ಗೆಳೆಯನ ವಿಚಾರಕ್ಕೆ ಹುಡುಗಿಯನ್ನು ಥಳಿಸಿದ ಯುವತಿಯರ ಗುಂಪು

Public TV
1 Min Read
COUPLE

ಪಾಟ್ನಾ: ಗೆಳೆಯನ ವಿಚಾರಕ್ಕೆ ಐವರು ಯುವತಿಯರು (Girls Gang) ಸೇರಿ  ಹುಡುಗಿಯೊಬ್ಬಳನ್ನು (Woman) ಅಮಾನುಷವಾಗಿ ಥಳಿಸಿದ ಘಟನೆ ಬಿಹಾರದ (Bihar) ಸೋನೆಪುರ್ ಮೇಳದಲ್ಲಿ ನಡೆದಿದೆ.

ಸರನ್ ಜಿಲ್ಲೆಯ ಸೋನೆಪುರ್ ಮೇಳದಲ್ಲಿ ಈ ಘಟನೆ ನಡೆದಿದೆ. ಗೆಳೆಯನ ವಿಚಾರವಾಗಿ ಈ ಜಗಳ ನಡೆದಿದೆ ಎನ್ನಲಾಗಿದೆ. ಗ್ಯಾಂಗ್‍ನಲ್ಲಿದ್ದ ಯುವತಿಯ ಗೆಳೆಯನೊಂದಿಗೆ ಸಂತ್ರಸ್ತ ಹುಡುಗಿಯು ಸಂಬಂಧವನ್ನು ಹೊಂದಿದ್ದಳು. ಇದರಿಂದ ಸಂತ್ರಸ್ತೆಗೂ ಹಾಗೂ ಆ ಯುವತಿಯ ಗುಂಪಿನ ಮಧ್ಯೆ ಜಗಳ ನಡೆದಿದೆ.

CRIME 2

ಇದಾದ ಬಳಿಕ ಯುವತಿಯ ಗುಂಪಿನಲ್ಲಿದ್ದವರೆಲ್ಲರೂ ಸೇರಿ ಸಂತ್ರಸ್ತೆಯ ಕೂದಲನ್ನು ಎಳೆದು ನಂತರ ಆಕೆಯನ್ನು ತಳ್ಳಿದ್ದಾರೆ. ಅದಾದ ಬಳಿಕ ಮನಬಂದಂತೆ ಸಂತ್ರಸ್ತೆಯನ್ನು ಥಳಿಸಿದ್ದು, ಆಕೆಗೆ ಕಪಾಳ ಮೋಕ್ಷ ಮಾಡಿ ಥಳಿಸಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಜನರು ಮೂಕ ಪ್ರೇಕ್ಷಕರಂತೆ ಯುವತಿ ಮೇಲೆ ಆದ ದೌರ್ಜನ್ಯವನ್ನು ವೀಕ್ಷಿಸಿದರು. ಇದನ್ನೂ ಓದಿ: ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಜೀವ ಬೆದರಿಕೆ

mobile 2

ಇನ್ನೂ ಘಟನೆಗೆ ಸಂಬಂಧಿಸಿ ಈ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯುವತಿಯನ್ನು ಪುರುಷನೊಬ್ಬ ರಕ್ಷಿಸಿ ಆ ಸ್ಥಳದಿಂದ ಬೇರೆ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಇದನ್ನೂ ಓದಿ: ಜಪಾನ್‍ನಲ್ಲಿದ್ದಾರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *