ನ್ಯೂಸ್ ಪೇಪರ್ ಓದುತ್ತಿದ್ದಂತೆಯೇ ವ್ಯಕ್ತಿ ಸಾವು

Public TV
2 Min Read
Rajasthan

ಜೈಪುರ: ದಿನಪತ್ರಿಕೆ (News Paper) ಓದುತ್ತಿದ್ದಂತೆಯೇ ವ್ಯಕ್ತಿಯೊಬ್ಬರು ಕ್ಲಿನಿಕ್‍ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ದಿಲೀಪ್ ಕುಮಾರ್ ಮದನಿ(61) ಎಂದು ಗುರುತಿಸಲಾಗಿದೆ. ಹಲ್ಲು ನೋವಿನ ಸಮಸ್ಯೆಯಿಂದ ಡೆಂಟಿಸ್ಟ್ ಕ್ಲಿನಿಕ್‍ಗೆ ವ್ಯಕ್ತಿ ಭೇಟಿ ನೀಡಿದ್ದರು. ಈ ವೇಳೆ ಕುರ್ಚಿ ಮೇಲೆ ಕುಳಿತು ತಮ್ಮ ಸರದಿಗಾಗಿ ಕಾಯುತ್ತಿದ್ದ ವ್ಯಕ್ತಿ ದಿನಪತ್ರಿಕೆಯನ್ನು ಓದುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿ ನಿಮಿಷದಲ್ಲಿಯೇ ಕುಸಿದು ಬಿದ್ದಿದ್ದಾರೆ. ಈ ವೇಳೆ ದಿಲೀಪ್ ಕುಮಾರ್ ಅವರ ಸಹಾಯಕ್ಕೆ ಬಂದ ಕ್ಲಿನಿಕ್ ಸಿಬ್ಬಂದಿ, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೇಳಿದ್ದ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿಗೂ ಮನವಿ

ಈ ಘಟನೆಯ ಸಂಪೂರ್ಣ ದೃಶ್ಯ ಕ್ಲಿನಿಕ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದಿಲೀಪ್ ಕುಮಾರ್ ಮದನಿ ಅವರು ಗಾರ್ಮೆಂಟ್ಸ್ ನಡೆಸುತ್ತಿದ್ದು, ಗುಜರಾತ್‍ನ (Gujrat) ಸೂರತ್ (Surat) ನಿವಾಸಿಯಾಗಿದ್ದಾರೆ. ಆದರೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನವೆಂಬರ್ 4 ರಂದು ಬಾರ್ಮರ್‌ಗೆ (Barmer)  ಬಂದಿದ್ದರು. ಹಲ್ಲು ನೋವಿದ್ದರಿಂದ ನವೆಂಬರ್ 5 ರಂದು ಚೇಕ್ ಅಪ್‍ಗೆಂದು ಕ್ಲಿನಿಕ್‍ಗೆ ಭೇಟಿ ನೀಡಿದ್ದರು. ಆದರೆ ವೈದ್ಯರನ್ನು ಭೇಟಿಯಾಗುವುದಕ್ಕೂ ಮುನ್ನವೇ ಪ್ರಜ್ಞೆ ತಪ್ಪಿ ನೆಲದ ಮೇಲೆ ಕುಸಿದು ಬಿದ್ದಿದ್ದರು.

ಈ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಕ್ಲಿನಿಕ್ ಮಾಲೀಕ ಡಾ ಕಪಿಲ್ ಜೈನ್ ಅವರು, ಮೊದಲು ಈ ಬಗ್ಗೆ ದಿಲೀಪ್ ಕುಮಾರ್ ಮದನಿ ಕುಟುಂಬಸ್ಥರೊಂದಿಗೆ ಮಾತನಾಡದೇ ಏನನ್ನೂ ಹೇಳಲು ಸಾಧ್ಯವಿಲ್ಲ. ವ್ಯಕ್ತಿ ಕುಸಿದು ಬಿದ್ದ ತಕ್ಷಣ ಕ್ಲಿನಿಕ್ ಸಿಬ್ಬಂದಿ ಅವರನ್ನು ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನ ನೀಲನಕ್ಷೆಯಲ್ಲಿ ಬೀಫ್ ಸ್ಟಾಲ್ – ಬಿಜೆಪಿ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *