ಕೊನೆಗೂ ರಿಲೀಸ್ ಆಯ್ತು `ಅವತಾರ್ 2′ ಕನ್ನಡ ಟ್ರೈಲರ್

Public TV
1 Min Read
avatara 2

ಹಾಲಿವುಡ್‌ನ(Hollywood) `ಅವತಾರ್ 2′ ಚಿತ್ರತಂಡಕ್ಕೆ ಇತ್ತೀಚಿಗೆ ಕನ್ನಡಿಗರು ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದು `ಅವತಾರ್ -2′(Avatara 2 Film) ತಂಡ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುತ್ತಿದೆ. ಸದ್ಯ ಕನ್ನಡ ಟ್ರೈಲರ್ ರಿಲೀಸ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊನೆಗೂ ತಪ್ಪು ಸರಿ ಪಡಿಸಿಕೊಂಡಿದ್ದಕ್ಕೆ ಹಾಗೂ ಕನ್ನಡಕ್ಕೆ ಡಬ್ ಮಾಡಿದ್ದಕ್ಕೆ ನೆಟ್ಟಿಗರಿಂದ ಭೇಷ್ ಎನಿಸಿಕೊಂಡಿದ್ದಾರೆ.

 

View this post on Instagram

 

A post shared by Avatar (@avatar)

ಇತ್ತೀಚೆಗೆ ಹಾಲಿವುಡ್‌ನ `ಅವತಾರ್ 2′ ಟ್ರೈಲರ್ ರಿಲೀಸ್ ಆಗಿ, ಸಖತ್ ಸೌಂಡ್ ಮಾಡಿತ್ತು. ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿ ಸದ್ದು ಮಾಡಿತ್ತು. ಆದರೆ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ ಕನ್ನಡಿಗರು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದರು. ಪ್ರತಿ ಬಾರಿ ಕನ್ನಡಕ್ಕೆ ಯಾಕೆ ಅನ್ಯಾಯ ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ:ಮುತ್ತೆತ್ತರಾಯನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಇದೀಗ ಕನ್ನಡ ಸಿನಿಮಾಗಳು ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಇಂತಹ ಸಮಯದಲ್ಲಿ ದಕ್ಷಿಣ ಭಾರತದ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿರುವ ಚಿತ್ರವನ್ನು ಕನ್ನಡಕ್ಕೆ ಯಾಕೆ ಡಬ್ ಮಾಡುತ್ತಿಲ್ಲ ಇದು ಕನ್ನಡ ಪ್ರೇಕ್ಷಕರಿಗೆ ತೋರುತ್ತಿರುವ ಅಗೌರವ ಎಂದು ಕಿಡಿ ಕಾರಿದ್ದರು. ಕನ್ನಡದಲ್ಲಿ ಡಬ್ ಮಾಡಲೇಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿತ್ತು. ಕನ್ನಡಿಗರ ಅಕ್ರೋಶಕ್ಕೆ ಮಣಿದು `ಅವತಾರ್ 2′ ಟ್ರೇಲರ್ ಜೊತೆ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಇನ್ನೂ ರಿಲೀಸ್ ಡೇಟ್‌ನ್ನ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಕನ್ನಡ ಅಭಿಮಾನಿಗಳ ಗಮನ ಸೆಳೆದಿದ್ದು, ಚಿತ್ರತಂಡದ ನಡೆಗೆ ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article