ಯಾದಗಿರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ ಪುತ್ರನಿಗೆ ಚಾಕಲೇಟ್ ಕೊಡಿಸಿ ಪ್ರಿಯಕರ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗುರುಮಠಕಲ್ (Gurumatkal) ತಾಲೂಕಿನ ಕಾಕಲವಾರ (Kakalwar) ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು 11 ವರ್ಷದ ನರೇಂದ್ರ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ ಜೋ ರೂಟ್
ಹಲವು ವರ್ಷಗಳಿಂದ ನರೇಂದ್ರನ ತಾಯಿ ಗೋವಿಂದಮ್ಮಳ ಜೊತೆ ಅಬ್ದುಲ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಆರೋಪಿ ಅಬ್ದುಲ್ ಗೋವಿಂದಮ್ಮಳನ್ನು ಓಡಿ ಹೋಗಿ ಮದುವೆಯಾಗೋಣ ಎಂದು ಕರೆದಿದ್ದ. ಆದರೆ ಗೋವಿಂದಮ್ಮ ಮಗನಿಗಾಗಿ ಓಡಿ ಹೋಗಿ ಮದುವೆಯಾಗುವುದನ್ನು ನಿರಾಕರಿಸಿದ್ದಳು. ಆಕೆಯ ಮಗನನ್ನು ಕಿರಾಣಿ ಅಂಗಡಿಗೆ ಕರೆದುಕೊಂಡು ಹೋಗಿ ಚಾಕಲೇಟ್ ಕೊಡಿಸಿದ್ದ. ಬಳಿಕ ಅಲ್ಲಿಂದ ಬಾಲಕನನ್ನು ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆಕೆಯನ್ನು ವರಿಸಿಕೊಳ್ಳಲು ಈ ಕೃತ್ಯವನ್ನು ಎಸಗಿದ್ದ.
ಸೆ.30ರಂದು ಅಬ್ದುಲ್ ಬಾಲಕನನ್ನು ಕೊಲೆ ಮಾಡಿದ್ದು, ಅನುಮಾನಾಸ್ಪದವಾಗಿ ಕಂಡಿದೆ. ತನಿಖೆ ನಡೆಸಿದಾಗ ಕಿರಾಣಿ ಅಂಗಡಿಯಲ್ಲಿ ಚಾಕಲೇಟ್ ಕೊಡಿಸಿ ಬಾಲಕನನ್ನು ಕರೆದೊಯ್ಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕನ ಸಾವು ನಡೆದ 9 ದಿನಗಳ ಬಳಿಕ ಪ್ರಕರಣ ಬೇಧಿಸಿ ಆರೋಪಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ.
ಸದ್ಯ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಂಜು ವೆಡ್ಸ್ ಗೀತಾ 2 : ಮಂಗ್ಲಿ ಹಾಡಿಗೆ ಸೊಂಟ ಬಳುಕಿಸಿದ ರಾಗಿಣಿ