ಬಿಗ್ ಬಾಸ್‌ನ ಲವ್ ಬರ್ಡ್ಸ್ ಎಂದೇ ಹೈಲೈಟ್ ಆಗಿದ್ದ ಸಾನ್ಯ ಅಯ್ಯರ್(Sanya Iyer) ಮತ್ತು ರೂಪೇಶ್ ಶೆಟ್ಟಿ(Roopesh Shetty) ಬೇರೆ ಬೇರೆಯಾಗಿದ್ದಾರೆ. ಆರನೇ ವಾರದ ಆರನೇ ಸ್ಪರ್ಧಿಯಾಗಿ ಸಾನ್ಯ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಸಾನ್ಯ ಎಲಿಮಿನೇಷನ್ ನಿಂದ ರೂಪೇಶ್ ಶೆಟ್ಟಿ ಗಳಗಳನೇ ಅತ್ತಿದ್ದಾರೆ.
ಓಟಿಟಿ ಸೀಸನ್ ನಿಂದ ಟಿವಿ ಬಿಗ್ ಬಾಸ್‌ವರೆಗೂ(Bigg Boss Kannada) ಮೋಡಿ ಮಾಡಿದ ಜೋಡಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಇದೀಗ ದೂರ ದೂರ ಆಗಿದ್ದಾರೆ. ಸಾನ್ಯ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಅದರಲ್ಲೂ ರೂಪೇಶ್‌ಗೆ ಮತ್ತಷ್ಟು ಶಾಕ್ ಆಗಿದೆ. ಇದೀಗ ಸಾನ್ಯ ನಿರ್ಗಮನದಿಂದ ರೂಪೇಶ್ ಕಣ್ಣೀರಿಟ್ಟಿದ್ದಾರೆ. ಸಾನ್ಯ ಮಡಿಲಿನಲ್ಲಿ ತಲೆಯಿಟ್ಟು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ನಿನ್ನ ನಾನು ತುಂಬ ಮಿಸ್ ಮಾಡಿಕೊಳ್ತೀನಿ. ನನ್ನೊಳಗಿನ ಫೀಲ್ ಬದಲಾಗಿದೆ. ಯಾವತ್ತೂ ಯಾವ ಹುಡುಗಿಗೂ ಇಷ್ಟೊಂದು ಸ್ಲೇಸ್ ಕೊಡುತ್ತೀನಿ ಎಂದುಕೊಂಡಿರಲಿಲ್ಲ. ನನಗೆ ನನ್ನ ಫ್ಯಾಮಿಲಿ ಬಗ್ಗೆ ಪ್ರೀತಿ ಬರುವಂತೆ ಮಾಡಿದ್ದೀಯಾ. ನನ್ನಲ್ಲಿ ಇಷ್ಟೊಂದು ಮೌಲ್ಯ ಬರುವಂತೆ ಮಾಡಿದ್ದಿಯಾ. ನಾನು ಜೀವನವನ್ನು ನೋಡುವ ವಿಧಾನ ಬದಲಾಗಿದೆ.
ಸ್ಪರ್ಧಿಯಾಗಿ ನೀನು ಇಲ್ಲಿ ಸೋತಿರುವೆ, ಆದರೆ ಮನುಷ್ಯಳಾಗಿ ನೀನು ಗೆದ್ದಿದ್ದೀಯಾ. ನೀನು ಮನೆಯಿಂದ ಹೊರಗಡೆ ಹೋದ ಮೇಲೆ ದಯವಿಟ್ಟು ಬದಲಾಗಬೇಡ, ನೀನು ಬದಲಾದರೆ ನಾನು ಬದಲಾಗಿರೋದಿಕ್ಕೆ ಮೌಲ್ಯವೇ ಇರೋದಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ತುಂಬ ಮುಖ್ಯ ಆಗಿದ್ದೆ, ನನ್ನ ಜೀವನದಲ್ಲಿ ಕೂಡ ಮುಖ್ಯ ಇರುತ್ತೀಯಾ. ನನ್ನ ಹೃದಯದಲ್ಲಿ ನೀನು ಯಾವಾಗಲೂ ಇರುತ್ತೀಯಾ. ಇದುವರೆಗೂ ನಾನು ಎರಡು ಬಾರಿ ಕಣ್ಣೀರು ಹಾಕಿದ್ದೀನಿ, ಅದು ನಿನ್ನ ವಿಚಾರಕ್ಕೆ ಎಂದು ರೂಪೇಶ್ ಶೆಟ್ಟಿ(Roopesh Shetty) ಅವರು ಸಾನ್ಯಾ ಅಯ್ಯರ್ ಬಳಿ ಹೇಳಿಕೊಂಡು ಅತ್ತಿದ್ದಾರೆ. ಇದನ್ನೂ ಓದಿ:ವಿದೇಶಿ ಪ್ರವಾಸದಲ್ಲಿ ಕಾಲು ಮುರಿದುಕೊಂಡ ತ್ರಿಶಾ – ಅಭಿಮಾನಿಗಳ ಎದೆಯಲ್ಲಿ ಢವಢವ
ನಾನು ನಿನಗೆ ಸಮಯ ಕೊಡಬೇಕಿತ್ತು. ಆಗಲಿಲ್ಲ, ನಿನಗೆ ನಾನು ಬೇಜಾರು ಮಾಡಿದ್ದರೆ ದಯವಿಟ್ಟು ಕ್ಷಮಿಸಿ. ಪ್ರತಿ ವಾರ ರೆಡ್ ಟೀ ಶರ್ಟ್ ಕಳಿಸು, ಅದರಲ್ಲಿ ಯೆಸ್ ಅಂತ ಇರಲಿ. ನಾನು ಯಾವತ್ತೂ ಅಳೋದಿಲ್ಲ. ಆದರೆ ನಿನಗೋಸ್ಕರ ಎರಡು ಬಾರಿ ಅತ್ತಿದ್ದೇನೆ. ಇದು ಯಾರಿಗೂ ಅರ್ಥವಾಗದೆ ಇರಬಹುದು, ಆದರೆ ನಿನಗೆ ಅರ್ಥವಾಗತ್ತೆ. ಇದು ನನ್ನ ಜೆನ್ಯೂನ್ ಫೀಲಿಂಗ್ ಎಂದು ರೂಪೇಶ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ಬಳಿಕ ರೂಪೇಶ್‌ಗಾಗಿ ಸಾನ್ಯ ರಚಿಸಿದ್ದ ಹಾಡನ್ನ ಹಾಡಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.