ದಾವಣಗೆರೆ: 7 ವರ್ಷದ ಬಾಲಕನ (Boy) ಮೇಲೆ ಗೇಟ್ (Gate) ಒಂದು ಮುರಿದುಬಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆ (Davanagere) ಜಿಲ್ಲೆಯೆ ಹರಪನಹಳ್ಳಿ ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿ ಬಳಿ ನಡೆದಿದೆ. ಮೃತ ಬಾಲಕನನ್ನು ಗೌತಮ್ ಎಂದು ಗುರುತಿಸಲಾಗಿದೆ.
ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದ ಮಲ್ಲಿಕಾರ್ಜುನ ತಮ್ಮ ಮಗ ಗೌತಮ್ ಜೊತೆ ಆಧಾರ್ ಕಾರ್ಡ್ ತಿದ್ದುಪಡಿಗೆಂದು ಬಂದಿದ್ದ ವೇಳೆ ಅವಘಡ ಸಂಭವಿಸಿದೆ. ಆಧಾರ್ ತಿದ್ದುಪಡಿ ಕೇಂದ್ರ ಬಿಎಸ್‌ಎನ್‌ಎಲ್ ಕಚೇರಿ ಆವರಣದಲ್ಲೇ ಇದ್ದು, ಈ ವೇಳೆ ಗೇಟ್ ಬಳಿ ನಿಂತಿದ್ದ ಬಾಲಕನ ಮೇಲೆ ಏಕಾಏಕಿ ಗೇಟ್ ಕುಸಿದು ಬಿದ್ದಿದೆ. ಇದನ್ನೂ ಓದಿ: ಸಾಲದ ಸುಳಿಗೆ ಸಿಲುಕಿ ನಿವೃತ್ತ ಟೆಕ್ಕಿ ಆತ್ಮಹತ್ಯೆ ನಿರ್ಧಾರ – ಮಗಳನ್ನು ಬಿಗಿದಪ್ಪಿ ಕೊಂದು ತಾನು ಸಾವಿಗೆ ಹೆದರಿ ಓಡೋದ
ಗೇಟ್ ಬಿದ್ದಿರುವ ರಭಸಕ್ಕೆ ಬಾಲಕನ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಪೆಟ್ಟಾಗಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಅಂಬುಲೆನ್ಸ್-ಆಟೋ ಮುಖಾಮುಖಿ ಡಿಕ್ಕಿ – ನಾಲ್ವರಿಗೆ ಗಾಯ