ಚಿಕ್ಕಬಳ್ಳಾಪುರ: ಪ್ರೀತಿ-ಪ್ರೇಮ (Love) ಅಂತಾ ಸುತ್ತಾಡಿ ಕೊನೆಗೆ ಮನೆಯವರು ನೋಡಿದ ಹುಡುಗನನ್ನೇ ವರಿಸಿದ ಪ್ರಿಯತಮೆಯನ್ನು ಭಗ್ನಪ್ರೇಮಿಯೊಬ್ಬ ಚಾಕುನಿಂದ ಇರಿದು ಕೊಂದಿರುವ (Murder) ಘಟನೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಸೌಮ್ಯ (23) ಹತ್ಯೆಗೊಳಗಾದ ಗೃಹಿಣಿಯಾಗಿದ್ದು, ಸುಬ್ರಹ್ಮಣ್ಯ ಕೊಲೆ ಮಾಡಿದ ಪಾಗಲ್ ಪ್ರೇಮಿ. ಇದನ್ನೂ ಓದಿ: ಶ್ರೀಯಾ ಶರಣ್ ಜೊತೆ ನಾಳೆ ಬೆಂಗಳೂರಿಗೆ ಬರಲಿದ್ದಾರೆ ‘ಬಾಹುಬಲಿ’ ಖ್ಯಾತಿಯ ನಟ ರಾಣಾ ದಗ್ಗುಬಾಟಿ
ಏನಿದು ಪ್ರಕರಣ?
ಮೃತ ಸೌಮ್ಯ ಹಾಗೂ ಸುಬ್ರಹ್ಮಣ್ಯ ಇಲ್ಲಿನ ನಾಗವಾರ ಬಳಿಯ ಕಾಫಿ ಡೇ (Coffee Day) ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು (Lovers). ಆದರೆ ಸೌಮ್ಯಾಳಿಗೆ ಕಳೆದ 15 ದಿನಗಳ ಹಿಂದೆಯಷ್ಟೇ ಬೇರೆ ಯುವಕನೊಂದಿಗೆ ಮದುವೆ ನಡೆದಿತ್ತು. ಮದುವೆ ಬಳಿಕ ತವರು ಮನೆಗೆ ಸೌಮ್ಯ ಬಂದಿರುವ ವಿಷಯ ತಿಳಿದುಕೊಂಡ ಸುಬ್ರಹ್ಮಣ್ಯ ಮನೆಯಲ್ಲೇ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದ. ನಿನ್ನೆ ತಡರಾತ್ರಿ ಯುವತಿ ಗ್ರಾಮಕ್ಕೆ ಆಗಮಿಸಿ ಮನೆಯವರು ಗಣೇಶನ ಪೂಜೆಗೆ (Ganesha Puja) ತೆರಳಿದ್ದ ವೇಳೆ ಏಕಾಂಗಿಯಾಗಿದ್ದ ಸೌಮ್ಯಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಎಕ್ಸ್‌ಬಾಯ್‌ಫ್ರೆಂಡ್‌ಗೆ ಮತ್ತೆ ಲವ್ ಯೂ ಎಂದ ಜಾನ್ವಿ ಕಪೂರ್
ಪೂಜೆ ಮುಗಿಸಿ ಬಂದಕೂಡಲೇ ಮನೆಯಲ್ಲಿ ರಕ್ತಸಿಕ್ತಳಾಗಿ ಬಿದ್ದಿದ್ದ ಸೌಮ್ಯಾಳನ್ನು ನೋಡಿ ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಸೌಮ್ಯ ಮೃತಪಟ್ಟಿದ್ದಾಳೆ. ಇತ್ತ ಸುಬ್ರಹ್ಮಣ್ಯ ಸಹ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಸುಬ್ರಹ್ಮಣ್ಯ ಆಸ್ಪತ್ರೆಗೆ ದಾಖಲಾದ ಮಾಹಿತಿ ಇನ್ನೂ ಗಮನಕ್ಕೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯಪುರ ಪೊಲೀಸ್ ಠಾಣೆಯಲ್ಲಿ (Police Case) ಪ್ರಕರಣ ದಾಖಲಾಗಿದೆ.