ಭೋಪಾಲ್: ಅಂದುಕೊಂಡಂತೆ ದೇಶದಲ್ಲಿ ಹಿಂದಿ ಶಿಕ್ಷಣ (Hindi Education) ಜಾರಿಯಾಗುತ್ತಿದ್ದು ಭಾನುವಾರ (ಅ.16 ರಂದು) 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ (Medical College) ಭಾಷಾಂತರಿಸಿದ ಎಂಬಿಬಿಎಸ್ (MBBS) ಪ್ರಥಮ ವರ್ಷದ ಹಿಂದಿ ಪುಸ್ತಕಗಳನ್ನು (Hindi TextBooks) ಬಿಡುಗಡೆಗೊಳಿಸಲಾಗುತ್ತಿದೆ.
ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು, ಎಂಬಿಬಿಎಸ್ (MBBS) ವಿಷಯಗಳಾದ ಅಂಗರಚನಾ ಶಾಸ್ತ್ರ, ಶರೀರ ಶಾಸ್ತ್ರ ಹಾಗೂ ಜೀವ ರಸಾಯನ ಶಾಸ್ತ್ರ ಹಿಂದಿ ಪುಸ್ತಕಗಳನ್ನು ಭೋಪಾಲ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಹಿಂದಿ ವೈದ್ಯಕೀಯ ಶಿಕ್ಷಣ ಆರಂಭವಾಗಲಿದೆ. ಇದನ್ನೂ ಓದಿ: ನ್ಯಾಯ ಸಿಗೋದು ವಿಳಂಬವಾಗ್ತಿರೋದೇ ಜನರಿಗೆ ಬಹುದೊಡ್ಡ ಸಮಸ್ಯೆ: ಮೋದಿ ವಿಷಾದ
- Advertisement
ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chouhan), ವೈದ್ಯಕೀಯ ಕೋರ್ಸ್ (Medical Course) ಅನ್ನು ಹಿಂದಿಯಲ್ಲಿ ಆರಂಭಿಸುವ ಮೂಲಕ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣವನ್ನು ಹಿಂದಿಯಲ್ಲಿ (Hindi Language) ಕಲಿಯಲು ಹಾಗೂ ಕಲಿಸಲು ಸಾಧ್ಯವಿಲ್ಲ ಎಂಬ ಗ್ರಹಿಕೆಯನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳ್ಳನಂತೆ ಬಂದು ಅಂಗಡಿಯಲ್ಲಿದ್ದ ಬಲ್ಬ್ ಕದ್ದ ಪೊಲೀಸ್- ವೀಡಿಯೋ ವೈರಲ್
- Advertisement
ಹಿಂದಿ ಮಾಧ್ಯಮದ ಶಿಕ್ಷಣದಿಂದಲೂ ಜೀವನದಲ್ಲಿ ಮುನ್ನಡೆಯಬಹುದು ಎಂಬ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಶಿಕ್ಷಣ ಮಾಧ್ಯಮ ಮಾತೃ ಭಾಷೆಯಲ್ಲಿರಬೇಕು ಎಂಬುದು ಪ್ರಧಾನಿ ಮೋದಿ (Naredra Modi) ಅವರ ಸಂಕಲ್ಪ. ಅಂತೆಯೇ ಈ ವರ್ಷ ಸಂಘಟಿತವಾಗಿ ಹಿಂದಿ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ವೈದ್ಯಕೀಯ ಕ್ಷೇತ್ರದ ತಜ್ಞರ ಕಾರ್ಯಪಡೆ, 97 ವೈದ್ಯಕೀಯ ಕಾಲೇಜು ಶಿಕ್ಷಕರು ಹಾಗೂ ತಜ್ಞರು 5,568 ಗಂಟೆಗಳಿಗೂ ಅಧಿಕ ಕಾಲ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, ಇಂಗ್ಲಿಷ್ ಪುಸ್ತಕಗಳ ಜೊತೆಗೆ ಹಿಂದಿ ಪುಸ್ತಕಗಳೂ ಕಾಲೇಜಿನಲ್ಲಿ ಲಭ್ಯವಿರುತ್ತವೆ. ಆದರೆ ತಾಂತ್ರಿಕ ಪದಗಳು ಇಂಗ್ಲಿಷ್‌ನಲ್ಲೇ ಉಳಿಯುತ್ತವೆ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ – ಪುಟಿನ್ ಸ್ಪಷ್ಟನೆ
ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸುವ ದೇಶದ ಮೊದಲ ರಾಜ್ಯ ಮಧ್ಯಪ್ರದೇಶವಾಗಲಿದೆ. ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಗಾಂಧಿ ವೈದ್ಯಕೀಯ ಕಾಲೇಜಿನಿಂದ ಪ್ರಾರಂಭವಾಗಲಿದೆ. ಪ್ರಸಕ್ತ ವರ್ಷದಿಂದಲೇ ಹಿಂದಿಯಲ್ಲಿ ಕಲಿಸಲಾಗುತ್ತದೆ ಎಂದು ಹೇಳಿದ್ದಾರೆ.