79ರ ವೃದ್ಧನನ್ನು ನಗ್ನಗೊಳಿಸಿ ಫೋಟೋ ಕ್ಲಿಕ್ಕಿಸಿಕೊಂಡ್ಲು – ಹನಿಟ್ರ್ಯಾಪ್‍ಗೆ ಯತ್ನಿಸಿದ ಖತರ್ನಾಕ್ ಆಂಟಿ ಅರೆಸ್ಟ್

Public TV
2 Min Read
davangere 1

ದಾವಣಗೆರೆ: ಕಷ್ಟ ಎಂದು ಹೇಳಿಕೊಂಡು ಬಂದ ಮಹಿಳೆಯೊಬ್ಬಳಿಗೆ ಸಾಲ ನೀಡಿದ್ದ ವೃದ್ದ, ಮತ್ತೆ ಮರಳಿ ಸಾಲ ವಾಪಸ್ ಕೇಳಿದಾಗ ಆತನಿಗೆ ಮತ್ತು ಬರಿಸಿ ನಗ್ನ ಮಾಡಿ ತನ್ನ ಜೊತೆ ಮಲಗಿದ ರೀತಿ ಫೋಟೋ ತೆಗೆಸಿಕೊಂಡು ಹನಿಟ್ರ್ಯಾಪ್‍ಗೆ (Honeytrap) ಯತ್ನಿಸಿ, 15 ಲಕ್ಷಕ್ಕೆ ಬೇಡಿಕೆ ಇಟ್ಟ ಆಂಟಿಯನ್ನು ಪೊಲೀಸರ ಬಂಧಿಸಿದ್ದಾರೆ.

davangere

ದಾವಣಗೆರೆ (Davangere) ನಗರದ ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ 79 ವರ್ಷದ ಚಿದಾನಂದಪ್ಪ ಹನಿಟ್ರ್ಯಾಪ್‍ಗೆ ಒಳಗಾಗಿ ನರಳಾಡಿದ ವೃದ್ಧ ಎಂದು ತಿಳಿದು ಬಂದಿದೆ. ಶಿವಕುಮಾರ ಸ್ವಾಮೀ ಬಡಾವಣೆಗೆ ಹೊಂದಿಕೊಂಡ ಸರಸ್ವತಿ ನಗರದ ನಿವಾಸಿ 32 ವರ್ಷದ ಯಶೋಧ ಜೊತೆಗೆ ವೃದ್ಧ ಚಿದಾನಂದಪ್ಪರ ಪರಿಚಯವಾಗಿದೆ. ಹೀಗೆ ಪರಿಚಯವಾಗಿ ಇಬ್ಬರ ನಡುವೆ ಸ್ನೇಹವಾಗಿದೆ. ನಂತರ ಯಶೋಧ, ಚಿದಾನಂದಪ್ಪ ಅವರನ್ನು ಮನೆಗೆ ಆಹ್ವಾನಿಸಿ ಆಗಾಗ ಟೀ, ಕಾಫಿ ಜ್ಯೂಸ್ ಕೊಡುತ್ತಿದ್ದಳು. ಹೀಗೆ ಯಶೋಧ ಚಿದಾನಂದಪ್ಪ ಅವರ ಬಳಿ ಆಗಾಗ ನೆಪಗಳನ್ನು ಹೇಳಿ ಐದು, ಹತ್ತು ಅಂತ ಬರೋಬ್ಬರಿ 86 ಸಾವಿರ ರೂಪಾಯಿ ಸಾಲ ಪಡೆದಿದ್ದಾಳೆ. ಕೆಲಸದಿಂದ ನಿವೃತ್ತಿರಾಗಿದ್ದ ವೃದ್ಧ ನಂತರ ತಾನು ಮಹಿಳೆಗೆ ನೀಡಿದ್ದ ಹಣ ನೀಡುವಂತೆ ಮರು ಕೇಳಿದ್ದಾನೆ. ಆಗ ಈಗ ಅಂತಾ ಹೇಳಿ ಆ ಮಹಿಳೆ ಹಣ ವಾಪಸ್ ಕೊಟ್ಟಿರಲಿಲ್ಲ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಆರಾಧನೆಗೆ ಅನುಮತಿ ಕೋರಿ ಅರ್ಜಿ – ನ.14ಕ್ಕೆ ವಿಚಾರಣೆ ಮುಂದೂಡಿಕೆ

POLICE JEEP

ಹೀಗೆ ಒಂದು ದಿನ ವಾಕಿಂಗ್ ಮುಗಿಸಿ ಹೋಗುತ್ತಿದ್ದಾಗ ಯಶೋಧ ಚಿದಾನಂದಪ್ಪನನ್ನು ಅಕ್ಕರೆಯಿಂದ ಕರೆದಿದ್ದಾಳೆ. ಜ್ಯೂಸ್ ಕೊಟ್ಟಿದ್ದಾಳೆ. ಕುಡಿದ ಕೆಲ ಹೊತ್ತಿನಲ್ಲಿಯೇ ವೃದ್ಧ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಎಚ್ಚರವಾದ ಬಳಿಕ ಚಿದಾನಂದಪ್ಪ ಮೈ ಮೇಲೆ ಬಟ್ಟೆ ಇರಲಿಲ್ಲ. ಭಯಗೊಂಡ ಚಿದಾನಂದಪ್ಪ ಬಟ್ಟೆ ಹಾಕಿಕೊಂಡು ಮನೆಗೆ ಬಂದಿದ್ದಾರೆ. ಈ ಘಟನೆ ನಡೆದು ಎರಡು ದಿನಕ್ಕೆ ಹಣಕ್ಕಾಗಿ ಮತ್ತೆ ಚಿದಾನಂದಪ್ಪ ಫೋನ್ ಮಾಡಿದ್ದಾರೆ. ಆಗ ನೀ ನನ್ನ ಜೊತೆ ಮಲಗಿರುವೆ. ನನ್ನ ಬಳಿ ವೀಡಿಯೋ ಇದೆ. 15 ಲಕ್ಷ ಕೊಡು. ಇಲ್ಲ ನಿನ್ನ ಹೆಂಡತಿ ಮಕ್ಕಳಿಗೆ ತೋರಿಸುವೆ ಎಂದಿದ್ದಾಳೆ. ಹೆದರಿ ಈ ವಿಚಾರ ಪರಿಚಯದವರ ಬಳಿ ಚಿದಾನಂದಪ್ಪ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ದೊಡ್ಡವನಾಗಲ್ಲ: ಜಾರಕಿಹೊಳಿ ಕಿವಿ ಹಿಂಡಿದ ಯಡಿಯೂರಪ್ಪ

ಚಿದಾನಂದಪ್ಪ 7 ರಿಂದ 8 ಲಕ್ಷಕ್ಕೆ ಮಾತನಾಡಿ ಡೀಲ್ ಮುಗಿಸಲು ಮುಂದಾಗಿದ್ದಾರೆ. ಆದರೆ ಯಶೋಧ ಮಾತ್ರ 15 ಲಕ್ಷ ಬೇಕೆ, ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇದೇ ವೇಳೆ ಚಿದಾನಂದಪ್ಪರ ವಾಟ್ಸಪ್‍ಗೆ ಒಂದು ನಗ್ನವಾದ ಫೋಟೋ ಅವಳ ಮುಖ ಕಾಣದ ಹಾಗೆ ಮಾಡಿ ಕಳುಹಿಸಿದ್ದಾಳೆ. ಪರಿಸ್ಥಿತಿ ಕೈ ಬಿಡುವ ಲಕ್ಷಣವಿತ್ತು. ಈ ವಿಚಾರ ಚಿದಾನಂದಪ್ಪ ತನ್ನ ಪುತ್ರನಿಗೆ ಹೇಳಿದ್ದಾರೆ. ಆಗ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಕೆಟಿಜೆನಗರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಯಶೋಧಳನ್ನ ಬಂಧಿಸಿದ್ದಾರೆ. ಅಜ್ಜನಿಗೆ ಹನಿಟ್ರ್ಯಾಪ್ ಮಾಡಿ 15 ಲಕ್ಷ ವಸೂಲಿಗೆ ಮುಂದಾದ ಯಶೋಧ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *