450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

Public TV
3 Min Read
England break 112 year old record score 506 runs vs Pakistan on Day 1 of Rawalpindi Test 2

ರಾವಲ್ಪಿಂಡಿ: ಪಾಕಿಸ್ತಾನದ(Pakistan) ವಿರುದ್ಧ ರಾವಲ್ಪಿಂಡಿಯಲ್ಲಿ ಇಂದಿನಿಂದ ಶುರುವಾದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್(England) ಬ್ಯಾಟರ್‌ಗಳು ವಿಶ್ವದಾಖಲೆ(World Record) ನಿರ್ಮಿಸಿದ್ದಾರೆ. ಮೊದಲ ದಿನವೇ ರನ್ ಸುನಾಮಿ ಎದ್ದಿದ್ದು ಟಾಸ್ ಗೆದ್ದು ಬ್ಯಾಟ್ ಮಾಡಲು ಇಳಿದ ಇಂಗ್ಲೆಂಡ್, ಟಿ-20 ಮಾದರಿಯಲ್ಲಿ ರನ್ ಹೊಳೆ ಹರಿಸಿದೆ.

ನಾಲ್ವರು ಟಾಪ್ ಆರ್ಡರ್ ಬ್ಯಾಟರ್‌ಗಳು ಶತಕ(Century) ಗಳಿಸಿದ ಕಾರಣ ಮೊದಲ ದಿನದ ಅಂತ್ಯಕ್ಕೆ 75 ಓವರ್‌ಗೆ (450 ಎಸೆತ) ನಾಲ್ಕು ವಿಕೆಟ್ ಕಳೆದುಕೊಂಡು ಬರೋಬ್ಬರಿ 506 ರನ್ ಗಳಿಸಿದೆ. ಓವರಿಗೆ 6.75 ರನ್‍ರೇಟ್‌ನಲ್ಲಿ  ಬ್ಯಾಟ್‌ ಬೀಸಿದ್ದಾರೆ.

England break 112 year old record score 506 runs vs Pakistan on Day 1 of Rawalpindi Test 1

ಝಾಕ್ ಕ್ರಾಲಿ 122 ರನ್‌(111 ಎಸೆತ, 21 ಬೌಂಡರಿ), ಬೆನ್ ಡಕೆಟ್ 107 ರನ್‌(110 ಎಸೆತ, 15 ಬೌಂಡರಿ), ಆಲಿ ಪೋಪ್ 108 ರನ್‌(104 ಎಸೆತ, 14 ಬೌಂಡರಿ), ಹ್ಯಾರಿ ಬ್ರೂಕ್ ಔಟಾಗದೇ 101 ರನ್‌(81 ಎಸೆತ, 14 ಬೌಂಡರಿ, 2 ಸಿಕ್ಸರ್) ಹೊಡೆದಿದ್ದಾರೆ.

ಕೊನೆಯಲ್ಲಿ ನಾಯಕ ಬೆನ್‌ಸ್ಟೋಕ್ಸ್‌ 226.6 ಸ್ಟ್ರೈಕ್‌ ರೇಟ್‌ನಲ್ಲಿ ಔಟಾಗದೇ 34 ರನ್‌(15 ಎಸೆತ, 6 ಬೌಂಡರಿ, 1 ಸಿಕ್ಸ್‌) ಹೊಡೆದಿದ್ದರಿಂದ 506 ರನ್‌ ಗಳಿಸಿದೆ. ಇತರೇ ರೂಪದಲ್ಲಿ 11 ರನ್‌(2 ಬೈ, 6 ಲೆಗ್‌ಬೈ, 2 ನೋಬಾಲ್‌, 1 ವೈಡ್‌) ಬಂದಿದೆ. ಜಾಹಿದ್ ಮಹಮೂದ್ 23 ಓವರ್‌ ಎಸೆದು 160 ರನ್‌ ನೀಡಿ 2 ವಿಕೆಟ್‌ ಪಡೆದಿದ್ದಾರೆ.  ಇದನ್ನೂ ಓದಿ: ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್‌

ಮೊದಲ ದಿನ ಅತಿ ಹೆಚ್ಚು ರನ್‌
ಮೊದಲ ದಿನವೇ  506 ರನ್‌ಗಳಿಸಿದ್ದು ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆ. ಈ ಹಿಂದೆ ಸಿಡ್ನಿ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1910 ರಲ್ಲಿ ಆಸ್ಟ್ರೇಲಿಯಾದ 494 ರನ್‌ ಹೊಡೆದಿತ್ತು.

2012ರ ಟೆಸ್ಟ್‌ನಲ್ಲಿ ಮತ್ತೆ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಅಡಿಲೇಡ್‌ನಲ್ಲಿ 5 ವಿಕೆಟ್‌ ನಷ್ಟಕ್ಕೆ 482 ರನ್‌ ಹೊಡೆದಿತ್ತು. ಈ ಮೊತ್ತ 86.5 ಓವರ್‌ನಲ್ಲಿ ದಾಖಲಾಗಿತ್ತು. ಟೆಸ್ಟ್‌ ಪಂದ್ಯದಲ್ಲಿ ದಿನ ಒಂದಕ್ಕೆ 90 ಓವರ್‌ ಎಸೆಯಲಾಗುತ್ತದೆ. ಆದರೆ ಇಂಗ್ಲೆಂಡ್‌ ಕೇವಲ 75 ಓವರ್‌ನಲ್ಲಿ 506 ರನ್‌ ಗಳಿಸಿರುವುದು ವಿಶೇಷ.

4 ಶತಕ:
ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೊದಲ ದಿನ 4 ಆಟಗಾರರು ಶತಕ ಸಿಡಿಸಿದ್ದು ಇದೇ ಮೊದಲು. ಅದರಲ್ಲೂ ಮೂವರು ಬ್ಯಾಟರ್‌ಗಳ ಸ್ಟ್ರೈಕ್‌ ರೇಟ್‌ 100ಕ್ಕಿಂತಲೂ ಅಧಿಕ ಇರುವುದು ಮತ್ತೊಂದು ದಾಖಲೆ. ಝಾಕ್ ಕ್ರಾಲಿ(109.90) ಆಲಿ ಪೋಪ್(103.84), ಹ್ಯಾರಿ ಬ್ರೂಕ್(124.69) ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ.

ದಾಖಲೆಯ ಆರಂಭಿಕ ಜೊತೆಯಾಟ:
ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ 35.4 ಓವರ್‌ನಲ್ಲಿ(214 ಎಸೆತ) 6.53 ಸ್ಕೋರಿಂಗ್‌ ರೇಟಿಂಗ್‌ನಲ್ಲಿ ಮೊದಲ ವಿಕೆಟಿಗೆ 233 ರನ್‌ ಚಚ್ಚಿದ್ದಾರೆ.‌ ಇದು 200 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಆರಂಭಿಕ ಜೊತೆಯಾಟದಲ್ಲಿ ದಾಖಲಾದ  ಅತ್ಯಧಿಕ ಸ್ಕೋರಿಂಗ್‌ ರೇಟ್.

ಈ ಹಿಂದೆ ಜೋ ಬರ್ನ್ಸ್ ಮತ್ತು ಡೇವಿಡ್ ವಾರ್ನರ್ (2015 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪ್ರತಿ ಓವರ್‌ಗೆ 6.29 ರನ್) ಮತ್ತು ಗ್ರೇಮ್ ಸ್ಮಿತ್ ಮತ್ತು ಎಬಿ ಡಿವಿಲಿಯರ್ಸ್ (2005 ರಲ್ಲಿ ಜಿಂಬಾಬ್ವೆ ವಿರುದ್ಧ ಪ್ರತಿ ಓವರ್‌ಗೆ 6.22 ರನ್) ದ್ವಿಶತಕದ ಜೊತೆಯಾಟವಾಡಿದ್ದರು.

ಒಂದು ಓವರ್‌ನಲ್ಲಿ ಸತತ ಆರು ಬೌಂಡರಿ
ಹ್ಯಾರಿ ಬ್ರೂಕ್ ಅವರು ಇಂದು ಟೆಸ್ಟ್‌ ಕ್ಯಾಪ್‌ ಧರಿಸಿದ್ದ ಸೌದ್ ಶಕೀಲ್‌ ಅವರ ಎರಡನೇ ಓವರ್‌ನಲ್ಲಿ ಆರು ಬೌಂಡರಿ ಚಚ್ಚಿದ್ದಾರೆ. ಈ ಮೂಲಕ ಟೆಸ್ಟ್ ಪಂದ್ಯದ ಓವರ್‌ ಒಂದರಲ್ಲಿ ಸತತ ಆರು ಬೌಂಡರಿಗಳನ್ನು ಹೊಡೆದ ಐದನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಬ್ರೂಕ್‌ ಪಾತ್ರರಾಗಿದ್ದಾರೆ.

1982ರಲ್ಲಿ ಬಾಬ್ ವಿಲ್ಲಿಸ್ ವಿರುದ್ಧ ಸಂದೀಪ್ ಪಾಟೀಲ್, 2004ರಲ್ಲಿ ಮ್ಯಾಥ್ಯೂ ಹೊಗಾರ್ಡ್ ವಿರುದ್ಧ ಕ್ರಿಸ್‌ ಗೇಲ್‌, 2006ರಲ್ಲಿ ಮುನಾಫ್ ಪಟೇಲ್ ವಿರುದ್ಧ ರಾಮ್‌ನರೇಶ್ ಸರ್ವನ್‌, 2007ರಲ್ಲಿ ಜೇಮ್ಸ್ ಆಂಡರ್ಸನ್ ಬೌಲಿಂಗ್‌ಗೆ ಸನತ್‌ ಜಯಸೂರ್ಯ 6 ಬೌಂಡರಿ ಹೊಡೆದಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *