ಬೆಂಗಳೂರು: ಬೃಹತ್ ಕಟ್ಟಡಗಳಲ್ಲಿ ಉಂಟಾಗುವ ಅಗ್ನಿ ಅವಘಡಗಳನ್ನ ನಿಭಾಯಿಸಲು ಅತ್ಯಾಧುನಿಕ ತಂತ್ರಜ್ಞಾನದ 90 ಮೀಟರ್ ಎತ್ತರ ಏರುವ ಏರಿಯಲ್ ಲ್ಯಾಡರ್ (Aerial Ladder) ವಾಹನವನ್ನು ರಾಜ್ಯ ಸರ್ಕಾರ ಖರೀದಿ ಮಾಡಿ ಅಗ್ನಿಶಾಮಕ ಇಲಾಖೆಗೆ ನೀಡಿದೆ.
Advertisement
ವಿಧಾನಸೌಧದ (Vidhansaudha) ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ನಡೆದ ಕಾರ್ಯಕ್ರಮದಲ್ಲಿ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ((Basavaraj Bommai)) ಹಾಗೂ ಸಚಿವರು ಏರಿಯಲ್ ಲ್ಯಾಡರ್ ಮೇಲೆ ಏರಿ ನೂತನ ಏರಿಯಲ್ ಲ್ಯಾಡರ್ ವಾಹನವನ್ನು ಲೋಕಾರ್ಪಣೆ ಮಾಡಿದರು. ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಬೋರ್ಡ್‍ಗಳ ಕದನ – ಭಾರತ ಯಾರ ಮಾತನ್ನು ಕೇಳಲ್ಲ: ಅನುರಾಗ್ ಠಾಕೂರ್
Advertisement
ಮುಖ್ಯಮಂತ್ರಿ @BSBommai ಅವರು ಇಂದು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ 90 ಮೀಟರ್ ಏರಿಯಲ್ ಪ್ಲಾಟ್ಫಾರ್ಮ್ ಲ್ಯಾಡರ್ ಅನ್ನು ಲೋಕಾರ್ಪಣೆ ಮಾಡಿದರು.
1/2 pic.twitter.com/jXrK9KmyAo
— CM of Karnataka (@CMofKarnataka) October 20, 2022
Advertisement
ಈ ಏರಿಯಲ್ ಲ್ಯಾಡರ್ ವಾಹನಕ್ಕೆ ಸುಮಾರು 32 ಕೋಟಿ ವೆಚ್ಚವಾಗಿದೆ. ಫಿನ್ಲೆಂಡ್‍ನ ಬ್ರೊಂಟೋ ಕಂಪನಿಯಿಂದ ಈ ವಾಹನವನ್ನು ಖರೀದಿ ಮಾಡಲಾಗಿದೆ. ಈ ಏರಿಯಲ್ ಲ್ಯಾಡರ್ ವಾಹನ 90 ಮೀಟರ್ ಎತ್ತರದಲ್ಲಿ ಸಂಭವಿಸಬಹುದಾದ ಅಗ್ನಿ ನಂದಿಸಲು ಸಹಾಯಕವಾಗಲಿದೆ.
Advertisement
ಮುಖ್ಯಮಂತ್ರಿ @BSBommai ಅವರು ಇಂದು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ 90 ಮೀಟರ್ ಏರಿಯಲ್ ಪ್ಲಾಟ್ಫಾರ್ಮ್ ಲ್ಯಾಡರ್ ಅನ್ನು ಲೋಕಾರ್ಪಣೆ ಮಾಡಿದರು. pic.twitter.com/jUASHgJMR6
— CM of Karnataka (@CMofKarnataka) October 20, 2022
ಅತ್ಯಾಧುನಿಕ ಏರಿಯಲ್ ಲ್ಯಾಡರ್ ವಾಹನ ಏಕ ಕಾಲಕ್ಕೆ 500 ಕೆಜಿ ತೂಕ, ಸುಮಾರು 6 ಜನರನ್ನು ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ 3,600 ಲೀಟರ್ ನೀರನ್ನು ಏಕಕಾಲಕ್ಕೆ ಹೊರ ಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. ಇದನ್ನೂಓದಿ: ಮಗನ ಸಾವಿನ ಪ್ರಕರಣವನ್ನು ಮತ್ತೆ ಸಿಬಿಐಗೆ ಒಪ್ಪಿಸಿ – ಸಿಎಂಗೆ ಮನವಿ ಸಲ್ಲಿಸಿದ ಪರೇಶ್ ಮೆಸ್ತಾ ತಂದೆ
ನಮ್ಮ ದೇಶದಲ್ಲಿ ಮುಂಬೈ ನಗರದಲ್ಲಿ ಬಿಟ್ಟರೆ 90 ಮೀಟರ್ ಏರಿಯಲ್ ಲ್ಯಾಡರ್ ವಾಹನ ಯಾವ ನಗರದಲ್ಲೂ ಇರಲಿಲ್ಲ. ಈಗ ಬೆಂಗಳೂರಿಗೆ ಈ ವಾಹನವನ್ನು ಖರೀದಿ ಮಾಡಲಾಗಿದೆ. ಸದ್ಯ ನಮ್ಮ ಅಗ್ನಿಶಾಮಕ ದಳದಲ್ಲಿ 32 ಮತ್ತು 54 ಮೀಟರ್ ಏರಿಯಲ್ ಲ್ಯಾಡರ್ ವಾಹನ ಇತ್ತು. ಈಗ 90 ಮೀಟರ್ ಲ್ಯಾಡರ್ ಖರೀದಿ ಮಾಡಿದ್ದು, ಸುಮಾರು 30 ಅಂತಸ್ತಿನವರೆಗೂ ಅಗ್ನಿ ನಂದಿಸಲು ಸಹಕಾರಿಯಾಗಲಿದೆ.