ಗೋವಿಂದರಾಜನಗರದಲ್ಲಿ ಪುನೀತ್ ಹೆಸ್ರಲ್ಲಿ 205 ಬೆಡ್ ಸಾಮರ್ಥ್ಯದ ಆಸ್ಪತ್ರೆ: ಸೋಮಣ್ಣ

Advertisements

ಚಾಮರಾಜನಗರ: ಬೆಂಗಳೂರಿನ (Bengaluru) ಗೋವಿಂದರಾಜನಗರ (Govindarajanagara) ಕ್ಷೇತ್ರದಲ್ಲಿ 205 ಬೆಡ್ ಸಾಮರ್ಥ್ಯ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು ಡಾ.ಪುನೀತ್‍ರಾಜ್‍ಕುಮಾರ್ (Puneeth Rajkumar) ಹೆಸರು ನಾಮಕರಣ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ (V. Somanna ತಿಳಿಸಿದ್ದಾರೆ.

Advertisements

ಚಾಮರಾಜನಗರದಲ್ಲಿ (Chamarajanagara) ಮಾತನಾಡಿದ ಅವರು, ಜನವರಿ 5 ಅಥವಾ 6 ರಂದು ಈ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗುವುದು. ಚಲುವ ಚಾಮರಾಜನಗರದ ರಾಯಾಭಾರಿಯಾಗಿದ್ದ ಡಾ. ಪುನೀತ್ ರಾಜಕುಮಾರ್ ಅವರನ್ನು ಜಿಲ್ಲಾಡಳಿತ ಕಡೆಗಣಿಸಿದೆ ಎಂಬ ಆರೋಪ ನಿರಾಧಾರ. ಇಡೀ ರಾಜ್ಯವೇ ಕಾರ್ಯಕ್ರಮ ಮಾಡುವಾಗ ಜಿಲ್ಲಾಡಳಿತವೂ ಅದರ ಅಂಗವಾಗಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಮೋರ್ಬಿ ತೂಗು ಸೇತುವೆ ದುರಂತಕ್ಕೆ 135 ಬಲಿ – ಸಂತ್ರಸ್ತರಿಗೆ ಪ್ರಧಾನಿ ಮೋದಿ ಸಾಂತ್ವನ

Advertisements

ಈಗಾಗಲೇ ರಂಗಮಂದಿರಕ್ಕೆ ವರನಟ ಡಾ. ರಾಜಕುಮಾರ್ ಹೆಸರನ್ನು ನಾಮಕರಣ ಮಾಡಿದ್ದೇವೆ. ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರು ಈ ರಾಜ್ಯದ ಸಂಪತ್ತು, ಅಪ್ಪು ಅವರನ್ನು ಇಷ್ಟು ಸಣ್ಣ ವಯಸ್ಸಿಗೆ ಕಳೆದುಕೊಳ್ಳುತ್ತೇವೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇಂತಹ ಒಬ್ಬ ಪುಣ್ಯಾತ್ಮ ನಮ್ಮ ಕರ್ನಾಟಕದಲ್ಲಿ ಜನಿಸಿದ್ದು ನಮ್ಮ ಪುಣ್ಯ ಎಂದಿದ್ದಾರೆ. ಇದನ್ನೂ ಓದಿ: 2ನೇ ಬಾರಿಗೆ ದಾಖಲೆ GST ಸಂಗ್ರಹ – 1.52 ಲಕ್ಷ ಕೋಟಿಯಲ್ಲಿ ಯಾವ ರಾಜ್ಯದ ಪಾಲು ಎಷ್ಟು?

Live Tv

Advertisements
Exit mobile version