ಧಾರವಾಡ: ವಕೀಲೆಯೊಬ್ಬರು (Lawyer) ಠಾಣೆಗೆ ಬಂದಾಗ ಅವರ ಜೊತೆಗೆ ಸಿಪಿಐ (CPI) ಒಬ್ಬರು ಅನುಚಿತ ವರ್ತನೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಧಾರವಾಡದಲ್ಲಿ (Dharwad) ಸಿಪಿಐ ಮೇಲೆ ಪ್ರಕರಣ ದಾಖಲಾಗಿದೆ.
ಧಾರವಾಡ ಗ್ರಾಮೀಣ ಸಿಪಿಐ ಮಂಜುನಾಥ ಕುಸಗಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಹಿಳಾ ವಕೀಲೆ ಒಂದು ಪ್ರಕರಣಕ್ಕೆ ಸಂಬಂಧಿಸಿ ಧಾರವಾಡ ಗ್ರಾಮೀಣ ಠಾಣೆಗೆ ಹೋಗಿದ್ದರು. ಆದರೆ ಈ ವೇಳೆ ವಕೀಲೆಗೆ ಕಣ್ಣು ಹೊಡೆದು, ತನ್ನ ತುಟಿಗೆ ತನ್ನದೇ ಕೈಗೆ ಮುತ್ತು ಕೊಟ್ಟು ವಕೀಲೆಗೆ ಅದನ್ನು ಫ್ಲೈಯಿಂಗ್ ಕಿಸ್ ಮಾಡಿದ್ದರು. ಈ ವೇಳೆ ವಕೀಲೆ ಈ ಬಗ್ಗೆ ಪ್ರಶ್ನೆ ಮಾಡಿದ್ದರೂ ಅದಕ್ಕೆ ಇದು ಮಾಡಿದ್ದು ಏನು ತಪ್ಪು ಎಂದು ಸಿಪಿಐ ಕುಸುಗಲ್ ಪ್ರಶ್ನೆ ಮಾಡಿ ಅನುಚಿತವಾಗಿ ವರ್ತಿಸಿದ್ದ. ಇದನ್ನೂ ಓದಿ: ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿರ್ತಾರೆ; ಥರ್ಟಿ, ಸಿಕ್ಸ್ಟಿ ಅಲ್ಲ 2 ಬಾಟ್ಲಿ ಕುಡಿತಾರೆ – ಪ್ರೀತಂ ಗೌಡ
Advertisement
Advertisement
ಈ ಸಂಬಂಧ ವಕೀಲೆ ದೂರು ಕೊಡಲು ಠಾಣೆಗೆ ಹೋದಾಗ ದೂರು ಪಡೆಯುವುದಕ್ಕೂ ಪೊಲೀಸರು ಹಿಂದೇಟು ಹಾಕಿದ್ದರು. ಪೊಲೀಸರ ವರ್ತನೆ ಖಂಡಿಸಿ ಪ್ರತಿಭಟಿಸಿದ್ದ ಧಾರವಾಡ ವಕೀಲರು, ಎಸ್ಪಿ ಲೋಕೇಶ್ ಜಗಲಾಸರ್ ಅವರಿಗೆ ಮನವಿ ಕೊಟ್ಟು ಕ್ರಮ ಕೈಗೊಳ್ಳಲು ಹೇಳಿದ್ದರು. ಇಲ್ಲದೇ ಹೋದಲ್ಲಿ ಉಗ್ರ ಪ್ರತಿಭಟನೆ ಮಾಡೋ ಎಚ್ಚರಿಕೆ ನೀಡಿದ್ದ ವಕೀಲರು 3 ಗಂಟೆ ಧಾರವಾಡ ಜುಬ್ಲಿ ವೃತ್ತದಲ್ಲಿ ರಸ್ತೆ ತಡೆ ಮಾಡಿದ್ದರು. ಈ ಹಿನ್ನೆಲೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಈಗ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಾದರಕ್ಷೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ- ಇಬ್ಬರ ದುರ್ಮರಣ