ನವದೆಹಲಿ: ನೆಹರೂ-ಗಾಂಧಿ (Nehru-Gandhi) ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಪಕ್ಷ (Congress party) ಏನೂ ಅಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ (Digvijiaya Singh) ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನಕ್ಕೂ ಮುಂಚಿತವಾಗಿಯೇ ಮಾಧ್ಯಮದವರೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್ ಅವರು ನೆಹರೂ-ಗಾಂಧಿ ಕುಟುಂಬ ಇಲ್ಲದೇ ಹೋಗಿದ್ದರೆ ಕಾಂಗ್ರೆಸ್ ಶೂನ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮ ಸ್ನಾನದ ವೀಡಿಯೋ ಮಾಡಿದ್ದಾರೆ – ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಠಾಣೆ ಎದುರು ವಿದ್ಯಾರ್ಥಿನಿಯರ ಪ್ರತಿಭಟನೆ
ಕಾಂಗ್ರೆಸ್ ರಾಜ್ಯ ಘಟಕಗಳಲ್ಲಿನ ಇತ್ತೀಚಿನ ಬಿಕ್ಕಟ್ಟು ಕುರಿತಂತೆ ದಿಗ್ವಿಜಯ ಸಿಂಗ್ ಅವರು, ಈ ಪಕ್ಷದಲ್ಲಿ ಹಲವಾರು ಬಾರಿ ವಿಭಜನೆಗಳಾಗಿವೆ. ಆದರೂ ಶೇ.99ರಷ್ಟು ಕಾಂಗ್ರೆಸ್ಸಿಗರು ಸ್ವಾತಂತ್ರ್ಯಕ್ಕೂ ಮುನ್ನ ಮತ್ತು ಸ್ವಾತಂತ್ರ್ಯದ ನಂತರ ದೇಶಕ್ಕಾಗಿ ಸೇವೆ ಸಲ್ಲಿಸಿದ ಗಾಂಧಿ ಕುಟುಂಬವನ್ನು ಬೆಂಬಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಚಹರೆ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ದಿಗ್ವಿಜಯ ಸಿಂಗ್, ನೆಹರೂ-ಗಾಂಧಿ ಕುಟುಂಬ ಇಲ್ಲದಿದ್ದರೆ ಕಾಂಗ್ರೆಸ್‍ಗೆ ಯಾವುದೇ ಗುರುತಿರುತ್ತಿರಲಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: RSSನ ಕೂದಲನ್ನು ಸಹ ಮುಟ್ಟಲು ಸಾಧ್ಯವಿಲ್ಲ – ಸಿದ್ದರಾಮಯ್ಯಗೆ ಬಿ.ವೈ.ರಾಘವೇಂದ್ರ ತಿರುಗೇಟು