ಬಾಲಿವುಡ್ ಮತ್ತು ದಕ್ಷಿಣ ತಾರೆಯರ ಮುಸುಕಿನ ಗುದ್ದಾಟ ಕಲಾವಿದರು ಮತ್ತು ತಾಂತ್ರಿಕ ವರ್ಗದವರನ್ನು ದಾಟಿ ಥಿಯೇಟರ್ ಮಾಲೀಕರ ಅಂಗಳ ತಲುಪಿದೆ. ಭಾರತೀಯ ಸಿನಿಮಾ ರಂಗ ಎಂದರೆ, ಅದು ಕೇವಲ ಬಾಲಿವುಡ್ ಎಂದು ಬಿಂಬಿಸುತ್ತಿದ್ದ ಮನಸುಗಳು ಮತ್ತೆ ಇದೀಗ ಸೌತ್ ನಟನೊಬ್ಬನನ್ನು ಬಾಲಿವುಡ್ ಒಳಗೆ ಬಿಟ್ಟುಕೊಳ್ಳದಂತೆ ಕಿಡಿಕಾರುತ್ತಿವೆ.
Advertisement
ನಿನ್ನೆಯಷ್ಟೇ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ರಿಲೀಸ್ ಆಗಿದೆ. ಅದು ನೇರವಾಗಿ ಹಿಂದಿ ಭಾಷೆಯಲ್ಲಿ ನಿರ್ಮಾಣವಾದರೂ, ಈ ಸಿನಿಮಾದ ನಿರ್ದೇಶಕರು ಮತ್ತು ಹೀರೋ ದಕ್ಷಿಣದವರು. ಹಾಗಾಗಿ ಈ ಸಿನಿಮಾವನ್ನು ಸೋಲಿಸುವಂತಹ ಪ್ರಯತ್ನ ನಡೆದಿದೆಯಾ ಎನ್ನುವಂತಹ ಘಟನೆಗಳು ಮುಂಬೈ ಬಜಾರ್ ನಲ್ಲಿ ನಡೆಯುತ್ತಿವೆ. ಈ ಸಿನಿಮಾವನ್ನು ಪ್ರದರ್ಶನ ಮಾಡುತ್ತಿರುವ ಮುಂಬೈ ಥಿಯೇಟರ್ ಮಾಲಿಕ ಮನೋಜ್ ದೇಸಾಯಿ ಲೈಗರ್ ಸಿನಿಮಾದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್
Advertisement
Advertisement
ಮನೋಜ್ ದೇಸಾಯಿ ಮುಂಬೈನಲ್ಲಿ ಗೈಟಿ ಗ್ಯಾಲಾಕ್ಷಿ ಮತ್ತು ಮರಾಠ ಮಂದಿರ ಎಂಬ ಎರಡು ಥಿಯೇಟರ್ ನಡೆಸುತ್ತಿದ್ದಾರೆ. ಇವರು ವಿಜಯ್ ದೇವರಕೊಂಡ ಬಗ್ಗೆ ಮಾತನಾಡುತ್ತಾ, ‘ಆತ ದೇವರಕೊಂಡ ಅಲ್ಲ, ಅನಕೊಂಡ ಎಂದು ಜರೆದಿದ್ದಾರೆ. ಈ ಹುಡುಗನ ಅಹಂಕಾರವೇ ಸಿನಿಮಾ ಸೋಲಿಗೆ ಕಾರಣವೆಂದು ನೇರವಾಗಿಯೇ ಆರೋಪಿಸಿದ್ದಾರೆ. ಬಾಯ್ಕಾಟಿ ವಿಚಾರವಾಗಿ ದೇವರಕೊಂಡ ಅಹಂಕಾರದ ಮಾತುಗಳನ್ನು ಆಡಿದ್ದರು ಎಂದು ಹೇಳಿದ್ದಾರೆ.
Advertisement
ಬಾಯ್ಕಾಟ್ ವಿಚಾರವಾಗಿ ವಿಜಯ್ ದೇವರಕೊಂಡ ಧ್ವನಿ ಎತ್ತಿದ್ದರು. ಸಿನಿಮಾ ನೋಡುವವರು ಬಾಯ್ಕಾಟ್ ಅನ್ನುವುದಿಲ್ಲ. ಹಾಗೆ ಎನ್ನುವವರು ನನ್ನ ಸಿನಿಮಾ ನೋಡಬೇಕು ಎಂದು ಹೇಳಿಕೆಕೊಟ್ಟಿದ್ದರು. ಈ ಅಹಂಕಾರವೇ ಲೈಗರ್ ಹಿನ್ನೆಡೆಗೆ ಕಾರಣವಾಗಿದೆ ಎಂದು ಮನೋಜ್ ದೇಸಾಯಿ ವಿಡಿಯೋ ಮೂಲಕ ಹೇಳಿಕೆ ಕೊಟ್ಟಿದ್ದಾರೆ.