ನವದೆಹಲಿ: ಮಸಾಜ್ ಬೆನ್ನಲ್ಲೇ ಇದೀಗ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರ ಮತ್ತೊಂದು ವೀಡಿಯೋ ಬಿಡುಗಡೆಯಾಗಿದ್ದು, ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ.
This is shocking. Turns out the man giving massage to imprisoned AAP leader Satyendar Jain here is not a certified physiotherapist but, rather, a man accused of child rape under POCSO. pic.twitter.com/5dqkED9RcV
— Anand Ranganathan (@ARanganathan72) November 22, 2022
ಹೌದು, ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುವ ವೀಡಿಯೋ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಈ ಬೆನ್ನಲ್ಲೇ ಇದೀಗ ಸಚಿವರು ಜೈಲಿನಲ್ಲಿ ಆರಾಮವಾಗಿ ಊಟ ಮಾಡುತ್ತಿರುವ ವೀಡಿಯೋ ಕೂಡ ಬಿಡುಗಡೆ ಆಗಿದೆ. ಸತ್ಯೇಂದ್ರ ಜೈನ್ ಅವರು ಹೊರಗಿನಿಂದ ಊಟ ತರಿಸಿಕೊಂಡು ತಿನ್ನುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
Satender Jain getting food from zomato or swiggy inside Tihar jail ???????????????? pic.twitter.com/DLUJWym66h
— Naren Mukherjee (@NMukherjee6) November 23, 2022
ಜೈನ್ ಅವರು ಜೈಲಿನಲ್ಲಿ 8 ಕೆ.ಜಿ ತೂಕ ಹೆಚ್ಚಿಕೊಂಡಿದ್ದಾರೆ ಎಂಬುದಾಗಿ ಜೈಲಿನ ಮೂಲಗಳು ತಿಳಿಸಿವೆ. ಆದರೆ ಇದನ್ನು ಸಚಿವರ ಪರ ವಕೀಲರು ತಳ್ಳಿ ಹಾಕಿದ್ದು, 28 ಕೆ.ಜಿ ತೂಕ ಕಳೆದುಕೊಂಡಿದ್ದಾರೆ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಸತ್ಯೇಂದ್ರ ಜೈನ್ ವೈರಲ್ ವೀಡಿಯೋದಲ್ಲಿರೋದು ಫಿಸಿಯೋಥೆರಪಿಸ್ಟ್ ಅಲ್ಲ, ರೇಪಿಸ್ಟ್: ಬಿಜೆಪಿ
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಸಚಿವರು ತನ್ನ ಕಾಲಿಗೆ ಮಸಾಜ್ ಮಾಡಿಕೊಳ್ಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೆ ಈ ವೀಡಿಯೋ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ಫಿಸಿಯೋಥೆರಪಿ ಮಾಡಲಾಗುತ್ತಿದೆ ಹೊರತು ಮಸಾಜ್ ಅಲ್ಲ ಎಂದು ಆರೋಪ ತಳ್ಳಿ ಹಾಕಿದ್ದರು.
ಈ ಬೆನ್ನಲ್ಲೇ ಬಿಜೆಪಿ ಮತ್ತೊಂದು ಆರೋಪ ಮಾಡಿದೆ. ಈ ಸಂಬಂಧ ಬಿಜೆಪಿ ವಕ್ತಾರ ಶೆಹ್‍ಜಾದ್ ಪೂನಾವಾಲಾ ಫೋಟೋ ಸಮೇತ ಟ್ವೀಟ್ ಮಾಡಿದ್ದು, ಅದರಲ್ಲಿ ಸತ್ಯೇಂದ್ರ ಜೈನ್‍ಗೆ ಮಸಾಜ್ ಮಡುತ್ತಿರುವ ವ್ಯಕ್ತಿಯ ಹೆಸರು ರಿಂಕು. ಈತ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ ಎಂದು ತಿಳಿಸಿದ್ದರು.