CinemaKarnatakaLatestMain PostSandalwood

ನಯನತಾರ ಬಾಡಿಗೆ ತಾಯಿ ವಿವಾದ ಸುಖಾಂತ್ಯ: ಸರಕಾರ ಸಲ್ಲಿಸಿದ ವರದಿಯಲ್ಲೇನಿದೆ?

ಮಿಳಿನ ಸೂಪರ್ ಸ್ಟಾರ್ ನಟಿ ನಯನತಾರಾ (Nayantara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ದಂಪತಿ ಬಾಡಿಗೆ ತಾಯಿ ಪ್ರಕರಣ ಸಖತ್ ಸದ್ದು ಮಾಡಿತ್ತು. ಸರಕಾರ ರೂಪಿಸಿರುವ ನಿಯಮಗಳಂತೆ ಅವರು ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆದಿಲ್ಲ ಎಂದು ಆರೋಪಿಸಿ, ಸರಕಾರವು ತನಿಖೆಗೆ ಆದೇಶಿಸಿತ್ತು. ಇದೀಗ ತನಿಖಾ ತಂಡ ವರದಿ ನೀಡಿದ್ದು, ವರದಿ ನೋಡಿದ ಸ್ಟಾರ್ ದಂಪತಿಯು ನಿಟ್ಟುಸಿರಿಟ್ಟಿದ್ದಾರೆ.

ಬಾಡಿಗೆ ತಾಯಿಯಿಂದ (surrogate mother) ಮಗುವನ್ನು ಪಡೆಯಲು ತಮಿಳು ನಾಡು ಸರಕಾರವು ನಿಯಮಗಳನ್ನು ರೂಪಿಸಿದೆ. ಅದನ್ನು ನಯನತಾರ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿತ್ತು. ಹಾಗಾಗಿಯೇ ಸರಕಾರವು ತನಿಖೆಗೆ ಆದೇಶಿಸಿತ್ತು. ಮದುವೆಯಾದ ನಾಲ್ಕೇ ತಿಂಗಳಿಗೆ ಮಗುವನ್ನು ಪಡೆದ ಕಾರಣಕ್ಕಾಗಿ ಅನುಮಾನ ಕೂಡ ಮೂಡಿತ್ತು. ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದು, ಕುತೂಹಲ ಮೂಡಿಸುವಂತ ವರದಿಯನ್ನೇ ಕೊಟ್ಟಿದೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

ಚೆನ್ನೈನ ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಹಲವರನ್ನು ತನಿಖಾ ತಂಡ ವಿಚಾರಣೆ ನಡೆಸಿದೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಒಂದಷ್ಟು ಅಚ್ಚರಿಯ ಮಾಹಿತಿಯನ್ನೂ ಸರಕಾರಕ್ಕೆ ನೀಡಿದ್ದಾರೆ. ಬಾಡಿಗೆ ತಾಯಿಗೂ ಕೂಡ ಮದುವೆ ಆಗಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ. ಅಲ್ಲದೇ, 2021ರ ಆಗಸ್ಟ್ ನಲ್ಲಿ ಸರೋಗಸಿ ಪ್ರಕ್ರಿಯೆ ಒಪ್ಪಂದ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ನಯನತಾರಾ ಅವರ ಫ್ಯಾಮಿಲಿ ಡಾಕ್ಟರ್ ವಿದೇಶದಲ್ಲಿ ಇರುವುದರಿಂದ ಅವರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಸಮಿತಿಯು ವರದಿಯಲ್ಲಿ ತಿಳಿಸಿದೆ.

ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ 2016 ಮಾರ್ಚ್ 11 ರಂದು ಮದುವೆ ಆಗಿರುವುದಾಗಿ ಅಫಿಡವಿಟ್ ನಲ್ಲಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. 2022 ಜೂನ್ 9 ರಂದು ಸಾರ್ವಜನಿಕವಾಗಿ ಈ ಜೋಡಿ ಮದುವೆ ಆಗಿತ್ತು. ಮದುವೆ ವಿಚಾರ ಕೂಡ ಇದೀಗ ಭಾರೀ ಸದ್ದು ಮಾಡುತ್ತಿದೆ.

Live Tv

Leave a Reply

Your email address will not be published. Required fields are marked *

Back to top button