ನಾಲ್ವರಿದ್ದ ಬೈಕ್‌ಗೆ ಕಾರು ಡಿಕ್ಕಿ – ಇಬ್ಬರು ಸ್ಥಳದಲ್ಲಿಯೇ ಸಾವು, ಇಬ್ಬರು ಗಂಭೀರ

Public TV
1 Min Read
Raichuru Death

ರಾಯಚೂರು: ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಭೀಕರ ಘಟನೆ ನಗರದ ಹೊರವಲಯದ ಪವರ್ ಗ್ರಿಡ್ ಬಳಿ ನಡೆದಿದೆ.

ಮೃತರನ್ನು ಸಿರವಾರ ತಾಲೂಕಿನ ಕಲ್ಲೂರು ನಿವಾಸಿಗಳಾದ ಶರಣಬಸವ (28), ಶಿವು (26) ಎಂದು ಗುರುತಿಸಲಾಗಿದ್ದು, ಇರ್ಫಾನ್ ಹಾಗೂ ಗರೀಬ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ. ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ಯೂಟ್ಯೂಬ್ ಟ್ಯುಟೋರಿಯಲ್ ನೋಡ್ತಾ ಇಸಿಜಿ ಪರೀಕ್ಷೆ ಮಾಡಿದ ಲ್ಯಾಬ್ ಅಟೆಂಡರ್ – ಜೋಧ್‌ಪುರದ ವೀಡಿಯೋ ವೈರಲ್‌

ರಾಯಚೂರಿನಿಂದ ಕಲ್ಲೂರಿಗೆ ಕಟ್ಟಡ ಕೆಲಸಕ್ಕಾಗಿ ನಿತ್ಯವು ಪ್ರಯಾಣಿಸುತ್ತಿದ್ದರು. ಒಂದೇ ಬೈಕನಲ್ಲಿ ನಾಲ್ವರು ಹೊರಟಿದ್ದಾಗ ಪವರ್ ಗ್ರಿಡ್ ಬಳಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಕಾರು ಸಹಿತ ಚಾಲಕ ಪರಾರಿಯಾಗಿದ್ದಾನೆ.

ಸದ್ಯ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Raihcuru Police Station) ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ – ಕಾಮುಕನನ್ನು ಮರಕ್ಕೆ ಕಟ್ಟಿ ಬಡಿದು ಕೊಂದ ಗ್ರಾಮಸ್ಥರು

Share This Article