ಗದಗ: ಕಾಂಗ್ರೆಸ್ (Congress) ನವರಿಗೆ ಕೆಲಸ ಇಲ್ಲ, ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಅನೇಕ ಯಾತ್ರೆಗಳನ್ನ ಮಾಡ್ತಿದ್ದಾರೆ ಅಂತ ಕೃಷಿ ಸಚಿವ ಬಿ.ಸಿ ಪಾಟೀಲ್ (B.C Patil) ಹೇಳಿದರು.
- Advertisement 2-
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ತೋಡೋನೇ ಆಗಿಲ್ಲ, ಇನ್ನು ಜೋಡಿಸೋ ಪ್ರಶ್ನೆ ಎಲ್ಲಿದೆ ಅಂತ ಪ್ರಶ್ನೆ ಮಾಡಿದ್ರು. ನಮಗೆ ಕೆಲಸ ಇದೆ. ಆದರೆ ಕಾಂಗ್ರೆಸ್ ನವರಿಗೆ ಮಾಡೋಕೆ ಕೆಲಸ ಇಲ್ಲ. ಸುಮ್ಮನೆ ಜನರ ಗಮನ ಸೇಳೆಯೊಕೆ ಭಾರತ ಜೋಡೊ, ಇನ್ಯಾವುದೋ ಯಾತ್ರೆ ಮಾಡ್ತಿದ್ದಾರೆ. ಭಾರತ ಜೋಡೋ ಅದು ಸಿದ್ದರಾಮಯ್ಯ (Siddaramaiah), ಡಿಕೆಶಿ (DK Shivakumar) ಜೋಡಿಸುವ ಯಾತ್ರೆ ಆಗಿತ್ತು. ರಾಹುಲ್ ಗಾಂಧಿ (Rahul Gandhi) ಕರ್ನಾಟಕ ಬಿಟ್ಟು ಮಹಾರಾಷ್ಟ್ರಕ್ಕೆ ಹೋದ ಮೇಲೆ ಸಿದ್ದರಾಮಯ್ಯ, ಡಿಕೆಶಿ ಅವರವರ ಊರಿಗೆ ಅವರು ಹೋಗಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋದು ಹುಚ್ಚು ಕಲ್ಪನೆ: ಬಿ.ಸಿ ಪಾಟೀಲ್
- Advertisement 3-
- Advertisement 4-
ಈಗ ಟ್ರ್ಯಾಕ್ಟರ್ ಮೆರವಣಿಗೆ ಮಾಡ್ತೀನಿ ಅಂತಿದ್ದಾರೆ. ಮೊದಲು ಎತ್ತಿನ ಮೆರವಣಿಗೆ ಅಂದು ಒಂದುಸಾರಿ ಬಿದ್ದಾಗಿದೆ. ಸೈಕಲ್ ಅಂದ್ರು ಅದು ಪಂಚರ್ ಆಯಿತು. ಕಾಲು ನಡುಗೆ ಮಾಡಿ ಈಗ ಸುಸ್ತಾಗಿದ್ದಾರೆ. ಅದಕ್ಕೆ ಈಗ ಟ್ರಾಕ್ಟರ್ ರ‍್ಯಾಲಿ ಅಂತಿದ್ದಾರೆ. ಅವರಿಗೆ ಕೆಲಸ ಇಲ್ಲ, ನಿರುದೋಗಿಗಳಾಗಿದ್ದಾರೆ. ಅದಕ್ಕೆ ಮಾಡ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು. ಈ ವೇಳೆ ಬಿಜೆಪಿ ಮುಖಂಡ ಎಮ್.ಡಸ್ ಕರಿಗೌಡ್ರ, ರವೀಂದ್ರನಾಥ ದಂಡಿನ, ನಗರಸಭೆ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಪಕ್ಷದ ಅನೇಕರು ಉಪಸ್ಥಿತರಿದ್ದರು.