ಚಿಪ್ಸ್ ಕರಿಯುವ ಎಣ್ಣೆ ಬಾಣಲೆಗೆ ಬಿದ್ದಿದ್ದ 25 ರ ಯುವಕ ಸಾವು

Public TV
1 Min Read
chikkamagaluru youth died

ಚಿಕ್ಕಮಗಳೂರು: ಚಿಪ್ಸ್ ಕರಿಯುವ ಬಾಣಲೆಗೆ ಬಿದ್ದಿದ್ದ 25 ವರ್ಷದ ಯುವಕ 13 ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದಲ್ಲಿ ನಡೆದಿದೆ.

ಸಂದೇಶ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಮೃತ ಸಂದೇಶ್ ಕಿಕ್ರೆ ಗ್ರಾಮದಲ್ಲಿ ಚಿಪ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಚಿಪ್ಸ್‌ ಫ್ಯಾಕ್ಟರಿಯಲ್ಲಿ 20 ಕ್ಕೂ ಹೆಚ್ಚು ಯುವಕರು ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೋಮು ಸಂಘರ್ಷದಲ್ಲಿ ಬಲಿಯಾದ ನಾಲ್ವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

BOILING OIL

ಕಳೆದ 13 ದಿನಗಳ ಹಿಂದೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ಚಿಪ್ಸ್ ಕರಿಯುವ ಒಲೆಗೆ ತಾಪಮಾನ ಹೆಚ್ಚಿರಲಿ, ಎಣ್ಣೆ ಬೇಗ ಬಿಸಿಯಾಗಲಿ ಎಂಬ ಕಾರಣಕ್ಕೆ ಎಣ್ಣೆ ಅಂಶ ಇರುವ ಮತ್ತು ತಾಪಮಾನವೂ ಹೆಚ್ಚಿರುವ ಗೇರು ಬೀಜಗಳನ್ನ ಹಾಕುತ್ತಾರೆ. ಹೊಗೆ ಹೆಚ್ಚಾಗಿ ಕಟ್ಟಿಕೊಂಡಿದ್ದ ಹೊಗೆ ಪೈಪ್ ಕ್ಲೀನ್ ಮಾಡಲು ಫ್ಯಾಕ್ಟರಿಯ ಮೇಲ್ಛಾವಣಿಗೆ ಹತ್ತಿದ್ದ ಸಂದೇಶ್ ಆಯಾ ತಪ್ಪಿ ಸೀದಾ ಚಿಪ್ಸ್ ಕರಿಯುವ ದೊಡ್ಡ ಬಾಣಲೆಗೆ ಬಿದ್ದಿದ್ದ.

ಸಂದೇಶ್‌ ದೇಹದ 80% ರಷ್ಟು ಭಾಗ ಸುಟ್ಟು ಹೋಗಿತ್ತು. ಕೂಡಲೇ ಶೃಂಗೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಕಳೆದ 13 ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡಿದ್ದ ಸಂದೇಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸಂದೇಶ್ ಮೇಲ್ಘಾವಣಿಗೆ ಹತ್ತಿದಾಗ ಕಬ್ಬಿಣದ ರಾಡ್ ಮೇಲೆ ನಡೆದು ಹೋಗಿದ್ದರೆ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ಸಂದೇಶ್ ಸಿಮೆಂಟ್ ಶೀಟ್‍ಗಳ ಮೇಲೆ ನಡೆದು ಹೋದ ಪರಿಣಾಮ ಆಯಾತಪ್ಪಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ವಿಸ್ಕಿ ಬಾಟ್ಲಿಯಲ್ಲಿ 13 ಕೋಟಿ ರೂ. ಮೌಲ್ಯದ ಕೊಕೇನ್- ಕೀನ್ಯಾ ಮಹಿಳೆ ಅರೆಸ್ಟ್

ಆತನೇ ಬೆಂಕಿ ಹಾಕಿ ಕಾಯಿಸಿದ್ದ ಕುದಿಯತ್ತಿದ್ದ ಎಣ್ಣೆ ಬಾಣಲೆಗೆ ಬಿದ್ದು ತಲೆ ಹಾಗೂ ಕಾಲು ಬಿಟ್ಟು ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. 13 ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ಸಂದೇಶ್‌ ಸಾವನ್ನಪ್ಪಿದ್ದಾನೆ.

Share This Article