ರಾಯಚೂರು: ಪೇಂಟ್‌ಗೆ ಬಳಸುವ ಥಿನ್ನರ್ ಕುಡಿದು ಬಾಲಕ ಸಾವನ್ನಪ್ಪಿರುವ ಘಟನೆ ರಾಯಚೂರು (Raichuru) ಜಿಲ್ಲೆ ಮಾನ್ವಿ ತಾಲ್ಲೂಕಿನ ಹಿರೆಕೊಟ್ನೇಕಲ್ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಶಿವಾರ್ಜುನ ನಾಯಕ್(3) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಉದ್ಯೋಗ ಖಾತ್ರಿ | 150 ಮಾನವ ದಿನಗಳಿಗೆ ಏರಿಸದಿರುವುದು ಬೇಸರದ ಸಂಗತಿ – ಪ್ರಿಯಾಂಕ್ ಖರ್ಗೆ
Advertisement
Advertisement
ಮೃತ ಬಾಲಕನ ಮನೆಯಲ್ಲಿ ಪೇಂಟ್‌ಗೆ ಕೆಲಸ ನಡೆಯುತ್ತಿತ್ತು. ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆ ಪೇಂಟ್‌ಗೆ ಕೆಲಸಕ್ಕಾಗಿ ಥಿನ್ನರ್ ತಂದಿದ್ದರು. ಈ ವೇಳೆ ಅಕಸ್ಮಾತ್ ಆಗಿ ಮನೆಯಲ್ಲಿಟ್ಟಿದ್ದ ಥಿನ್ನರ್‌ನ್ನು ಬಾಲಕ ಕುಡಿದಿದ್ದಾನೆ. ಅಸ್ವಸ್ಥಗೊಂಡಿದ್ದ ಆತನನ್ನು ಕೂಡಲೇ ಮಾನ್ವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
Advertisement
ಮಾನ್ವಿ (Manvi) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಕೊಡವರ ಸಂಸ್ಕೃತಿ ಉಳಿವಿಗಾಗಿ ಪಾದಯಾತ್ರೆ – ಫೆ.7ರಂದು ದಕ್ಷಿಣ ಕೊಡಗಿನ 5 ಶಾಲಾ ಕಾಲೇಜಿಗೆ ರಜೆ ಘೋಷಣೆ