ಚಿಕ್ಕಬಳ್ಳಾಪುರ: ಮೊಣ ಕೈವರೆಗೂ (Hand) ತುಂಡರಿಸಿದ ರೀತಿಯಲ್ಲಿ ಅನಾಮಿಕನ ಕೈಯೊಂದು ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ರಾಮದೇವರಹಳ್ಳಿ ಬಳಿ ನಡೆದಿದೆ.
ರಾಮದೇವರಹಳ್ಳಿ ಪಕ್ಕದ ಗುಡ್ಡದ ಮೇಲಿನ ಮಣ್ಣಿನ ಗುಡ್ಡೆಯೊಂದರ ಬಳಿ ಅಪರಿಚಿತ ವ್ಯಕ್ತಿಯ ತುಂಡರಿಸಿರುವ ಕೈ ಪತ್ತೆಯಾಗಿದ್ದು, ಇದನ್ನು ಕಂಡ ಸ್ಥಳೀಯರು ದೊಡ್ಡಬೆಳವಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಎಸ್ಪಿ ಪುರುಷೋತ್ತಮ್ ಸೇರಿದಂತೆ ಸಿಪಿಐ ಹಾಗೂ ಎಸ್‍ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರಿಸುಮಾರು 50-60 ವರ್ಷದ ಪ್ರಾಯದ ವ್ಯಕ್ತಿಯ ತುಂಡರಿಸಿದ ಕೈ ಇದಾಗಿದ್ದು, ಪೊಲೀಸರಿಗೆ ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ. ಕೊಲೆ ಮಾಡಿ ಮೃತದೇಹವನ್ನು ಪೀಸ್ ಪೀಸ್ ಮಾಡಿ ಬಿಸಾಡಿದ್ದಾರಾ? ಇಲ್ಲ ಮೃತದೇಹದ ಕೈಯನ್ನ ನಾಯಿ ನರಿಗಳು ಏನಾದರೂ ತುಂಡರಿಸಿಕೊಂಡು ತಂದು ಹಾಕಿದ್ದವಾ? ಎಂಬ ಹಲವು ಅನುಮಾನಗಳು ಪೊಲೀಸರನ್ನು ಕಾಡತೊಡಗಿವೆ. ಇದನ್ನೂ ಓದಿ: ರೈಲು ಡಿಕ್ಕಿ ಹೊಡೆದು ಇಬ್ಬರು ಆರ್‌ಪಿಎಫ್ ಪೊಲೀಸರ ದುರ್ಮರಣ
ಸದ್ಯ ಸಿಕ್ಕಿರುವ ತುಂಡರಿಸಿದ ಕೈಯನ್ನು ಎಫ್‍ಎಸ್‍ಎಲ್ ವರದಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಪೊಲೀಸರು ಘಟನೆ ನಡೆದ ಸುತ್ತಮುತ್ತಲಿನ ಗ್ರಾಮಗಳ ಸ್ಮಶಾನಗಳಲ್ಲಿ ಏನಾದರೂ ಈ ಬಗ್ಗೆ ಕುರುಹುಗಳು ಸಿಗಬಹುದಾ ಎಂಬ ಹುಡುಕಾಟ ಸಹ ನಡೆಸಿದ್ದಾರೆ. ಸದ್ಯ ಅದೊಂದು ತುಂಡರಿಸಿದ ಕೈ ಹಿಂದೆ ಹಲವು ಅನುಮಾನದ ಪ್ರಶ್ನೆಗಳು ಕಾಡತೊಡಗಿದ್ದು, ಪೊಲೀಸರ ತನಿಖೆಯಿಂದ ಸತ್ಯ ಗೊತ್ತಾಗಬೇಕಿದೆ. ಇದನ್ನೂ ಓದಿ: ನ. 1ಕ್ಕೆ JDS ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ : ಕುಮಾರಸ್ವಾಮಿ