ನವದೆಹಲಿ: ಆಮ್ ಆದ್ಮಿ (AAP) ಪಕ್ಷದ ಸಚಿವ ಸತ್ಯೇಂದ್ರ ಜೈನ್ (Sathyendra Jain) ಅವರ ವೈರಲ್ ಆಗಿರುವ ವೀಡಿಯೋದಲ್ಲಿ ಇರುವುದು ಫಿಸಿಯೋಥೆರಪಿಸ್ಟ್ (Physiotherapist) ಅಲ್ಲ, ಅದು ರೇಪಿಸ್ಟ್ ಎಂದು ಇದೀಗ ಬಿಜೆಪಿ (BJP) ಗಂಭೀರ ಆರೋಪ ಮಾಡಿದೆ.
Advertisement
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂದು ಇತ್ತೀಚೆಗಷ್ಟೇ ಬಿಜೆಪಿ ಆರೋಪಿಸಿತ್ತು. ಈ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ಅವರು, ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ಫಿಸಿಯೋಥೆರಪಿ ಮಾಡಲಾಗುತ್ತಿದೆ ಹೊರತು ಮಸಾಜ್ ಅಲ್ಲ ಎಂದು ಆರೋಪ ತಳ್ಳಿ ಹಾಕಿದ್ದರು.
Advertisement
Rape accused Rinku was giving massage to Satyendra Jain
Rinku
Accused under Pocso and IPC 376
So it was not a physiotherapist but a rapist who was giving maalish to Satyendra Jain! Shocking
Kejriwal must answer why he defended this and insulted physiotherapists pic.twitter.com/8bBE4fLTFU
— Shehzad Jai Hind (@Shehzad_Ind) November 22, 2022
ಈ ಬೆನ್ನಲ್ಲೇ ಬಿಜೆಪಿ ಮತ್ತೊಂದು ಆರೋಪ ಮಾಡಿದೆ. ಈ ಸಂಬಂಧ ಬಿಜೆಪಿ ವಕ್ತಾರ ಶೆಹ್‍ಜಾದ್ ಪೂನಾವಾಲಾ ಫೋಟೋ ಸಮೇತ ಟ್ವೀಟ್ ಮಾಡಿದ್ದು, ಅದರಲ್ಲಿ ಸತ್ಯೇಂದ್ರ ಜೈನ್‍ಗೆ ಮಸಾಜ್ (Massage Vide) ಮಡುತ್ತಿರುವ ವ್ಯಕ್ತಿಯ ಹೆಸರು ರಿಂಕು (Rinku). ಈತ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಇದನ್ನೂ ಓದಿ: ಜೈಲಿನಲ್ಲಿ ಸತ್ಯೇಂದ್ರ ಜೈನ್‍ಗೆ ಮಾಡಿದ್ದು ಮಸಾಜ್ ಅಲ್ಲ, ಫಿಸಿಯೋಥೆರಪಿ – ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು
Advertisement
Advertisement
ಅತ್ಯಾಚಾರ ಆರೋಪಿ ರಿಂಕು ಸತ್ಯೇಂದ್ರ ಜೈನ್‍ಗೆ ಮಸಾಜ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈತ ಐಪಿಸಿ ಸೆಕ್ಷನ್ 376 ಹಾಗೂ ಪೋಕ್ಸೋ ಅಡಿಯಲ್ಲಿ ಬಂಧಿತನಾಗಿರುವ ಆರೋಪಿ. ಹೀಗಾಗಿ ಈತ ಫಿಸಿಯೋಥೆರಪಿಸ್ಟ್ ಅಲ್ಲ, ಬದಲಾಗಿ ರೇಪಿಸ್ಟ್ ಆಗಿದ್ದು, ಈತನಿಂದ ಅತ್ಯೇಂದ್ರ ಜೈನ್ ಮಸಾಜ್ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತೆ. ಆದೆ ಇದನ್ನು ಸಮರ್ಥಿಸಿಕೊಳ್ಳುವ ಮೂಲಕ ಕೇಜ್ರಿವಾಲ್ ಅವರು ಫಿಸಿಯೋಥೆರಪಿಸ್ಟ್ ಗಳಿಗೆ ಯಾಕೆ ಅವಮಾನ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪೂನಾವಾಲಾ ಆಗ್ರಹಿಸಿದ್ದಾರೆ.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ರಿಂಕು ಅವರ ಅಪ್ರಾಪ್ತ ಮಗಳು ಮಾಡಿದ ಅತ್ಯಾಚಾರದ ಆರೋಪದ ನಂತರ 2021 ರಲ್ಲಿ ಅವರನ್ನು ಬಂಧಿಸಲಾಯಿತು. ಬಳಿಕ ತಿಹಾರ್ ಜೈಲಿಗೆ ಅಟ್ಟಲಾಗಿದೆ.