KPCC ಯಲ್ಲಿ ಭಿನ್ನಮತ ಸ್ಫೋಟ – ಪುಷ್ಪಾ ಅಮರನಾಥ್ ವಜಾಕ್ಕೆ ಆಗ್ರಹ

Public TV
2 Min Read
Dr Pushpa Amarnath

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ (Karnataka Mahila Congress) ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅಧ್ಯಕ್ಷರ ಸ್ಥಾನದಿಂದ ಡಾ.ಪುಷ್ಪಾ ಅಮರನಾಥ್ (Dr Pushpa Amarnath) ಅವರನ್ನು ಕೆಳಗಿಳಿಸುವಂತೆ ಮಹಿಳಾ ಕಾರ್ಯಕರ್ತರೇ ಆಗ್ರಹಿಸಿದ್ದಾರೆ.

ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ನಿವಾಸಕ್ಕೆ ಪುಷ್ಪಾ ಅಮರನಾಥ್ ವಿರುದ್ಧ ಪೋಸ್ಟರ್ ಹಿಡಿದು ಬಂದ ಮಹಿಳಾ ಕಾರ್ಯಕರ್ತರು ಅವರನ್ನು ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರಾಮಾಣಿಕರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

Dr Pushpa Amarnath 1

ಪುಷ್ಪಾ ಅಮರನಾಥ್ ಕೆಲ ದಿನಗಳ ಹಿಂದೆ ಏಕಾಏಕಿ ಜಿಲ್ಲಾ ಘಟಕಗಳ ಅಧ್ಯಕ್ಷರನ್ನ ಬದಲಾಯಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ (DK Shivakumar) ಅವರಿಗೂ ಈ ಬಗ್ಗೆ ಮಾಹಿತಿ ನೀಡಿಲ್ಲ. ಹಾಗಾಗಿ ಅವರನ್ನು ವಜಾಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂ ರೋಗಿಗೆ ಆಸ್ಪತ್ರೆಯಲ್ಲಿ ನೀಡಿದ್ದು ಮೂಸಂಬಿ ಜ್ಯೂಸ್‍ ಅಲ್ಲ, ಕಳಪೆ ಮಟ್ಟದ ಪ್ಲೇಟ್‌ಲೆಟ್‌ಗಳು: ಜಿಲ್ಲಾ ಮ್ಯಾಜಿಸ್ಟ್ರೇಟ್

Dr Pushpa Amarnath 2

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಇವತ್ತೇ ಈಗಲೇ ಕೆಪಿಸಿಸಿ ಅಧ್ಯಕ್ಷರ (KPCC President) ಬಳಿ ಮಾತನಾಡ್ತೇನೆ. ಎಲ್ಲ ಮಹಿಳೆಯರಿಗೂ ನಮಸ್ಕಾರ ಅಂದು ನಡೆದರು. ಈ ವೇಳೆ ಸಿದ್ದರಾಮಯ್ಯರನ್ನ ಮುತ್ತಿಕೊಂಡ 50ಕ್ಕೂ ಹೆಚ್ಚು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಕೆಲ ಕಾಲ ಒತ್ತಾಯಿಸಿದರು. ಇದನ್ನೂ ಓದಿ: ನಯನತಾರ ಬಾಡಿಗೆ ತಾಯಿ ವಿವಾದ ಸುಖಾಂತ್ಯ: ಸರಕಾರ ಸಲ್ಲಿಸಿದ ವರದಿಯಲ್ಲೇನಿದೆ?

Dr Pushpa Amarnath

20 ದಿನಗಳ ಹಿಂದೆಯಷ್ಟೇ 11 ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ಆಗಿತ್ತು. ಕಾಂಗ್ರೆಸ್ ಪದಾಧಿಕಾರಿಗಳು ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಯುತ್ತಿರುವುದರಿಂದ ಮಧ್ಯದಲ್ಲಿ ಬದಲಾವಣೆ ಬೇಡವೆಂದು ಮನವಿ ಮಾಡಿಕೊಂಡಿದ್ದರು. ಆಗ ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೆ ಕರೆ ಮಾಡಿ ಭಾರತ್ ಜೋಡೋ ಮುಗಿಯುವವರೆಗೆ ಬದಲಾವಣೆ ತಡೆ ಹಿಡಿಯಲು ಸೂಚನೆ ನೀಡಿದ್ದರು.

ಈಗ 11 ಜಿಲ್ಲಾಧ್ಯಕ್ಷರ ಬದಲಾವಣೆ ಮುಂದಾದ ಪುಷ್ಪ ಅಮರನಾಥ್ ವಿರುದ್ಧ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಆಕ್ರೋಶಗೊಂಡಿದ್ದಾರೆ. ಪುಷ್ಪ ಅಮರನಾಥ್ ರಾಜ್ಯಾಧ್ಯಕ್ಷರಾಗಿ 3 ವರ್ಷ ಆಗಿದೆ. ಅವರ ಅವಧಿಯೂ ಮುಗಿದಿದೆ. ಫೆಬ್ರವರಿಗೇ ಅವರ ಅವಧಿ ಮುಗಿದು 3 ವರ್ಷ ಆಗಿದೆ. ಅವರನ್ನೂ ಕೆಳಗಿಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *