ಚಾಮರಾಜನಗರ ‘ಕೈ’ ಅಭ್ಯರ್ಥಿ ಸುನೀಲ್ ಬೋಸ್‌ ನಾಮಪತ್ರ ತಿರಸ್ಕರಿಸುವಂತೆ ದೂರು

Public TV
1 Min Read
sunil bose N

ಚಾಮರಾಜನಗರ: ಚಾಮರಾಜನಗರ (Chamarajanagara) ಕ್ಷೇತ್ರ ‘ಕೈ’ ಅಭ್ಯರ್ಥಿ ಸುನೀಲ್ ಬೋಸ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸುನೀಲ್‌ ಬೋಸ್ (Sunil Bose) ನಾಮಪತ್ರ ತಿರಸ್ಕರಿಸುವಂತೆ ದೂರು ದಾಖಲಾಗಿದೆ.

ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣ ಪತ್ರದಲ್ಲಿ ಪ್ರಮುಖ ಮಾಹಿತಿ ಮರೆಮಾಚಿದ್ದು, ಅವರ ನಾಮಪತ್ರ ತಿರಸ್ಕರಿಸುವಂತೆ ಆಗ್ರಹಿಸಿ ಜಿಲ್ಲಾ ಚುನಾವಣಾಧಿಕಾರಿಗೆ ಬಿಜೆಪಿ ದೂರು ನೀಡಿದೆ. ಇದನ್ನೂ ಓದಿ: ಯಾವ ಬಿಜೆಪಿ ‌ಕಾರ್ಯಕರ್ತ‌ನೂ ಇಂತಹ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಭಾಗಿಯಾಗಲಾರ: ಆರಗ ಜ್ಞಾನೇಂದ್ರ

Sunil Bose

ಸುನೀಲ್ ಬೋಸ್ ತಮ್ಮ ವೈವಾಹಿಕ ಜೀವನದ ಬಗ್ಗೆ ಮರೆಮಾಚಿದ್ದಾರೆ. ಪ್ರಮಾಣ ಪತ್ರದಲ್ಲಿ ಹೆಂಡತಿ, ಮಕ್ಕಳು ಹಾಗೂ ಹಿಂದೂ ಅವಿಭಕ್ತ ಕುಟುಂಬದ ಪ್ರಮುಖ ಮಾಹಿತಿ ಮುಚ್ಚಿಟ್ಟಿದ್ದಾರೆ. ಹೆಂಡತಿ, ಮಕ್ಕಳು ಹಾಗೂ ತಂದೆ-ತಾಯಿಯ ಆಸ್ತಿ ವಿವರ ಘೋಷಿಸಿಲ್ಲ. ಹಾಗಾಗಿ ಸುನೀಲ್ ಬೋಸ್ ಸಲ್ಲಿಸಿರುವ ಪ್ರಮಾಣ ಪತ್ರ ಅಸಿಂಧುವಾಗಿದ್ದು, ಅವರ ನಾಮಪತ್ರ ಅಸಿಂಧುಗೊಳಿಸುವಂತೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಅವರ ಪ್ರತಿನಿಧಿಯಾಗಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್ ದೂರು ಸಲ್ಲಿಸಿದ್ದಾರೆ.

ಸುನೀಲ್ ಬೋಸ್ ಹೆಂಡತಿ, ಮಕ್ಕಳ ಜೊತೆಗೆ ಇರುವ ಬಗ್ಗೆ ಛಾಯಾಚಿತ್ರಗಳನ್ನು ಲಗತ್ತಿಸಿ ಅವರು ದೂರು ನೀಡಿದ್ದಾರೆ. ಫೇಸ್‌ಬುಕ್ ಅಕೌಂಟ್‌ನಲ್ಲಿದ್ದ ಪೋಟೋಗಳನ್ನು ಆಧರಿಸಿ ದೂರು ಕೊಟ್ಟಿದ್ದೇವೆಂದು ತಿಳಿಸಿದ್ದಾರೆ. ಇದನ್ನೂ ಓದಿ: Exclusive: ಜನಸೇವೆಗಾಗಿ ನಿಂತ ವ್ಯಕ್ತಿ ನಿಜವಾದ ರಾಜ ಆಗ್ತಾನೆ – ರಾಜಕೀಯ ಅನುಭವ ಹಂಚಿಕೊಂಡ ಯದುವೀರ್‌

Share This Article