ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಡಿಸೆಂಬರ್‌ನಲ್ಲಿ ಬಿಗ್‌ ಸರ್ಪ್ರೈಸ್

Public TV
1 Min Read
allu arjun

ಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ಸಿನಿಮಾ `ಪುಷ್ಪ’ ಗೆಲುವಿನ ಪಟ್ಟದ ಜೊತೆ ಗಲ್ಲಾಪೆಟ್ಟಿಗೆಯನ್ನು ಕೂಡ ಲೂಟಿ ಮಾಡಿತ್ತು. `ಪುಷ್ಪ 2′ ಶೂಟಿಂಗ್‌ಗೆ ಸಿನಿಮಾ ಸಜ್ಜಾಗಿದೆ. `ಪುಷ್ಪ’ ಪಾರ್ಟ್ 1 ಬಂದು ಒಂದು ವರ್ಷವಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡಲಿದ್ದಾರೆ.

allu arjun

ಕನ್ನಡದ ಕೆಜಿಎಫ್‌ 2 ನಂತರ `ಪುಷ್ಪ’ ಸಿನಿಮಾ ಕೂಡ ಸದ್ದು ಮಾಡಿತ್ತು. ಇದೀಗ `ಪುಷ್ಪ ಪಾರ್ಟ್ 2’ಗೆ ಅಭಿಮಾನಿಗಳು ಕಾಯ್ತಿದ್ದಾರೆ. `ಕೆಜಿಎಫ್ 2′ ಕೂಡ 1000 ಕೋಟಿ ರೂ. ಗಿಂತ ಅಧಿಕ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆದಿತ್ತು. ಈಗ `ಪುಷ್ಪ 2′ ಕೂಡ ಅದೇ ದಾರಿ ಹಿಡಿದಿದೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಕೂಡ ಶುರುವಾಗಲಿದೆ. ಇದನ್ನೂ ಓದಿ: ಮಹೇಶ್‌ ಬಾಬು ತಂದೆ ನಟ ಕೃಷ್ಣ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Rashmika Mandanna Allu Arjun Pushpa 2

`ಪುಷ್ಪ’ ಚಿತ್ರದ ಸಕ್ಸಸ್ ನಂತರ ನಿರ್ದೇಶಕ ಸುಕುಮಾರ್ ಮತ್ತೆ ಸ್ಕ್ರಿಪ್ಟ್  ತುಸು ಬದಲಾವಣೆ ಮಾಡಿದ್ದಾರೆ. ಪುಷ್ಪ ಪಾರ್ಟ್‌ 2 ಕೂಡ ಬಿಗ್ ಸಕ್ಸಸ್ ಕಾಣಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಇದೀಗ ʻಪುಷ್ಪ 2ʼ ಶೂಟಿಂಗ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಬ್ಯಾಂಕಾಕ್‌ನಲ್ಲಿ 40 ದಿನಗಳ ಕಾಲ ದುಬಾರಿ ಬಜೆಟ್‌ನಲ್ಲಿ ಶೂಟಿಂಗ್ ನಡೆಯಲಿದೆ.

FotoJet 3 17

ಇದೇ ಡಿಸೆಂಬರ್ 17ಕ್ಕೆ ಪುಷ್ಪ ತೆರೆಗೆ ಬಂದು ಒಂದು ವರ್ಷವಾಗಲಿದ್ದು, ಈ ವೇಳೆ ಚಿತ್ರದ ವಿಶೇಷ ಟೀಸರ್ ಜೊತೆ ರಿಲೀಸ್ ಕೂಡ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಫ್ಯಾನ್ಸ್‌ಗೆ ಅಚ್ಚರಿಯ ಸಿಹಿ ಸುದ್ದಿ ಕಾದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *