Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

2022ರಲ್ಲಿ ಭಾರತ ಆಡಿದ್ದು 27 ಟಿ20 ಪಂದ್ಯ – ಬುಮ್ರಾ ಆಡಿದ್ದು ಬರೀ 3 ಪಂದ್ಯ!

Public TV
Last updated: September 23, 2022 3:29 pm
Public TV
Share
2 Min Read
Jasprit Bumrah 1 1
SHARE

ಮುಂಬೈ: ಟೀಂ ಇಂಡಿಯಾ (Team India) 2022ರಲ್ಲಿ ಈವರೆಗೆ ಒಟ್ಟು 27 ಟಿ20 (T20) ಪಂದ್ಯವಾಡಿದೆ. ಆದರೆ ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಮಾತ್ರ ಆಡಿದ್ದು ಕೇವಲ ಮೂರೇ ಪಂದ್ಯ ಎಂಬುದು ಅಚ್ಚರಿಯ ಸಂಗತಿ.

ind vs aus 9

ಬುಮ್ರಾ ಸದ್ಯ ಟೀಂ ಇಂಡಿಯಾದಲ್ಲಿರುವ ಮ್ಯಾಚ್ ವಿನ್ನಿಂಗ್ ಬೌಲರ್. ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿಗಳ ವಿಕೆಟ್ ಬೇಟೆಯಾಡುವ ಬುಮ್ರಾ ಕಳೆದ ವರ್ಷ 2021ರ ಟಿ20 ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ಕಾಣಿಸಿಕೊಂಡಿದ್ದು, ಬಹಳ ಅಪರೂಪ. ಇದಕ್ಕೆ ಸಾಕ್ಷಿ ಎಂಬಂತೆ ಅಂಕಿಅಂಶಗಳು ಕೂಡ ಇದೇ ಸಾಕ್ಷಿ ನೀಡುತ್ತಿದೆ. 2022ರ ಅವಧಿಯಲ್ಲಿ ಭಾರತ ತಂಡ ಈವರೆಗೆ ಒಟ್ಟು 27 ಟಿ20 ಪಂದ್ಯವಾಡಿದೆ. ಆದರೆ ಈ ಪಂದ್ಯಗಳ ಪೈಕಿ ಬುಮ್ರಾ ಆಡಿದ್ದು ಕೇವಲ 3 ಪಂದ್ಯಗಳನ್ನು. ಇನ್ನುಳಿದ 24 ಪಂದ್ಯಗಳಿಂದ ಬುಮ್ರಾ ಹೊರಗುಳಿದಿದ್ದರು. ಇದನ್ನೂ ಓದಿ: IND Vs AUS ಟಿ20 ಸರಣಿಗೆ ಬೂಮ್ರಾ ವಾಪಸ್ – ಸರಣಿ ಉಳಿಸಿಕೊಳ್ಳುವ ತವಕದಲ್ಲಿ ರೋಹಿತ್ ಬಳಗ

Jasprit Bumrah 5

ಭಾರತ ಪ್ರಮುಖ ತಂಡಗಳ ನಡುವೆ ಟಿ20 ಸರಣಿ ಆಡಿದ್ದರೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಆ ಬಳಿಕ ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದರು. ಹಾಗಾಗಿ ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೂ ಮುನ್ನ ಭಾರತ ಪರ ಕಂಬ್ಯಾಕ್ ಮಾಡಬೇಕಾಗಿದೆ.

Bumrah is set to play his fourth T20I of 2022 tonight against AUS in Nagpur.#INDvsAUS #JaspritBumrah pic.twitter.com/hDceNJbuEG

