ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ

Public TV
2 Min Read
FotoJet 42

ನ್ನಡದ ಹೆಸರಾಂತ ನಿರ್ದೇಶಕ ಪವನ್ ಒಡೆಯರ್ (Pawan Wodeyar) ಇದೀಗ ಬಾಲಿವುಡ್ (Bollywood) ಗೆ ಹಾರಿದ್ದಾರೆ. ಸದ್ದಿಲ್ಲದೇ ನೋಟರಿ ಸಿನಿಮಾದ ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಬೆಂಗಾಲಿ ಮತ್ತು ಹಿಂದಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈ ಚಿತ್ರಕ್ಕೆ ಭಾರತದ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಸ್ರಾ (Geeta Basra) ನಾಯಕಿ ಎನ್ನುವುದು ವಿಶೇಷ. ಪರಂಬ್ರತಾ ಚಟ್ಟೋಪಾಧ್ಯಾಯ (Parambrata Chattopadhyay) ನಾಯಕ ನಟನಾಗಿ ನಟಿಸುತ್ತಿದ್ದು, ಈಗಾಗಲೇ ‘ಕಹಾನಿ’, ‘ಪರಿ’ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ಪರಂಬ್ರತಾ ಚಟ್ಟೋಪಾಧ್ಯಾಯ ನಟಿಸಿ ಗಮನ ಸೆಳೆದಿದ್ದಾರೆ.

FotoJet 3 19

ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಿನ್ನೆ ವಿಜಯದಶಮಿಯ ಶುಭ ದಿನದಂದು ಸಿನಿಮಾ ಸೆಟ್ಟೇರಿದ್ದು, ಈಗಾಗಲೇ ಚಿತ್ರೀಕರಣ ಆರಂಭವಾಗಿದೆ ಎಂದು ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ. ಭೋಪಾಲ್ ನಲ್ಲಿ 20 ದಿನಗಳ ಚಿತ್ರೀಕರಣ ನಂತರ ಮುಂಬೈನಲ್ಲಿ ‘ನೋಟರಿ’ (Notary) ಸಿನಿಮಾ ಚಿತ್ರೀಕರಣ ನಡೆಯಲಿದೆ.

FotoJet 2 29

ಚಿತ್ರದ ನಾಯಕ ಎಂದೂ ಕೂಡ ಸುಳ್ಳು ಹೇಳುವುದಿಲ್ಲ. ಇದು ಅವನ ಜೀವನದ ಸಿದ್ದಾಂತವಾಗಿರುತ್ತೆ. ಆದ್ರೆ ಕೆಲಸ ಮಾಡುವ ಕ್ಷೇತ್ರ ನಿತ್ಯ ಒಂದಿಲ್ಲೊಂದು ಸುಳ್ಳು ಹೇಳುವಂತ ಪರಿಸ್ಥಿತಿಯನ್ನು ತಂದೊಡ್ಡುತ್ತಿರುತ್ತೆ. ಅಂತಹ ಸಂದರ್ಭಗಳು ಎದುರಾದಾಗ ಆತ ಸುಳ್ಳು ಹೇಳದೇ ಅದನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಸುತ್ತ ಕಥೆ ಸುತ್ತಲಿದ್ದು, ಇಡೀ ಸಿನಿಮಾ ಹಾಸ್ಯಮಯವಾಗಿರುತ್ತೆ ಎಂದು ‘ನೋಟರಿ’ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಪವನ್ ಒಡೆಯರ್. ಇದನ್ನೂ ಓದಿ: ಜೋಗಿ ಪ್ರೇಮ್- ಧ್ರುವ ಸರ್ಜಾ ಚಿತ್ರದ ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಮೋಹನ್ ಲಾಲ್

FotoJet 1 33

ಪರಂ ಅವರು ಅಭಿನಯದಲ್ಲಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ನನ್ನ ಕಥೆಗೆ ಬಹಳ ಸೂಕ್ತ ವ್ಯಕ್ತಿ ಎನಿಸಿದರು. ಆದ್ರಿಂದಲೇ ಅವರ ಆಯ್ಕೆ ಸೂಕ್ತ ಎನಿಸಿ ಕಥೆ ಹೇಳಿದೆ ಅವರು ಕೂಡ ಕಥೆ ಕೇಳಿ ಇಷ್ಟ ಪಟ್ಟು ನಟಿಸಲು ಒಪ್ಪಿಕೊಂಡ್ರು ಎಂದು ಚಿತ್ರದ ನಾಯಕನ ಆಯ್ಕೆ ಬಗ್ಗೆ ಪವನ್ ಒಡೆಯರ್ ಮಾಹಿತಿ ಹಂಚಿಕೊಂಡಿದ್ದಾರೆ. ‘ನೋಟರಿ’ ಚಿತ್ರಕ್ಕೆ ಕಥೆ ಬರೆದು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು, ಪವನ್ ಒಡೆಯರ್ ಮತ್ತು ಮುಂಬೈ ಮೂಲದ ತಶಾ ಭಂಬ್ರಾ, ಸ್ಪರ್ಶ್ ಖೆಟರ್ ಪಾಲ್ ಚಿತ್ರಕಥೆ ಚಿತ್ರಕ್ಕಿದೆ. ವೈದಿ.ಎಸ್ ಕ್ಯಾಮೆರಾ ನಿರ್ದೇಶನ, ರೋಹಿತ್ ಕುಲಕರ್ಣಿ, ಮೌಸಿನ್ ಜಾವೇದ್ ಸಂಗೀತ  ನಿರ್ದೇಶನ ಚಿತ್ರಕ್ಕಿರಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *