ಮಹಾರಾಷ್ಟ್ರದ ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ಅನುದಾನ: ಬೊಮ್ಮಾಯಿ

Public TV
2 Min Read
basavaraj bommai 6

ಬೆಳಗಾವಿ: ಕನ್ನೇರಿ ಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ರೂ. ನೀಡಿದ್ದು, ಕೆಲಸ ಪ್ರಾರಂಭ ಮಾಡಬೇಕು. ಮುಂಬರುವ ದಿನಗಳಲ್ಲಿ ಕರ್ನಾಟಕ ಭವನದೊಳಗಿನ (Karnataka Bhavan) ಕೆಲಸ ಕಾರ್ಯಕ್ಕೆ ಎರಡು ಕೋಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಭರವಸೆ ನೀಡಿದರು.

ಮಹಾರಾಷ್ಟ್ರದ (Maharashtra) ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮದೇ ಆದ ಆದರ್ಶ ಇಟ್ಟುಕೊಂಡು ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯನ್ನು ಕೊಲ್ಲಾಪುರದ ಕನ್ನೇರಿಮಠ ಮಾಡ್ತಿದೆ. ಹೀಗಾಗಿ ಕನ್ನೇರಿ ಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ಹಣವನ್ನು ಕೊಡಲಾಗುತ್ತಿದೆ ಎಂದು ಹೇಳಿದರು.

basavaraj bommai 3

ಇಂದು ಸಹೃದಯಿ ಸಂತರ ಸಮಾವೇಶ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಇಲ್ಲಿ ಪ್ರಥಮ ಬಾರಿ ಬರುತಿದ್ದೇನೆ, ಭಕ್ತಿ ಭಾವ ಕಾರ್ಯಕ್ರಮ, ಮಠದ ಸೇವೆಯನ್ನು ನೋಡಿದಾಗ ಇದು ಆದರ್ಶ ಮಠ ಅನಿಸುತ್ತದೆ. ಆದರ್ಶ ಮಠ ಆಗಲು ತನ್ನದೇ ಆದ ಆದರ್ಶ ಇರಬೇಕು. ತಮ್ಮದೇ ಆದ ಆದರ್ಶ ಇಟ್ಟುಕೊಂಡು ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯನ್ನು ಕನ್ನೇರಿಮಠ ಮಾಡುತ್ತಿದೆ ಎಂದರು.

ಬೇರೆ ದೇಶಕ್ಕೂ ನಮಗೂ ಇರುವ ವ್ಯತ್ಯಾಸ ನಮ್ಮ ಸಂಸ್ಕೃತಿ, ಸಂಸ್ಕಾರ. ಅದು ನಮ್ಮ ದೇಶದ ಮಠ ಮಂದಿರಗಳಲ್ಲಿ ಸಿಗುತ್ತದೆ. ನಾಗರಿಕತೆ ಮತ್ತು ಸಂಸ್ಕೃತಿ ಮಧ್ಯದ ವ್ಯತ್ಯಾಸ ಮರೆತಿದ್ದೇವೆ. ನಾಗರಿಕತೆಯನ್ನೇ ನಾವು ಸಂಸ್ಕೃತಿ ಅಂದುಕೊಂಡಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತ ಸಂಸ್ಕಾರ, ಸಂಸ್ಕೃತಿಯಿಂದ ಕೂಡಿದ ದೇಶ. ನಿರಂತರ ಭಕ್ತಿಯ ಚಳವಳಿ ಆದ ದೇಶ ಭಾರತ. ಇಲ್ಲಿ ಆಧ್ಯಾತ್ಮದ ಚಿಂತನೆ, ಆಧ್ಯಾತ್ಮರು ನಮ್ಮ ದೇಶದಲ್ಲಿ ಇದ್ದಾರೆ. ಕನ್ನೇರಿಮಠದ ದೊಡ್ಡ ಮಠ ಕರ್ನಾಟಕದಲ್ಲಿಯೂ ಸ್ಥಾಪನೆ ಮಾಡಬೇಕು. ಅದಕ್ಕೆ ಸಂಪೂರ್ಣ ಸಹಕಾರ, ಜಾಗ ಸರ್ಕಾರದ ವತಿಯಿಂದ ಒದಗಿಸುತ್ತೇವೆ.ಭೌತಿಕವಾಗಿ ಕೆಲಸ ಮಾಡಲು ಸಾಧ್ಯ. ಬೌದ್ಧಿಕವಾಗಿ ಮಾಡಲು ಗುರುಗಳು ಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಟಿಷರನ್ನ ದೇಶದಿಂದ ಓಡಿಸಿದ ಹಾಗೇ ಕಾಂಗ್ರೆಸ್‍ನವರನ್ನು ಓಡಿಸುತ್ತಿದ್ದಾರೆ: ಸುಧಾಕರ್

ನಮ್ಮ ರಾಜ್ಯದಲ್ಲಿ ಪುಣ್ಯಕೋಟಿ ಯೋಜನೆ ಮಾಡಿದ್ದೇವೆ. ನೂರು ಕೋಟಿ ರೂಪಾಯಿ ಇದೇ ತಿಂಗಳು ಕಲೆಕ್ಟ್ ಆಗ್ತಿದೆ. ಒಂದು ಲಕ್ಷ ಗೋವುಗಳನ್ನು ಜನರ ದುಡ್ಡಿನಿಂದ ರಕ್ಷಣೆ ಮಾಡಿದ್ದೇವೆ. ಎಕಾನಾಮಿ ಅಂದ್ರೆ ಹಣ ಅಲ್ಲ ದುಡಿಮೆ. ಈ ಮಠದಲ್ಲಿ ಇದು ಕಾರ್ಯಗತವಾಗುತ್ತಿದೆ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಮಾಡದಿದ್ದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣವಾಗುತ್ತಿತ್ತು: ಕಾಡಸಿದ್ದೇಶ್ವರ ಶ್ರೀ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *