Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೊತೆ ಜೊತೆಯಲಿ ಖ್ಯಾತಿಯ ದೇವ್‌ ನಟನೆಯ ʻಯೆಲ್ಲೋ ಗ್ಯಾಂಗ್ಸ್ʼ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಜೊತೆ ಜೊತೆಯಲಿ ಖ್ಯಾತಿಯ ದೇವ್‌ ನಟನೆಯ ʻಯೆಲ್ಲೋ ಗ್ಯಾಂಗ್ಸ್ʼ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್‌

Bengaluru City

ಜೊತೆ ಜೊತೆಯಲಿ ಖ್ಯಾತಿಯ ದೇವ್‌ ನಟನೆಯ ʻಯೆಲ್ಲೋ ಗ್ಯಾಂಗ್ಸ್ʼ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್‌

Public TV
Last updated: October 9, 2022 12:57 pm
Public TV
Share
3 Min Read
yellow gangs 2 1
SHARE

ಒಂದು ಕಡೆಯಿಂದ ಭರಪೂರ ಗೆಲುವುಗಳ ಮೂಲಕ ಕನ್ನಡ ಚಿತ್ರರಂಗ ಕಳೆಗಟ್ಟಿಕೊಂಡಿದೆ. ಅದರ ಜೊತೆ ಜೊತೆಗೇ ಚಿತ್ರರಂಗವನ್ನು ಮತ್ತಷ್ಟು ಕಳೆಗಟ್ಟಿಸುವಂಥಾ ಭಿನ್ನ ಪ್ರಯೋಗಗಳ ಚಿತ್ರಗಳೂ ಕೂಡಾ ಸದ್ದಿಲ್ಲದೆ ರೂಪುಗೊಂಡು ಬಿಡುಗಡೆಗೆ ತಯಾರಾಗಿ ನಿಂತಿವೆ. ಆ ಸಾಲಿನಲ್ಲಿ ಬಹುಮುಖ್ಯವಾಗಿ ಗುರುತಿಸಿಕೊಳ್ಳುವ ಚಿತ್ರ, ರವೀಂದ್ರ ಪರಮೇಶ್ವರಪ್ಪ (Ravindra Parameshwarappa) ನಿರ್ದೇಶನದಲ್ಲಿ ಮೂಡಿ ಬಂದಿರುವ ʻಯೆಲ್ಲೋ ಗ್ಯಾಂಗ್ಸ್ʼ(Yellow Gangs Film). ಈ ಶೀರ್ಷೀಕೆ ಕೇಳಿದರೇನೇ ಒಂದು ಚೌಕಟ್ಟಿನ ಕಥಾನಕದ ಸುಳಿವು ತಂತಾನೇ ಬಿಚ್ಚಿಕೊಳ್ಳುತ್ತೆ. ಆದರೆ, ನಿರ್ದೇಶಕರು ತೆರೆದಿಡುತ್ತಾ ಬಂದಿರುವ ಒಂದಷ್ಟು ಅಂಶಗಳು ಇದೊಂದು ಚೌಕಟ್ಟು ಮೀರಿದ, ಹೊಸಾ ಪ್ರಯೋಗಗಳನ್ನು ಹೊಂದಿರುವ ಅಪರೂಪದ ಚಿತ್ರ ಎಂಬುದನ್ನು ಖಾತರಿಯಾಗಿಸುತ್ತದೆ. ಹೀಗೆ ನಾನಾ ಬಗೆಯಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಈ ಸಿನಿಮಾದ ಬಿಡುಗಡೆಗೀಗ ಮುಹೂರ್ತ ನಿಗಧಿಯಾಗಿದೆ.

yellow gangs

ʻಯೆಲ್ಲೋ ಗ್ಯಾಂಗ್ಸ್ʼ ಇದೇ ನವೆಂಬರ್ 11ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ. ಈಗಾಗಲೇ ಒಂದಷ್ಟು ರೀತಿಯಲ್ಲಿ ಸದರಿ ಚಿತ್ರ ಪ್ರೇಕ್ಷಕರ ಚಿತ್ತ ಸೆಳೆದಿದೆ. ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಅತ್ಯಂತ ಭಿನ್ನ ನೆಲೆಯಲ್ಲಿ ʻಯೆಲ್ಲೋ ಗ್ಯಾಂಗ್ಸ್ʼ ಅನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಚೌಕಟ್ಟಿಗೂ ಒಳಗಾಗದೆ, ಪ್ರತೀ ಹಂತದಲ್ಲಿಯೂ ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡಿರುವ ಈ ಕಥಾನಕ ಒಂದು ಡ್ರಗ್ ಡೀಲ್(Drugs Deal) ಸುತ್ತಾ ತೆರೆದುಕೊಂಡು, ಕಾಳಧನ ಕೇಂದ್ರಿತವಾಗಿ ಚಲಿಸುವ ಅಪರೂಪದ ಕಥಾನಕವನ್ನೊಳಗೊಂಡಿದೆ. ಹಾಗಂತ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗು ಮತ್ತು ಹಿಂದಿಯಲ್ಲಿ ಕಾಂತಾರ: ರಿಲೀಸ್ ಡೇಟ್ ಫಿಕ್ಸ್

yellow gnags

ಡ್ರಗ್ಸ್ ಮತ್ತು ಕಾಸುಗಳ ಕೇಂದ್ರಿತವಾಗಿ ಬಿಚ್ಚಿಕೊಳ್ಳುವ ʻಯೆಲ್ಲೋ ಗ್ಯಾಂಗ್ಸ್ʼ ಕಥೆ, ನಂತರದಲ್ಲಿ ಸಂಬಂಧವಿಲ್ಲದವರನ್ನೂ ಬಳಸಿಕೊಂಡು ಸಾಗುತ್ತದೆ. ಆ ಯಾನದಲ್ಲಿ ಯಾರೂ ಊಹಿಸಿಕೊಳ್ಳಲಾಗದ ತಿರುವುಗಳೂ ಎದುರಾಗುತ್ತವೆ. ಪ್ರೇಕ್ಷಕರು ಒಂದು ದಿಕ್ಕಿನಲ್ಲಿ ಅಂದಾಜಿಸಿದರೆ, ಮತ್ಯಾವುದೋ ದಿಕ್ಕಿನಿಂದ ತೂರಿ ಬರುವ ಸಸ್ಪೆನ್ಸುಗಳು ನೋಡುಗರನ್ನೆಲ್ಲ ಥ್ರಿಲ್ ಆಗಿಸುವಂತಿವೆ ಎಂಬ ಭರವಸೆ ರವೀಂದ್ರ ಪರಮೇಶ್ವರಪ್ಪ ಅವರಲ್ಲಿದೆ. ಈ ಚಿತ್ರ ಕ್ರೈಂ ಥ್ರಿಲ್ಲರ್ ಮಾದರಿಯದ್ದೆಂದು ಹೇಳಬಹುದಾದರೂ, ಆ ಜಾನರಿನ ಸಿದ್ಧಸೂತ್ರಗಳ ಸೋಂಕಿಲ್ಲದಂತೆ ತಯಾರುಗೊಂಡಿದೆ. ಪ್ರೇಕ್ಷಕರನ್ನು ಪ್ರತೀ ಹಂತದಲ್ಲಿಯೂ ಕುತೂಹಲದ ಉತ್ತುಂಗಕ್ಕೇರಿಸುವಂತೆ ಒಟ್ಟಾರೆ ಚಿತ್ರ ಮೂಡಿ ಬಂದಿದೆಯಂತೆ.

yellow gangs 1

ಇದೊಂದು ರಾ ಕಥಾನಕವಾದ್ದರಿಂದ ಒಂದಿಡೀ ಚಿತ್ರವನ್ನು ಆ ಫೀಲ್‌ಗೆ ತಕ್ಕುದಾಗಿಯೇ ಚಿತ್ರೀಕರಣ ನಡೆಸಲಾಗಿದೆ. ಅದರೊಳಗಿನ ಪಾತ್ರಗಳು ನಮ್ಮ ನಡುವಿಂದಲೇ ಕದಲುತ್ತಿವೆಯೇನೋ ಎಂಬಂಥಾ ಭಾವ ಮೂಡಿಸುವಷ್ಟು ಶಕ್ತವಾಗಿ ಇಲ್ಲಿನ ದೃಷ್ಯಾವಳಿಗಳು ಮೂಡಿ ಬಂದಿವೆಯಂತೆ. ಈ ತಾಜಾತನ ಉಳಿಸಿಕೊಳ್ಳಲೆಂದೇ ಹ್ಯಾಂಡ್ ಹೆಲ್ಡ್ ತಂತ್ರಜ್ಞಾನದಲ್ಲಿ, ಸಾಕಷ್ಟು ಸವಾಲುಗಳನ್ನೆದುರಿಸಿ ʻಯೆಲ್ಲೋ ಗ್ಯಾಂಗ್ಸ್ʼ ಅನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ದೇವ್ ದೇವಯ್ಯ(Actor dev devaih), ಅರ್ಚನಾ ಕೊಟ್ಟಿಗೆ (Archana Kottige), ಬಲ ರಾಜ್ವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯ ರಂಗ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

yellow gangs 2

ಇನ್ನುಳಿದಂತೆ, ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ರೋಹಿತ್ ಸೋವರ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ವಿಭಿನ್ನ ಸ್ಟುಡಿಯೋಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳು ಜೊತೆಗೂಡಿ ಯೆಲ್ಲೋ ಗ್ಯಾಂಗ್ಸ್ ಅನ್ನು ನಿರ್ಮಾಣ ಮಾಡಿವೆ. ಮನೋಜ್ ಪಿ, ಜಿ.ಎಂ.ಆರ್ ಕುಮಾರ್(ಕೆವಿಜಿ), ಪ್ರವೀಣ್ ಡಿ.ಎಸ್ ಮತ್ತು ಜೆ.ಎನ್.ವಿ ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರಕ್ಕೆ ಹಣ ಹೂಡಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿಕೊಂಡಿರುವ ರವೀಂದ್ರ ಪರಮೇಶ್ವರಪ್ಪ ಯೆಲ್ಲೋ ಗ್ಯಾಂಗ್ಸ್ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್ ಕುಮಾರ್ ಜಿ ಈ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ.

