ಸಿನಿಮಾವಾಗಲಿದೆ ವಿಜಯ್ ಮಲ್ಯ ವಂಚನೆ ಕಥೆ: ಮಲ್ಯ ಪಾತ್ರದಲ್ಲಿ ಅನುರಾಗ್

Public TV
1 Min Read
FotoJet 40

ಹುಕೋಟಿ ವಂಚನೆ ಪ್ರಕರಣದಲ್ಲಿ ದೇಶವನ್ನೇ ಬಿಟ್ಟಿರುವ ಮದ್ಯದ ದೊರೆ ವಿಜಯ್ ಮಲ್ಯ (Vijay Mallya) ಅವರ ವಂಚನೆಯ ಪ್ರಕರಣವನ್ನು ಆಧರಿಸಿದ ಬಾಲಿವುಡ್ ನಲ್ಲಿ ಸಿನಿಮಾವೊಂದು ಮೂಡಿ ಬರಲಿದ್ದು, ಈ ಸಿನಿಮಾಗೆ ಫೈಲ್ ನಂ 323 (File No 323) ಎಂದು ಹೆಸರಿಡಲಾಗಿದೆ. ಈ ಸಿನಿಮಾಗೆ ಕಾರ್ತಿಕ್ ಎನ್ನುವವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಕಾರ್ತಿಕ್, ಇದೀಗ ಇಂಥದ್ದೊಂದು ಕಥೆಯನ್ನು ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

FotoJet 2 26

ಮಲ್ಯ ಅವರ ಐಷಾರಾಮಿ ಬದುಕು, ಅವರ ಬಿಸ್ನೆಸ್, ವಂಚನೆ ಹಾಗೂ ದೇಶ ಬಿಟ್ಟು ಪರಾರಿಯಾದ ಸಂಗತಿಗಳನ್ನು ಈ ಸಿನಿಮಾ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಕೇವಲ ವಿಜಯ್ ಮಲ್ಯ ಮಾತ್ರವಲ್ಲ, ನೀರವ್ ಮೋದಿ (Nirav Modi), ಮೆಹುಲ್ ಚೋಕ್ಸಿ ಸೇರಿದಂತೆ ಇನ್ನೂ ಹಲವರ ಕಥೆಯೂ ಇರಲಿದೆಯಂತೆ. ಅಂದಹಾಗೆ ವಿಜಯ್ ಮಲ್ಯ ಅವರ ಪಾತ್ರವನ್ನು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ವಹಿಸಲಿದ್ದಾರೆ ಎನ್ನುವುದು ಅಸಲಿ ವಿಷ್ಯ. ಇದನ್ನೂ ಓದಿ:ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

FotoJet 1 32

ಬ್ಲಾಕ್ ಫ್ರೈಡೇ ಸೇರಿದಂತೆ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮತ್ತು ತಮ್ಮದೇ ಆದ ಸಿದ್ಧಾಂತಗಳ ಮೂಲಕ ಸದಾ ಸುದ್ದಿಯಲ್ಲಿರುವ ಅನುರಾಗ್  ಕಶ್ಯಪ್ (Anurag Kashyap) ನಿರ್ದೇಶನವನ್ನು ಸ್ವಲ್ಪ ದಿನ ಮರೆತು, ವಿಜಯ್ ಮಲ್ಯನಾಗಿ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರಂತೆ. ಅಂದುಕೊಂಡಂತೆ ಆದರೆ, ಇದೇ ತಿಂಗಳು ಕೊನೆಯಲ್ಲಿ ಸಿನಿಮಾ ಸೆಟ್ಟೇರಲಿದೆಯಂತೆ. ಸದ್ಯಕ್ಕೆ ಮಲ್ಯ ಪಾತ್ರಕ್ಕೆ ಮಾತ್ರ ಕಲಾವಿದರ ಆಯ್ಕೆಯಾಗಿದೆ. ಉಳಿದ ಕಲಾವಿದರಿಗಾಗಿ ಹುಡುಕಾಟ ನಡೆದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *