ನವದೆಹಲಿ: 5 ದಿನಗಳ ಹಿಂದಷ್ಟೇ ಭಾರತೀಯ ಸ್ಪರ್ಧಾ ಆಯೋಗ (CCI) ಟೆಕ್ ದೈತ್ಯ ಗೂಗಲ್‌ಗೆ (Google) ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ 1,337 ಕೋಟಿ ರೂ. ದಂಡವನ್ನು (Fine) ವಿಧಿಸಿತ್ತು. ಇದೀಗ ಸಿಸಿಐ ಇಂತಹುದೇ ಕಾರಣವನ್ನು ನೀಡಿ ಗೂಗಲ್‌ಗೆ ಮತ್ತೊಮ್ಮೆ ಭಾರೀ ಮೊತ್ತದ ದಂಡವನ್ನು ವಿಧಿಸಿದೆ.
ಪ್ಲೇ ಸ್ಟೋರ್ ನೀತಿಗಳಿಗೆ ಸಂಬಂಧಿಸಿದಂತೆ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಮಂಗಳವಾರ ಸಿಸಿಐ ಬರೋಬ್ಬರಿ 936.44 ಕೋಟಿ ರೂ. ದಂಡವನ್ನು ವಿಧಿಸಿದೆ. ಇದು 1 ವಾರದೊಳಗೆ ಗೂಗಲ್‌ಗೆ ಸಿಸಿಐ ವಿಧಿಸಿರುವ 2ನೇ ದಂಡವಾಗಿದೆ.
ಸ್ಮಾರ್ಟ್ ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳು ಹಾಗೂ ಪ್ರೋಗ್ರಾಂಗಳನ್ನು ಚಲಾಯಿಸಲು ಆಪರೇಟಿಂಗ್ ಸಿಸ್ಟಮ್‌ನ (OS) ಅಗತ್ಯವಿರುತ್ತದೆ. ಗೂಗಲ್ 2005ರಲ್ಲಿ ಸ್ವಾಧೀನಪಡಿಸಿಕೊಂಡ ಆಂಡ್ರಾಯ್ಡ್ (Android) ಕೂಡಾ ಅಂತಹುದೇ ಒಂದು ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಇದೀಗ ಸಿಸಿಐ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನ ಪರವಾನಗಿಗೆ ಸಂಬಂಧಿಸಿದಂತೆ ಗೂಗಲ್‌ನ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿದೆ. ಪ್ಲೇ ಸ್ಟೋರ್, ಗೂಗಲ್ ಸರ್ಚ್, ಗೂಗಲ್ ಕ್ರೋಮ್, ಯೂಟ್ಯೂಬ್‌ನಂತಹ ಗೂಗಲ್ ಸ್ವಾಮ್ಯದ ವಿವಿಧ ಮೊಬೈಲ್ ಅಪ್ಲಿಕೇಶನ್‌ಗಳಲ್ಲೂ ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ವಿಶ್ವದ ಅತ್ಯಂತ ಕೊಳಕು ಮನುಷ್ಯ ನಿಧನ
ಪ್ಲೇಸ್ಟೋರ್‌ನಲ್ಲಿ ಪಾವತಿ ಮಾಡಿದ ಆಪ್‌ಗಳಿಗಾಗಿ ಗೂಗಲ್ ತನ್ನದೇ ಆದ ಬಿಲ್ಲಿಂಗ್ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಆದರೆ ಇದು ಕಾನೂನು ಸಮ್ಮತವಲ್ಲದ ನಡವಳಿಕೆ. ಈ ಎಲ್ಲಾ ಅನ್ಯಾಯದ ವ್ಯಾಪಾರದ ಅಭ್ಯಾಸಗಳನ್ನು ನಿಲ್ಲಿಸುವಂತೆ ಹಾಗೂ ನಿರ್ದಿಷ್ಟ ಸಮಯದೊಳಗೆ ತನ್ನ ನಡಾವಳಿಯನ್ನು ಸರಿಪಡಿಸಿಕೊಳ್ಳುವಂತೆ ಗೂಗಲ್‌ಗೆ ಸಿಸಿಐ ನಿರ್ದೇಶಿಸಿದೆ.
ಆದರೆ ಗೂಗಲ್ ದಂಡ ವಿಧಿಸಿರುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕ್ರಮದಿಂದ ಭಾರತದ ಗ್ರಾಹಕರು ಹಾಗೂ ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕಂಪನಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಮೌಢ್ಯಕ್ಕೆ ಸೆಡ್ಡು – ಗ್ರಹಣ ವೇಳೆ ಬಾಳೆಹಣ್ಣು, ಚುರುಮುರಿ ಸೇವಿಸಿದ ಜನ