ಲಕ್ನೋ: ಬಾಲಕನೋರ್ವ ಲಿಫ್ಟ್‌ನೊಳಗೆ ಎರಡೂವರೆ ಗಂಟೆಗಳ ಕಾಲ ಸಿಕ್ಕಿಬಿದ್ದ ಘಟನೆ ಗುರುಗ್ರಾಮದ(Gurugram) ಪಿರಮಿಡ್ ಅರ್ಬನ್ ಹೋಮ್ಸ್‌ನಲ್ಲಿ ನಡೆದಿದೆ.
ಆರವ್(6) ಎಂಬಾತ ರಾತ್ರಿ 8 ಗಂಟೆ ಸುಮಾರಿಗೆ ಪಾರ್ಕ್‍ಗೆ ಆಟವಾಡಲು ಹೋಗಿದ್ದ. ಆದರೆ ತುಂಬಾ ಸಮಯವಾದರೂ ಪಾರ್ಕ್‍ನಿಂದ ಮನೆಗೆ ಬರದದ್ದನ್ನು ಗಮನಿಸಿದ ಆರವ್ ಪೋಷಕರು(Parents) ಅವನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆ ಸಂದರ್ಭದಲ್ಲಿ ಆರವ್ ಮೂರನೇ ಮಹಡಿಯಲ್ಲಿ ಲಿಫ್ಟ್‌ನಲ್ಲಿ(Lift) ಸಿಕ್ಕಿಬಿದ್ದಿರುವುದು ತಿಳಿದಿದೆ.
ಇದಾದ ಬಳಿಕ ಸೊಸೈಟಿಯ ತಾಂತ್ರಿಕ ಸಿಬ್ಬಂದಿ ಎರಡೂವರೆ ಗಂಟೆಗಳ ಕಾಲ ಸಿಕ್ಕಿಬಿದ್ದಿದ್ದ ಆರವ್‍ನನ್ನು ರಕ್ಷಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಸಿಕ್ಕಿಬಿದ್ದಿದ್ದ ಆರವ್ ಭಯಗೊಂಡು ಜೋರಾಗಿ ಅಳುತ್ತಿದ್ದನು. ಆತನನ್ನು ಸಮಾಧಾನಗೊಳಿಸಿದ್ದಾರೆ. ಘಟನೆಗೆ ಭದ್ರತಾ ಸಿಬ್ಬಂದಿಯ(Security Guards) ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಿಮ್ಸ್ ಸರಣಿ ಸಾವು ಪ್ರಕರಣ – ಸತ್ತವರು ನಾಲ್ವರಲ್ಲ, ಇಬ್ಬರು ಮಾತ್ರ: ಸುಧಾಕರ್
ಘಟನೆಗೆ ಸಂಬಂಧಿಸಿ ಆರವ್ ತಂದೆ ರಾಹುಲ್ ಯಾದವ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇದುವರೆಗೆ ಬಿಲ್ಡರ್, ಸೊಸೈಟಿಯಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಅಥವಾ ನಿರ್ಲಕ್ಷ್ಯಕ್ಕೆ ಕಾರಣವಾದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನನಗೆ ಪಕ್ಷ ಮುಖ್ಯ, ಸಣ್ಣ ವಿಚಾರ ದೊಡ್ಡದು ಮಾಡೋದು ಬೇಡ: ಆರ್.ವಿ.ದೇಶಪಾಂಡೆ