— Dr. Cric Point ???? (@drcricpoint) September 23, 2022

2021ರ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಬೌಲರ್‌ಗಳ ಪೈಕಿ ಭುವನೇಶ್ವರ್ ಕುಮಾರ್ 26 ಪಂದ್ಯವಾಡಿದರೆ, ಹರ್ಷಲ್ ಪಟೇಲ್ 18, ಅವೇಶ್ ಖಾನ್ 15, ಅರ್ಶ್‌ದೀಪ್ ಸಿಂಗ್ 11, ದೀಪಕ್ ಚಹಾರ್ 7, ಉಮ್ರಾನ್ ಮಲಿಕ್ 3, ಮೊಹಮ್ಮದ್ ಸಿರಾಜ್ 2 ಮತ್ತು ಶಾರ್ದೂಲ್ ಠಾಕೂರ್ 1 ಪಂದ್ಯವನ್ನಾಡಿದ್ದಾರೆ. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ T20: ಟಿಕೆಟ್‍ಗಾಗಿ ಮುಗಿಬಿದ್ದ ಜನ – ಲಾಠಿ ಚಾರ್ಜ್, ನಾಲ್ವರಿಗೆ ಗಾಯ

ಟೀಂ ಇಂಡಿಯಾ ಪರ ವೇಗದ ಬೌಲರ್‌ಗಳು ಭರವಸೆ ಮೂಡಿಸಿದ್ದರೂ ಡೆತ್ ಓವರ್‌ಗಳಲ್ಲಿ ದುಬಾರಿಯಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಹಾಗಾಗಿ ಬುಮ್ರಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬುಮ್ರಾ ಡೆತ್ ಓವರ್‌ಗಳಲ್ಲಿ ರನ್ ಕಂಟ್ರೋಲ್ ಜೊತೆಗೆ ವಿಕೆಟ್ ಬೇಟೆಯಾಡುವ ಬೌಲರ್. ಹಾಗಾಗಿ ಇದೀಗ ಟಿ20 ವಿಶ್ವಕಪ್ ಹತ್ತಿರ ಇರುವಂತೆ ಬುಮ್ರಾ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದೀಗ ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಿಂದ ಬುಮ್ರಾ ಹೊರಗುಳಿದಿದ್ದರು. ತಂಡದಲ್ಲಿದ್ದರೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಮೊದಲ ಟಿ20 ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಕಲೆ ಹಾಕಿದ್ದರೂ ಸೋತಿತ್ತು. ಹಾಗಾಗಿ 2ನೇ ಟಿ20 ಪಂದ್ಯದಲ್ಲಿ ಬುಮ್ರಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಟಿ20 ವಿಶ್ವಕಪ್‍ಗೂ ಮುನ್ನ ಬುಮ್ರಾ ವಾಪಸ್ಸಾತಿ ಕುತೂಹಲ ಮೂಡಿಸಿದೆ.

Live Tv
[brid partner=56869869 player=32851 video=960834 autoplay=true]

TAGGED:bcciindiajasprit bumrahT20 World CupTeam indiaಜಸ್‍ಪ್ರೀತ್ ಬುಮ್ರಾಟಿ20 ವಿಶ್ವಕಪ್ಟೀಂ ಇಂಡಿಯಾ
Share This Article
Facebook Whatsapp Whatsapp Telegram

You Might Also Like

Koppal nava brindavana
Districts

ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

Public TV
By Public TV
13 minutes ago
WTC SA 3
Cricket

ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

Public TV
By Public TV
17 minutes ago
Chikkodi Crime
Belgaum

ಅಣ್ಣ ಶ್ರೀಮಂತ ಆಗ್ಬಿಟ್ಟ ಅಂತ ತಮ್ಮ ಮಾಡಿದ್ದೆಂತ ನೀಚ ಕೆಲ್ಸ ಗೊತ್ತಾ? – ಹಂತಕ ಸಿಕ್ಕಿಬಿದ್ದಿದ್ದೇ ರೋಚಕ!

Public TV
By Public TV
20 minutes ago
Untitled 1 copy
Latest

11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!

Public TV
By Public TV
49 minutes ago
Mallikarjun Kharge
Latest

ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ

Public TV
By Public TV
49 minutes ago
Indian Embassy Israel
Latest

ಇಸ್ರೇಲ್ – ಇರಾನ್ ಸಂಘರ್ಷ | 24×7 ಸಹಾಯವಾಣಿ ಆರಂಭಿಸಿದ ಭಾರತ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?