ಪುಷ್ಪ 2 ಅಲ್ಲು ಅರ್ಜುನ್ ಮುಂದೆ ಅಬ್ಬರಿಸಲು ಬರುತ್ತಿದ್ದಾರೆ ವಿದೇಶಿ ವಿಲನ್

Public TV
2 Min Read
allu arjun

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಗಳಿಸಿದ `ಪುಷ್ಪ’ (Pushpa) ಸಿನಿಮಾ, ಇದೀಗ ಸೀಕ್ವೆಲ್ ರೂಪದಲ್ಲಿ ಮತ್ತೆ ತೆರೆ ಅಪ್ಪಳಿಸಲು ರೆಡಿಯಾಗುತ್ತಿದೆ. `ಪುಷ್ಪ 2′ (Pushpa 2) ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಕೊಂಡಿರುವ ಫ್ಯಾನ್ಸ್‌ಗೆ, ಈ ಚಿತ್ರದ ಕುರಿತು ಹೊಸ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಅಲ್ಲು ಅರ್ಜುನ್‌ಗೆ ಟಕ್ಕರ್ ಕೊಡಲು ವಿದೇಶಿ ವಿಲನ್ ಎಂಟ್ರಿಯಾಗಿದೆ.

Rashmika Mandanna Allu Arjun Pushpa 2

`ಪುಷ್ಪ’ ಸಿನಿಮಾ ಸೂಪರ್ ಹಿಟ್ ಆದ್ಮೇಲೆ ನಿರೀಕ್ಷೆಯ ಮಟ್ಟಕ್ಕೆ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶಕ ಸುಕುಮಾರ್ (Sukumar) ಅವರು ಪ್ರಯತ್ನಿಸುತ್ತಿದ್ದಾರೆ. ವಿಲನ್ ಸ್ಟ್ರಾಂಗ್ ಆಗಿ ಇದ್ದಷ್ಟು ಹೀರೋ ಗತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆ ಕಾರಣಕ್ಕಾಗಿ ಖಡಕ್ ವಿಲನ್‌ಗಳನ್ನು ಚಿತ್ರತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ತಮಿಳಿನತ್ತ ಹೊಂಬಾಳೆ ಫಿಲ್ಮ್ಸ್:ಕೀರ್ತಿ ಸುರೇಶ್ ನಟನೆಯ `ರಘುತಥಾ’ ಚಿತ್ರ ನಿರ್ಮಾಣಕ್ಕೆ ಸಾಥ್

ಇರಾನ್ ಮೂಲದ ನಟ ಸಜ್ಜಾದ್ ಡೆಲಾಫ್ರೂಜ್, (Sajjad Delafrooz ) ಈ ಹಿಂದೆ ಸಲ್ಮಾನ್ ಖಾನ್ (Salman Khan) ನಟನೆಯ `ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಅವರು ಭಯಾನಕ ವಿಲನ್ ಪಾತ್ರ ಮಾಡಿ ಸೈ ಎನಿಸಿಕೊಂಡರು. ಭಯಾನಕ ಪಾತ್ರಗಳ ಮೂಲಕ ಬೆಚ್ಚಿ ಬೀಳಿಸಿರುವ ನಟನಿಗೆ ಈಗ `ಪುಷ್ಪ 2′ ಚಿತ್ರದಲ್ಲಿ ನಟಿಸುವ ಚಾನ್ಸ್ ಅವರಿಗೆ ಸಿಕ್ಕಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದಷ್ಟು ಬೇಗ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

Rashmika Mandanna Allu Arjun Pushpa 4

ʻಪುಷ್ಪʼ ಪಾರ್ಟ್ 2ಗಾಗಿ ಸಿನಿಮಾದ ಕಥೆಯ ಮೇಲೆ ನಿರ್ದೇಶಕ ಸುಕುಮಾರ್ ಅವರು ಸಾಕಷ್ಟು ಹೋಮ್ ವರ್ಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಥಾನಾಯಕ ಪುಷ್ಪರಾಜ್‌ನ ಸಾಮ್ರಾಜ್ಯ ದೊಡ್ಡದಾಗಲಿದೆ. ರಕ್ತ ಚಂದನ ಸಾಗಾಣಿಕೆಯ ದಂಧೆ ವಿದೇಶಕ್ಕೂ ಹಬ್ಬಲಿದೆ. ಹಾಗಾಗಿ ವಿವಿಧ ದೇಶಗಳಿಗೆ ಪುಷ್ಪರಾಜ್ ತೆರಳುತ್ತಾನೆ. ಅಲ್ಲಿ ಅನೇಕ ವಿಲನ್‌ಗಳನ್ನು ಎದುರು ಹಾಕಿಕೊಳ್ಳುತ್ತಾನೆ. ಈ ರೀತಿಯಾಗಿ ಕಥೆ ಸಾಗಲಿದೆಯಂತೆ.

ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಪಾರ್ಟ್ 2ನಲ್ಲೂ ಕಮಾಲ್ ಮಾಡಲಿದ್ದಾರೆ. ಪುಷ್ಪನ ಶ್ರೀವಲ್ಲಿ ಮತ್ತೆ ಮಿಂಚಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *