ಬೆಂಗಳೂರು: ನಮ್ಮ ಇಸ್ಲಾಂ ಧರ್ಮದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಇಲ್ಲ. ಆ ಬಗ್ಗೆ ವಿವಾದ ಮಾಡೋ ಅವಶ್ಯಕತೆಯಿಲ್ಲ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಟಿಪ್ಪು ಪ್ರತಿಮೆ (Tipu Statue) ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರು (Mysuru) ಶಾಸಕ ತನ್ವೀರ್ ಸೇಠ್ (Tanveer Sait) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಸ್ಲಾಂ ಧರ್ಮದಲ್ಲಿ ಪ್ರತಿಮೆ ಸ್ಥಾಪನೆಗೆ ನಿಷೇಧ ಇದೆ. ವಿಶ್ವದಲ್ಲಿ ಹಾಗೂ ಭಾರತದಲ್ಲೇ ಪ್ರತಿಮೆ ಇಲ್ಲ. ಶಾಸಕರು ಮುಸ್ಲಿಂ ಗುರುಗಳ ಜೊತೆ ಚರ್ಚೆ ಮಾಡಲಿ. ನಮ್ಮಲ್ಲಿ ಪ್ರತಿಮೆಗೆ ಅವಕಾಶ ಇಲ್ಲ. ಆ ವಿವಾದ ಮಾಡೋ ಅವಶ್ಯಕತೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್
ಶಾಲಾ ಕೊಠಡಿಗೆ ಕೇಸರಿ ಬಣ್ಣ ವಿಚಾರಕ್ಕೆ ಸಂಬಂಧಿಸಿದಂತೆ, ನೀರು ಬಿದ್ದು ಛಾವಣಿ ಸೋರುತ್ತಿದೆ. ಹಂಚು ಹಾಕೋದು ಬಿಟ್ಟು ಬಣ್ಣ ಹೊಡೆಯೋಕೆ ಹಣ ಖರ್ಚು ಮಾಡ್ತಿದ್ದೀರಾ? ಬಿಜೆಪಿ (BJP) ಕೇಸರಿಕರಣ ಅಂತ ಹೊರಟಿದೆ. ಇದು ತಪ್ಪು ಕಲ್ಪನೆ. ಕರ್ನಾಟಕ ಧ್ವಜದ ಬಣ್ಣ ಕೆಂಪು ಮತ್ತು ಹಳದಿ, ಅದೇ ಬಣ್ಣವನ್ನು ಹಚ್ಚಲಿ ಬಿಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: `ಬನಾರಸ್’ ಚಿತ್ರದ ಬೆನ್ನಲ್ಲೇ ಝೈದ್ ಖಾನ್‌ಗೆ ಬಂತು ಬಿಗ್ ಆಫರ್
ಜೆಡಿಎಸ್ ಬಂದರೆ ಹಸಿರು ಬಣ್ಣ ಮಾಡಬೇಕಾ? ವಿದ್ಯಾ ಮಂತ್ರಿಗಳು ಒಳ್ಳೆ ವಿದ್ಯೆ ಕೊಡುವ ಕೆಲಸ ಮಾಡಿ. ನಾವು ಫ್ರೀ ಆಗಿ ಶಿಕ್ಷಣ ಕೊಡ್ತೀವಿ ಅಂತಾ ಹೇಳಿದ್ದೇವೆ. ನಾವೇನು ಬಣ್ಣ ಹೊಡೆಯುತ್ತೇವೆ ಅಂತ ಹೇಳಿಲ್ಲ. ಮಕ್ಕಳ ತಲೆಗೆ ವಿಶಾಲವಾದ ಬುದ್ದಿ ಕೊಡಬೇಕು. ಶಾಲೆಗಳನ್ನ ವಿದ್ಯಾಕಾಶಿ ಮಾಡೋ ಬದಲು ಬಿಜೆಪಿ ಕಾಶಿ ಮಾಡೋದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