Live Tv
[brid partner=56869869 player=32851 video=960834 autoplay=true]

TAGGED:ʻಯೆಲ್ಲೋ ಗ್ಯಾಂಗ್ಸ್ʼsandalwoodyellow gangs filmಅರ್ಚನಾ ಕೊಟ್ಟಿಗೆದೇವ್ ದೇವಯ್ಯರವೀಂದ್ರ ಪರಮೇಶ್ವರಪ್ಪ
Share This Article
Facebook Whatsapp Whatsapp Telegram

Cinema news

Dhruva Sarja Prem KD Ravichandran
ಅಣ್ತಮ್ಮ ಜೋಡೆತ್ತು ಕಣೋ ಹಾಡಿನ ಜೊತೆ ಕೆಡಿ ಸಿನಿಮಾ ರಿಲೀಸ್ ಡೇಟ್ ಔಟ್‌
Cinema Latest Sandalwood Top Stories
Bigg Boss Maalu
ಬಿಗ್‌ಬಾಸ್‌ ಮನೆಗೆ ಮಾಳು ಮಡದಿ ಎಂಟ್ರಿ  –  ಅಪ್ಪನಂತೆ ಹೇರ್‌ಕಟ್‌… ಮಕ್ಕಳೊಂದಿಗೆ ತರ್ಲೆ ಮಾಡಿದ ಗಿಲ್ಲಿ
Cinema Latest Top Stories TV Shows
bigg boss
ಕಾವ್ಯ ಮನೆಯವರಿಂದ ನಿಯಮ ಉಲ್ಲಂಘನೆ; ಹೊರ ಕಳಿಸಿದ್ರಾ ಬಿಗ್‌ ಬಾಸ್‌? – ಕಣ್ಣೀರಿಟ್ಟ ಕಾವ್ಯ
Cinema Latest Sandalwood Top Stories
kavya gilli
ಗಿಲ್ಲಿಯನ್ನ ಮಾತ್ರ ಬಿಟ್ಕೊಡ್ಬೇಡ: ಕಾವ್ಯಗೆ ಬುದ್ದಿವಾದ ಹೇಳಿದ ತಾಯಿ
Cinema Latest Sandalwood Top Stories

You Might Also Like

CRIME
Chikkaballapur

ಕಾಣೆಯಾಗಿದ್ದ ಕಾಲೇಜು ವಿದ್ಯಾರ್ಥಿ ಶವವಾಗಿ ಪತ್ತೆ – ಬಾಲಕಿ ಕುಟುಂಬದ ವಿರುದ್ಧ ಕೊಲೆ ಆರೋಪ

Public TV
By Public TV
5 minutes ago
Dinesh Gundurao 1
Bengaluru City

ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ, ಟೆಸ್ಟ್ ರಿಪೋರ್ಟ್ ಸೇಫ್ – ದಿನೇಶ್ ಗುಂಡೂರಾವ್

Public TV
By Public TV
5 minutes ago
Gaganashree 1
Bengaluru City

Chitradurga Bus Accident| ನಾನು, ರಕ್ಷಿತಾ ಜಿಗಿದು ಹೊರ ಬಂದ್ವಿ, ರಶ್ಮಿ ಒಳಗೆ ಸಿಲುಕಿದ್ರು: ದುರಂತದ ಭೀಕರತೆ ಬಿಚ್ಚಿಟ್ಟ ಗಗನಶ್ರೀ

Public TV
By Public TV
8 minutes ago
NAVYA
Crime

Chitradurga Bus Accident | ಸಜೀವ ದಹನಗೊಂಡ ನವ್ಯಾ ಮನೆಯಲ್ಲಿ ಮಡುಗಟ್ಟಿದ ಶೋಕ

Public TV
By Public TV
8 minutes ago
Mysuru Helium Cylinder Blast no need to worry Mahadevappa
Latest

ಸಲೀಂ ಹೊಟ್ಟೆಪಾಡಿಗಾಗಿ ಕೆಲಸ ಮಾಡ್ತಿದ್ದ, ಆತಂಕ ಪಡುವ ಅಗತ್ಯವಿಲ್ಲ: ಮಹದೇವಪ್ಪ

Public TV
By Public TV
19 minutes ago
delhi police gang rape case
Crime

ಅಪ್ರಾಪ್ತೆಗೆ ಬಲವಂತವಾಗಿ ಮದ್ಯ ಕುಡಿಸಿ ಗ್ಯಾಂಗ್‌ ರೇಪ್‌

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?