balikai). ಇವರು ಚಿಕ್ಕ ವಯಸ್ಸಿನಲ್ಲಿದ್ದಾಗ ತಮ್ಮ ಪೋಷಕರೊಂದಿಗೆ ಕಲ್ಲಿನ ಕ್ವಾರಿಗೆ ಕೆಲಸಕ್ಕೆಂದು ಹೋಗುತ್ತಿದ್ದರು.

ಮೂಲತಃ ಧಾರವಾಡ (Dharwad) ತಾಲೂಕಿನ ಮಂಡಿಹಾಳ ಗ್ರಾಮದವರಾದ ಇವರು, ಪ್ರತಿನಿತ್ಯ ಕೆಲಸಕ್ಕೆ ಹೋಗುವುದನ್ನು ನೋಡಿದ ಕಾರ್ಮಿಕ ಇಲಾಖೆ ಅಧಿಕಾರಿಗಳು, ಇತನ್ನು ರಕ್ಷಣೆ ಮಾಡಿ ಆಗ ದಡ್ಡಿಕಮಲಾಪುರದಲ್ಲಿದ್ದ ಬಾಲ ಕಾರ್ಮಿಕರ ಶಾಲೆಯಲ್ಲಿಟ್ಟು ಶಿಕ್ಷಣ ನೀಡಿದ್ರು. ಅಲ್ಲಿಂದ ಆರಂಭವಾದ ಈತನ ಶಿಕ್ಷಣ ಪ್ರೀತಿ ಇಂದು ದೊಡ್ಡ ಮಟ್ಟಿನ ಯಶಸ್ಸಿಗೆ ಕಾರಣವಾಗಿದೆ. ಈ ಉಚಿತ ಶಿಕ್ಷಣ (Free Education) ಪಡೆದ ಕುಮಾರ ಸೋಮಲಿಂಗಯ್ಯ ಇದೀಗ ರಾಜ್ಯಕ್ಕೇ ಎರಡನೇ ರ್ಯಾಂಕ್ ಪಡೆಯುವ ಮೂಲಕ ಸಹಾಯಕ ಪ್ರಾಧ್ಯಾಪಕನಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ – ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ

HUBBALLI TEACHER 3

ಅಂದು ಕಾರ್ಮಿಕ ಇಲಾಖೆಯಿಂದಲೇ ನಡೆಸಲಾಗುತ್ತಿದ್ದ ಶಾಲೆಗಳ ಮೂಲಕ ಶಿಕ್ಷಣ ಪಡೆದ ಕುಮಾರ ಸೋಮಲಿಂಗಯ್ಯ ಅವರು, ಇಂದು ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಪ್ರತಿಯೊಬ್ಬ ಬಾಲ ಕಾರ್ಮಿಕರು ಕೂಡ ಇವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದು ಹುಬ್ಬಳ್ಳಿ (Hubballi) ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತೆ ಶ್ವೇತಾ ಹರ್ಷ ವ್ಯಕ್ತಪಡಿಸಿದ್ದಾರೆ. ಮಕ್ಕಳು ಯಾವುದೇ ಕಾರಣಕ್ಕೂ ಕೆಲಸಕ್ಕೆ ಹೋಗಬಾರದು, ಮಕ್ಕಳ ಕಲಿಕೆಗೆ ಪೋಷಕರು ಸಹ ಪ್ರೋತ್ಸಾಹ ನೀಡಬೇಕು. ಅದರಂತೆ ಈ ಕುಮಾರ ಎಲ್ಲರಿಗೂ ಸ್ಪೂರ್ತಿ ಎನ್ನುವುದು ಅಧಿಕಾರಗಳ ಮಾತು.

ಒಟ್ಟಾರೆ ಅಂದು ಬಾಲ ಕಾರ್ಮಿಕನಾಗಿದ್ದ ಕುಮಾರ ಸೋಮಲಿಂಗಯ್ಯ ಇಂದು ಬಡತನವನ್ನೇ ಮೆಟ್ಟಿ ನಿಲ್ಲುವ ಮೂಲಕ ಆದರ್ಶವಾಗಿದ್ದಾರೆ. ಅಲ್ಲದೇ ಮನಸ್ಸಿದ್ದರೆ ಮಾರ್ಗ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. ಎಲ್ಲಾ ಸೌಕರ್ಯವಿದ್ದು ಸಾಧಿಸಿ ನಿಲ್ಲದವರ ಎದುರು ಇಂತಹ ಶಿಕ್ಷಣ ಪ್ರೇಮಿಗಳು ಇರೋದು ಎಲ್ಲರಿಗೂ ಮಾದರಿಯಾಗಿದೆ. ಬಾಲ ಕಾರ್ಮಿಕ ಎಂಬ ಅನಿಷ್ಟ ಪದ್ಧತಿ ಮೆಟ್ಟಿನಿಂತ ಕುಮಾರ್ ಸಾಧನೆ ಎಲ್ಲರಿಗೂ ಸ್ಪೂರ್ತಿ.

 

Share This Article